ಕಾರ್ಕಳ : ಚಾಲನಕನ ಅಜಾಗರುಕತೆ – ತೋಡಿಗೆ ಉರುಳಿದ ಖಾಸಗಿ ಬಸ್ಸು, ಇಪ್ಪತ್ತು ವಿದ್ಯಾರ್ಥಿಗಳಿಗೆ ಗಾಯ

Spread the love

ಕಾರ್ಕಳ: ಕಾಲೇಜು ವಿದ್ಯಾರ್ಥಿಗಳನ್ನು ಹೊಂದಿದ್ದ ಖಾಸಗಿ ಬಸ್ಸೊಂದು ಗುಂಡ್ಯಡ್ಕ ಸಮೀಪ ರಸ್ತೆ ಪಕ್ಕದ ತೋಡಿಗೆ ಉರುಳಿಬಿದ್ದ ಪರಿಣಾಮ ಕಾಲೇಜ್ ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.

busovertournedkarkala 21-07-2015 12-20-025 busovertournedkarkala 21-07-2015 12-20-24

ಕಾರ್ಕಳ ಬಿಬಿಎಂ ಕಾಲೇಜೊಂದರ 20 ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಕೊಂಡೊಯ್ಯುತ್ತಿದ್ದ ಖಾಸಗಿ ಬಸ್ಸು ಗುಂಡ್ಯಡ್ಕ ಬಳಿ ರಸ್ತೆಯ ತಿರುವಿನಲ್ಲಿ ಅಜಾಗರುಕತೆಯಿಂದ ಬಸ್ಸು ಚಲಾಯಿಸಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ತೋಡಿಗೆ ಉರುಳಿತು. ಬಸ್ಸಿನಲ್ಲಿದ್ದ 16 ಮಂದಿ ಯುವತಿಯರು ಹಾಗೂ 3 ಮಂದಿ ಯುವಕರು ಚಿಕ್ಕ ಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿ ಬಿಡುಗಡೆಗೊಂಡಿದ್ದು ಒರ್ವ ವಿದ್ಯಾರ್ಥಿನಿಗೆ ಹೆಚ್ಚಿನ ಗಾಯಗಳಾಗಿದ್ದು ಒಳರೋಗಿಯಾಗಿ ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಕಾರ್ಕಳ ನಗರ ಠಾಣೆಯ ಪೋಲಿಸರು ತಿಳಿಸಿದ್ದಾರೆ.

ಕಾರ್ಕಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.


Spread the love