ಕಾವ್ಯ ಆತ್ಮಹತ್ಯೆ ಪ್ರಕರಣ ನಿಷ್ಪಕ್ಷಪಾತ ತನಿಖೆಗೆ ಬಿರುವೆರ್ ಕುಡ್ಲ ಆಗ್ರಹ

Spread the love

ಕಾವ್ಯ ಆತ್ಮಹತ್ಯೆ ಪ್ರಕರಣ ನಿಷ್ಪಕ್ಷಪಾತ ತನಿಖೆಗೆ ಬಿರುವೆರ್ ಕುಡ್ಲ ಆಗ್ರಹ

ಮಂಗಳೂರು: ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯ ಪೂಜಾರಿಯ ಅಸಹಜ ಸಾವಿನ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಫ್ರೆಂಡ್ಸ್ ಬಲ್ಲಾಳ್ ಬಾಗ್ -ಬಿರುವೆರ್ ಕುಡ್ಲ ಆಗ್ರಹಿಸಿದೆ.

ಶನಿವಾರ ನಗರದ ಹೋಟೆಲಿನಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಬಿರುವೆರ್ ಕುಡ್ಲದ ಸದಸ್ಯ ಸಂಕೇತ್, ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಇ ಇದು ಮೊದಲು ನಡೆದ ಅಸಹಜ ಸಾವಲ್ಲ, ಈ ಹಿಂದೆಯೂ ಕೂಡ ಇಂತಹ ಪ್ರಕರಣ ನಡೆದಿದೆ. ಇಂತಹ ಪ್ರಕರಣಗಳಿಗೆ ಕೊನೆ ಹಾಡಬೇಕಾಗಿದೆ. ಆಳ್ವಾಸ್ ಆಡಳಿತ ಮಂಡಳಿ ಇದಕ್ಕೆ ಸೂಕ್ತ ಸ್ಪಷ್ಟನೆ ನೀಡಬೇಕು. ನಮಗೆ ಸ್ಥಳೀಯ ಪೋಲಿಸರ ತನಿಖೆಯಲ್ಲಿ ನಂಬಿಕೆ ಇಲ್ಲ ಆದ್ದರಿಂದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಅವರು ಹೇಳಿದರು.

ಸಂಕೇತ್ ಮಾತನಾಡಿ ಜುಲೈ 20 ರಂದು ಕಾವ್ಯ ನೇಣು ಬಿಗಿದ ರೀತಿಯಲ್ಲಿ ಆಕೆಯ ಕೋಣೆಯಲ್ಲಿ ಪತ್ತೆಯಾಗಿದ್ದಳು. ಜುಲೈ 19 ರಂದು ಆಕೆಯ ಹೆತ್ತವರೊಂದಿಗೆ ಫೋನಿನಲ್ಲಿ ಮಾತನಾಡಿದ್ದು, ಆ ವೇಳೆ ಆಕೆ ಸಂತೋಷದಿಂದಲೇ ಮಾತನಾಡಿದ್ದು ಯಾವುದೇ ರೀತಿಯ ಖಿನ್ನತೆ ಲಕ್ಷಣಗಳು ಆಕೆಯ ಮಾತಿನಲ್ಲಿ ಕಂಡು ಬಂದಿರಲಿಲ್ಲ. ದೈಹಿಕ ಶಿಕ್ಷಣ ಶಿಕ್ಷಕರು ಬೆಳಿಗ್ಗೆ 4.30 ಕ್ಕೆ ತರಬೇತಿಗೆ ಕರೆದಿದ್ದಾರೆ ಎಂದು ಆಕೆಯ ತಾಯಿಯೊಂದಿಗೆ ಹೇಳಿಕೊಂಡಿದ್ದಳು ಆದರೆ ಜುಲೈ 20 ರಂದು ಆಕೆ ಟ್ರ್ಯಾಕ್ ಸೂಟಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೂಡಬಿದ್ರೆ ಪೋಲಿಸರ ಪ್ರಕಾರ ಆಕೆ ಹಿಂದಿ ಭಾಷೆಯಲ್ಲಿ ಕಡಿಮೆ ಅಂಕ ಪಡೆದಿರುವುದರ ಪರಿಣಾಮ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳೀದ್ದಾರೆ ಆದರೆ ಆಕೆ ಕ್ರೀಡಾಪಟು ಹಾಗೂ ಧೈರ್ಯವಂತೆಯಾಗಿದ್ದಳು, ಕಡಿಮೆ ಅಂಕದ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದರು.

ಕಾವ್ಯ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಕುರಿತು ರಾತ್ರಿ 8 ಗಂಟೆಗೆ ಆಕೆಯ ಹೆತ್ತವರಿಗೆ ಮಾಹಿತಿ ನೀಡಿದ್ದು, ಕೇವಲ 45 ನಿಮಿಷಗಳಲ್ಲಿ ಆಕೆಯ ಹೆತ್ತವರು ಸ್ಥಳಕ್ಕೆ ಬಂದಿದ್ದಾರೆ. ಅವರು ಬರುವ ಒಳಗೆ ದೇಹವನ್ನು ನೇಣಿನಿಂದ ಇಳಿಸಿ ಪೋಸ್ಟ್ ಮಾರ್ಟಮ್ ಮಾಡಲು ಕಳುಹಿಸಲಾಗಿತ್ತು. ಹೆತ್ತವರಿಗೆ ಆಕೆಯ ದೇಹವನ್ನು ಕೂಡ ನೋಡಲು ಬಿಟ್ಟಿಲ್ಲ. ಆಳ್ವಾಸ್ ಸಂಸ್ಥೆಯಲ್ಲಿ ಅತ್ಯಾಧುನಿಕವಾದ ಸಿಸಿಟಿವಿ ಕ್ಯಾಮಾರಾಗಳನ್ನು ಕ್ಯಾಂಪಸ್ ಸುತ್ತ ಅಳವಡಿಸಲಾಗಿದೆ. ಅದರಲ್ಲಿನ ದೃಶ್ಯಾವಳೀಗಳು ಸಾರ್ವಜನಿಕರಿಗೆ ತೋರಿಸಬೇಕು ಎಂದು ಅವರು ಆಗ್ರಹಿಸಿದರು.

ಇನ್ನೋರ್ವ ಸದಸ್ಯೆ ಸಹನಾ ಪೂಜಾರಿ ಮಾತನಾಡಿ ನಾವು ಆಳ್ವಾಸ್ ಸಂಸ್ಥೆಯ ಅಧ್ಯಕ್ಷರನ್ನು ದೂರುತ್ತಿಲ್ಲ ಅವರ ಕುರಿತು ಅಪಾರ ಅಭಿಮಾನ ಮತ್ತು ಗೌರವವನ್ನು ಹೊಂದಿದ್ದೇವೆ. ನಮಗೆ ಕಾವ್ಯಳ ಅತ್ಮಹತ್ಯೆ ಪ್ರಕರಣದ ತನಿಖೆಗೆ ಅವರುಗಳ ಸಹಕಾರ ಬೇಕು. ಸಂಸ್ಥೆಯ ಅಧ್ಯಕ್ಷರು ಯಾರನ್ನೂ ಕೂಡ ರಕ್ಷಿಸುವ ಕೆಲಸ ಮಾಡಬಾರದು ಎಂದರು.


Spread the love