ಕುಂದಾಪುರ: ರಸ್ತೆ ಅಪಘಾತದಲ್ಲಿ ಉದ್ಯಾವರ ಐಸಿವೈಎಮ್ ಅಧ್ಯಕ್ಷ ಮೃತ್ಯು

Spread the love

ಕುಂದಾಪುರ: ರಸ್ತೆ ಅಪಘಾತದಲ್ಲಿ ಉದ್ಯಾವರ ಐಸಿವೈಎಮ್ ಅಧ್ಯಕ್ಷ ಮೃತ್ಯು

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66 ರ ಕೋಟೇಶ್ವರದ ಬಳಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ಬುಧವಾರ ತಡರಾತ್ರಿ ಸಂಭವಿಸಿದೆ.

ಮೃತ ಯುವಕನನ್ನು ಅಪಘಾತದಲ್ಲಿ ಉದ್ಯಾವರ ಸಂಪಿಗೆನಗರದ ನಿವಾಸಿ ರೊಬರ್ಟ್ ಕ್ಯಾಸ್ಟಲಿನೋ ಅವರ ಪುತ್ರ ಜೋಯಿಸ್ಟನ್ ಕ್ಯಾಸ್ಟಲಿನೋ(22) ಎಂದು ಗುರುತಿಸಲಾಗಿದೆ. ಮೃತ ಜೋಯ್ಸ್ಟನ್ ಕ್ಯಾಸ್ತಲಿನೋ ಉದ್ಯಾವರದ ಭಾರತೀಯ ಕಥೊಲಿಕ ಯುವ ಸಂಘಟನೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಮಾಹಿತಿಗಳ ಪ್ರಕಾರ ಜೋಯ್ಸ್ಟನ್ ಮತ್ತವರ ಸಹಪಾಠಿಗಳು ಕುಂದಾಪುರದಲ್ಲಿ ನಡೆದ ಕಾರ್ಯಕ್ರಮವೊಂದನ್ನು ಮುಗಿಸಿ ತಮ್ಮ ಫಿಗೋ ಕಾರಿನಲ್ಲಿ ಉಡುಪಿಗೆ ವಾಪಾಸಾಗುತ್ತಿದ್ದ ವೇಳೆ ಕೋಟೇಶ್ವರದ ಬಳಿ ಕೆಟ್ಟು ನಿಂತಿದ್ದ ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಜೊಯ್ಸ್ಟನ್ ಮೃತಪಟ್ಟಿದ್ದ ಕಾರಿನಲ್ಲಿದ್ದ ಲೆಸ್ಟನ್ ಪಿಂಟೋ(22), ಜಸ್ಟಿನ್ ಕರ್ಡೊಜ (22), ವಿಲ್ಸನ್ ಮಾರ್ಟಿಸ್(23), ಗ್ಲಾಡ್ಸನ್ ಡಿಸಿಲ್ವ (23)ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love