ಕುಂದಾಪುರದಲ್ಲಿ ಆಶಾ ಕಾರ್ಯಕರ್ತೆಯ ಕರ್ತವ್ಯಕ್ಕೆ ಅಡ್ಡಿ – ಪ್ರಕರಣ ದಾಖಲು

Spread the love

ಕುಂದಾಪುರದಲ್ಲಿ ಆಶಾ ಕಾರ್ಯಕರ್ತೆಯ ಕರ್ತವ್ಯಕ್ಕೆ ಅಡ್ಡಿ – ಪ್ರಕರಣ ದಾಖಲು

ಕುಂದಾಪುರ: ಆಶಾ ಕಾರ್ಯಕರ್ತೆಯೋರ್ವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಬೀಜಾಡಿ ಗ್ರಾಮದ ಇಬ್ಬರು ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಾಗಿದೆ.

ಬೀಜಾಡಿಯ ಅನಂತ ಕಾಮತ್ ಮತ್ತು ಗೀತಾ ಎಂಬವರಿಂದ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆಶಾ ಕಾರ್ಯಕರ್ತೆ ಸರೋಜಾ ಎಂಬವರು ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸರೋಜಾ ಆರೋಗ್ಯ ಇಲಾಖೆಯಲ್ಲಿ ಆಶಾ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು ಸುಮಾರು 2 ತಿಂಗಳಿಂದ ಕೋವಿಡ್-19 ಕೊರೋನ ವೈರಸ್ ತಡೆ ಬಗ್ಗೆ ಕರ್ತವ್ಯದಲ್ಲಿದ್ದು ಗುರುವಾರ ಬೀಜಾಡಿ ವಾರ್ಡಿನಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿರುವಾಗ ಬೆಳಿಗ್ಗೆ 11:30 ಗಂಟೆಗೆ ಬೀಜಾಡಿ ಗ್ರಾಮದ ಪಿಶರೀಸ್ ರಸ್ತೆಯಲ್ಲಿ ಅನಂತ ಕಾಮತ್ ಮತ್ತುಆತನ ಹೆಂಡತಿ ಗೀತಾರವರು ಸರೋಜರಾರನ್ನು ಅಡ್ಡಗಟ್ಟಿ ಪದೇ ಪದೇ ನಮ್ಮ ಮನೆ ಕಡೆಗೆ ಯಾಕೆ ಬರುತ್ತೀಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು ಕೈಯಲ್ಲಿದ್ದ ದಾಖಲೆಗಳನ್ನು ಬಲಬಂತವಾಗಿ ಎಳೆದು ಬಿಸಾಡಿದ್ದಾರೆ ಎಂದು ಸರೋಜಾ ಆರೋಪಿಸಿದ್ದಾರೆ.

ಸರೋಜಾ ಅವರ ದೂರಿನಂತೆ ಕುಂದಾಪುರ ನಗರ ಠಾಣೆಯಲ್ಲಿ ಕಲಂ:341 504, 354, 353, 506, 188, 269 ಜೊತೆಗೆ 34 ಐಪಿಸಿ & ಕಲಂ 51 The Disaster Management Act-2005 ನಂತೆ ಪ್ರಕರಣ ದಾಖಲಿಸಲಾಗಿದೆ.


Spread the love