ಕಾರ್ಕಳದಲ್ಲಿ ಬಂಡೆಗೆ ಡಿಕ್ಕಿಯಾದ ಬಸ್ಸು – 9 ಪ್ರವಾಸಿಗರು ಸಾವು

ಕಾರ್ಕಳದಲ್ಲಿ ಬಂಡೆಗೆ ಡಿಕ್ಕಿಯಾದ ಬಸ್ಸು – 9 ಪ್ರವಾಸಿಗರು ಸಾವು

ಕಾರ್ಕಳ: ಕಾರ್ಕಳ ಸಮೀಪದ ಮುಳ್ನೂರು ಘಾಟ್ ಬಳಿ ಶನಿವಾರ ಸಂಜೆ ನಡೆದ ಭೀಕರ ಅಫಘಾತದಲ್ಲಿ ಟೂರಿಸ್ಟ್ ಬಸ್ಸೊಂದು ಬಂಡೆಗೆ ಡಿಕ್ಕಿ ಹೊಡೆದು 9 ಮಂದಿ ಸಾವನಪ್ಪಿದ ಘಟನೆ ನಡೆದಿದೆ.

ಮೃತರು ಮೈಸೂರಿನ ಜೆಸಿಕೆ ಇಂಡಸ್ಟ್ರಿಯಲ್ ಏರಿಯಾದ ವೈಟಲ್ ರೆಕಾರ್ಡ್ಸ್‌ ಪ್ರೈವೇಟ್‌ ಕಂಪನಿಯ ಉದ್ಯೋಗಿಗಳು. ಇವರೆಲ್ಲ ಖಾಸಗಿ ಬಸ್‌ನಲ್ಲಿ ಪ್ರವಾಸಕ್ಕೆ ಬಂದಿದ್ದರು. ಮೃತರಲ್ಲಿ ಮೂವರು ಮಹಿಳೆಯರು, 6 ಪುರುಷರು ಸೇರಿದ್ದಾರೆ. ಐವರು ಖಾಸಗಿ ಕಂಪನಿಯವರಾಗಿದ್ದರೆ, ನಾಲ್ವರು ಬಿಬಿ ಟ್ರಾವೆಲ್ಸ್‌ನ ಸಿಬ್ಬಂದಿ ಎಂದು ತಿಳಿದುಬಂದಿದೆ.

ಅಪಘಾತ ಸುದ್ದಿ ತಿಳಿಯುತ್ತಿದ್ದಂತೆ ಧಾವಿಸಿದ ಆಂಬುಲೆನ್ಸ್‌ಗಳು ಹಾಗೂ ವೈದ್ಯರ ತಂಡ ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಕಾರ್ಕಳದ ತಾಲ್ಲೂಕು ಆಸ್ಪತ್ರೆ, ಕೆಎಂಸಿ ಹಾಗೂ ಉಡುಪಿಯ ಸಿಟಿ ಆಸ್ಪತ್ರೆಗಳಿಗೆ ಗಾಯಾಳುಗಳನ್ನು ಕರೆತರಲಾಯಿತು. ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವು ನೀಡಿದರು.