ಕಾರ್ಕಳ: ಮುಂಬೈ ಹೋಟೆಲ್ ಉದ್ಯಮಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

Spread the love

ಕಾರ್ಕಳ: ಮುಂಬೈ ಹೋಟೆಲ್ ಉದ್ಯಮಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ಕಾರ್ಕಳ: ಮುಂಬೈ ಹೋಟೆಲ್ ಉದ್ಯಮಿಯೋರ್ವರು ಮನೆಯಲ್ಲಿದ್ದ ನಾಡಕೋವಿಯಿಂದ ಗುಂಡು ಹಾರಿಸಿಕೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ಹಿರ್ಗಾನದಲ್ಲಿ ಭಾನುವಾರ ನಡೆದಿದೆ.

ಮೃತ ವ್ಯಕ್ತಿಯನ್ನು ಕಾರ್ಕಳ ಹಿರ್ಗಾನ ದ ಕೃಷ್ಣ ಬೆಟ್ಟು ನಿವಾಸಿ ಸುನಿಲ್ ಶೆಟ್ಟಿ (45) ಎಂದು ಗುರುತಿಸಲಾಗಿದೆ.

ಮೃತ ಸುನೀಲ್ ಶೆಟ್ಟಿ ಪೂನಾದಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದು ಇತ್ತೀಚೆಗೆ ವ್ಯಾಪಾರದಲ್ಲಿ ವಿಪರೀತ ನಷ್ಟ ಅನುಭವಿಸಿ ಖಿನ್ನತೆಗೆ ಒಳಗಾಗಿದ್ದು ಊರಿನಲ್ಲಿದ್ದರು. ಆರ್ಥಿಕ ಮುಗ್ಗಟ್ಟಿನಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಸುನೀಲ್ ಅವರು ತಮ್ಮ ಮನೆಯಲ್ಲಿದ್ದ ನಾಡ ಕೋವಿಯಿಂದ ತಲೆಗೆ ಗುಂಡು ಸಿಡಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.


Spread the love