ಕುಂದಾಪುರ: ಭಾರಿ ಮಳೆಯಿಂದಾಗಿ ಗ್ರಾಮೀಣ ಭಾಗದ ವಾಸ್ತವ್ಯದ ಮನೆಗಳಿಗೆ ಹಾನಿ

Spread the love

ಕುಂದಾಪುರ: ಭಾರಿ ಮಳೆಯಿಂದಾಗಿ ಗ್ರಾಮೀಣ ಭಾಗದ ವಾಸ್ತವ್ಯದ ಮನೆಗಳಿಗೆ ಹಾನಿ

ಕುಂದಾಪುರ: ತಾಲೂಕಿನಲ್ಲಿ ಬುಧವಾರ ಸುರಿದ ಭಾರಿ ಮಳೆಯಿಂದಾಗಿ ಗ್ರಾಮೀಣ ಭಾಗದ ಹಲವು ಕಡೆ ವಾಸ್ತವ್ಯದ ಮನೆಗಳಿಗೆ ಹಾನಿಯಾಗಿದೆ.

ತಾಲ್ಲೂಕಿನ ಕನ್ಯಾನ ಗ್ರಾಮದ ಸರೋಜ ಅವರ ವಾಸ್ತವ್ಯದ ಮನೆಗೆವ ಹಾನಿಯಾಗಿದ್ದು 10,000 ರೂಪಾಯಿ ನಷ್ಟ ಅಂದಾಜಿಸಲಾಗಿದೆ. ಆಲೂರು ಗ್ರಾಮದ ವಿಜಯ್ ಶೆಟ್ಟಿ ಅವರ ವಾಸ್ತವ್ಯದ ಮನೆಗೆ ಭಾಗಶಃ ಹಾನಿಯಾಗಿದ್ದು 10,000 ರೂಪಾಯಿ ನಷ್ಟ ಅಂದಾಜಿಸಲಾಗಿದೆ. ಆಲೂರು ಗ್ರಾಮದ ಸುಗಂಧಿ ಶೆಡ್ತಿಯವರ ಮನೆಗೆ ಹಾನಿಯಾಗಿದ್ದು 8,000 ರೂಪಾಯಿ ನಷ್ಟ ಅಂದಾಜಿಸಲಾಗಿದೆ. ಬೀಜಾಡಿ ಗ್ರಾಮದ ಶಾಂತರವರ ಮನೆ ಭಾಗಶಃ ಹಾನಿಯಾಗಿದ್ದು 50,000 ರೂಪಾಯಿ ನಷ್ಟ ಅಂದಾಜಿಸಲಾಗಿದೆ.

ಗುರುವಾರ ಸಂಜೆಯವರೆಗೆ ವಿಶ್ರಾಂತಿ ಪಡೆದುಕೊಂಡಿದ್ದ ಮಳೆ, ಸಂಜೆಯ ಬಳಿಕ ಮತ್ತೆ ಪ್ರಾರಂಭವಾಗಿದೆ. ನದಿಪಾತ್ರಗಳ ತೀರ ಪ್ರದೇಶಗಳಲ್ಲಿ ನೆರೆಯ ಆತಂಕ ಮುಂದುವರೆದಿದೆ. ನೆರೆ ಬರುವ ಸಾಧ್ಯತೆ ಇರುವ ಪ್ರದೇಶಗಳಿಗೆ ಕಂದಾಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.


Spread the love