ಕುಂದಾಪುರ: ಡಿವೈಡರ್ ಗೆ ಸ್ಕೂಟಿ ಡಿಕ್ಕಿ : ಸವಾರ ಸಾವು

Spread the love

ಕುಂದಾಪುರ: ಡಿವೈಡರ್ ಗೆ ಸ್ಕೂಟಿ ಡಿಕ್ಕಿ : ಸವಾರ ಸಾವು

ಕುಂದಾಪುರ: ರಾಷ್ಟ್ರೀಯ ಹೆದ್ದಾರಿಯಲ್ಲಿ ತಲ್ಲೂರಿನ ಹೇರಿಕುದ್ರು ಸೇತುವೆ ಬಳಿ ಸೋಮವಾರ ಚಾಲಕನ ನಿಯಂತ್ರಣ ತಪ್ಪಿದ ಸ್ಕೂಟಿ ಡಿವೈಡರ್ಗೆ ಢಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೂಲತಃ ಬೈಂದೂರು ಸಮೀಪದ ನಾಗೂರಿನ ಹಾಗೂ ಪ್ರಸ್ತುತ ಕುಂದಾಪುರ ನಿವಾಸಿಯಾಗಿದ್ದ ಮುಹಮ್ಮದ್ ಫರ್ವೇಝ್ (37) ಮೃತಪಟ್ಟವರು.

ಅವರು ಮುಂಜಾನೆ ಹೆಮ್ಮಾಡಿಯಿಂದ ಕುಂದಾಪುರಕ್ಕೆ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದು ಉತ್ತಮ ಕ್ರೀಡಾಪಟುವಾಗಿದ್ದರು. ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.

ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love