ಕಾರ್ಕಳ ಮಾಜಿ ಶಾಸಕ ಗೋಪಾಲ್ ಭಂಡಾರಿ ಹೃದಯಾಘಾತದಿಂದ ನಿಧನ 

ಕಾರ್ಕಳ ಮಾಜಿ ಶಾಸಕ ಗೋಪಾಲ್ ಭಂಡಾರಿ ಹೃದಯಾಘಾತದಿಂದ ನಿಧನ 

ಕಾರ್ಕಳ: ಕಾರ್ಕಳದ ಮಾಜಿ ಶಾಸಕ ಗೋಪಾಲ ಭಂಡಾರಿಯವರು ಹೃದಯಾಘಾತದಿಂದ ಗುರುವಾರ ಸಂಜೆ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು.

ಬೆಂಗಳೂರಿನಿಂದ ಗುರುವಾರ ಮಧ್ಯಾಹ್ನ 2 ಗಂಟೆಗೆ ಹೊರಟಿದ್ದ ಕೆಎಸ್ ಆರ್ ಟಿಸಿ ಬಸ್ಸಿನಲ್ಲಿದ್ದ ಭಂಡಾರಿಯವರು ಮಂಗಳೂರಿನ ಬಸ್ ನಿಲ್ದಾಣ ತಲುಪಿದ ನಂತರವೂ ಇಳಿಯದ್ದನ್ನು ಕಂಡು ಬಸ್ಸಿನ ನಿರ್ವಾಹಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅದಾಗಲೇ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು.

ಕಾರ್ಕಳದಲ್ಲಿ ಎರಡು ಬಾರಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿದ್ದ ಭಂಡಾರಿ ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ವಿರುದ್ಧ ಸೋಲು ಕಂಡಿದ್ದರು

ಮಾಜಿ ಸಿಎಂ ವೀರಪ್ಲ ಮೊಯ್ಲಿ ಆಪ್ತರಾಗಿದ್ದ ಗೋಪಾಲ ಭಂಡಾರಿ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ 1999ರಲ್ಲಿ ಕಾಂಗ್ರೆಸ್ ನ ಎಚ್. ಗೋಪಾಲ ಭಂಡಾರಿ ಕಣಕ್ಕಿಳಿದು ಗೆಲುವು ಪಡೆದಿದ್ದರು.

2004ರಲ್ಲಿ ಚುನಾವಣೆಯಲ್ಲಿ ವಿ. ಸುನಿಲ್ ಕುಮಾರ್ ಎದರು ಗೋಪಾಲ್ ಭಂಡಾರಿಗೆ ಸೋಲು ಕಂಡರೆ 2008ರಲ್ಲಿ ಮತ್ತೆ ಗೋಪಾಲ್ ಭಂಡಾರಿ  ಸುಮಾರು ಒಂದು ಸಾವಿರ ಮತಗಳಿಂದ ಸುನಿಲ್ ಕುಮಾರ್ ಎದುರು ಗೆಲುವು ಪಡೆದಿದ್ದರು. 2013ರ ಚುನಾವಣೆಯಲ್ಲಿ 4,254 ಮತಗಳ‌ ಅಂತರದಲ್ಲಿ ಗೋಪಾಲ‌ ಭಂಡಾರಿ ಸೋಲು ಕಂಡಿದ್ದರು.

ಮೃತ ಭಂಡಾರಿಯವರು ಪತ್ನಿ ಪ್ರಕಾಶಿನಿ, ಮಗಳು ದೀಪಾ, ಅಳಿಯ ಶ್ವೇತ, ಸೊಸೆ ಅಕ್ಷತಾ ಪ್ರದೀಪ್ ಭಂಡಾರಿ, ಮಗ ಸುದೀಪ್ ಭಂಡಾರಿ, ಪ್ರದೀಪ್ ಭಂಡಾರಿ ಸಹೋದರ ಎಚ್ ರಾಜೇಶ್ ಭಂಡಾರಿಯನ್ನು ಅಗಲಿದ್ದಾರೆ.