ಕಾವ್ಯಾ ಮನೆಗೆ ಸಚಿವ ರಮಾನಾಥ ರೈ ಮತ್ತು ಶಾಸಕಿ ಶಕುಂತಳಾ ಶೆಟ್ಟಿ ಭೇಟಿ – ಸಾಂತ್ವಾನ

Spread the love

ಕಾವ್ಯಾ ಮನೆಗೆ ಸಚಿವ ರಮಾನಾಥ ರೈ ಮತ್ತು ಶಾಸಕಿ ಶಕುಂತಳಾ ಶೆಟ್ಟಿ ಭೇಟಿ – ಸಾಂತ್ವಾನ

ಮೂಡಬಿದರೆ: ಇತ್ತೀಚಿಗೆ ಅಸಹಜ ಸಾವಿಗೀಡಾದ ಆಳ್ವಾಸ್ ಕಾಲೇಜಿನ ವಿದ್ಯಾಥಿ೯ನಿ ಕಾವ್ಯಾ ಮನೆಗೆ ಅರಣ್ಯ, ಪರಿಸರ ಖಾತೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ  ಭಾನುವಾರ ಭೇಟಿ ನೀಡಿದರು. ಕಾವ್ಯಾ ಹೆತ್ತವರೊಂದಿಗೆ ಮಾತನಾಡಿದ  ಸಚಿವರು ಅವರನ್ನು ಸಂತೈಸಿದರು.

ಬಳಿಕ ಸಚಿವರು ಮಾತನಾಡಿ, ಈ ಪ್ರಕರಣದಲ್ಲಿ ಕೆಲವೊಂದು ಸಂಶಯಗಳು ಕಾವ್ಯಾ ಮನೆಯವರಲ್ಲಿದೆ. ಇದರ ಸತ್ಯಾಸತ್ಯತೆಗಳು ಹೊರಗೆ ಬರಬೇಕೆಂದು ಅವರು ಅಪೇಕ್ಷಿಸಿದ್ದಾರೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಪ್ರಾಮಾಣಿಕವಾಗಿ ತನಿಖೆ ನಡೆಸಲಿದೆ ಎಂದು ಹೇಳಿದರು.

 ಕಾವ್ಯಾ ಉತ್ತಮ ಕ್ರೀಡಾಪಟು ಆಗಿದ್ದು, ಈ ನಿಟ್ಟಿನಲ್ಲಿ ಅವಳ ಕುಟುಂಬಕ್ಕೆ ರಾಜ್ಯ ಸರಕಾರ ಗರಿಷ್ಟ ನೆರವು ನೀಡಲಿದೆ ಎಂದು ಸಚಿವ ರಮಾನಾಥ ರೈ ತಿಳಿಸಿದರು.

 ಸಚಿವರೊಂದಿಗೆ ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ,  ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ಸ್ಥಳೀಯ ಮುಖಂಡರು ಇದ್ದರು.


Spread the love