ಕಾಶ್ಮೀರದಲ್ಲಿ ಯೋಧರ ಹತ್ಯೆ: ಅಮಾನವೀಯ ಕೃತ್ಯ – ಯು.ಟಿ ಖಾದರ್

Spread the love

ಕಾಶ್ಮೀರದಲ್ಲಿ ಯೋಧರ ಹತ್ಯೆ: ಅಮಾನವೀಯ ಕೃತ್ಯ – ಯು.ಟಿ ಖಾದರ್

ಕಾಶ್ಮೀರದಲ್ಲಿ ನಮ್ಮ ದೇಶದ ಸೈನಿಕರ ಮೇಲೆ ನಡೆದಿರುವ ಉಗ್ರ ದಾಳಿಯನ್ನು ತೀವ್ರವಾಗಿ ಖಂಡಿಸುವುದಲ್ಲದೇ, ಇದೊಂದು ಅಮಾನವೀಯ ಹಾಗೂ ಹೇಯ ಕೃತ್ಯ ಎಂದು ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ ಖಾದರ್ ಪ್ರತಿಕ್ರಿಯಿಸಿದ್ದಾರೆ.

ಈ ಉಗ್ರರ ಕೃತ್ಯಕ್ಕೆ ತೀರುಗೇಟು ನೀಡಬೇಕೆಂದ ಅವರು ಕೇಂದ್ರ ಸರಕಾರದ ಜೊತೆ ಈ ಸಂದರ್ಭದಲ್ಲಿ ನಾವಿದ್ದೇವೆ, ಮೃತ ಸೈನಿಕರ ಕುಟುಂಬಕ್ಕೆ ಅವರ ಅಗಲಿಕೆಯನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love