ಕುಂದಾಪುರ: ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರ ಮನೆ ಮೇಲೆ ಲೋಕಾಯುಕ್ತ ದಾಳಿ

Spread the love

ಕುಂದಾಪುರ: ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರ ಮನೆ ಮೇಲೆ ಲೋಕಾಯುಕ್ತ ದಾಳಿ

ಕುಂದಾಪುರ: ನಗರದ ಸಲೀಂ ಅಲಿ ರಸ್ತೆಯ ನಿವಾಸಿ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ರಾಜೇಶ್ ಬೆಳ್ಕೆರೆ ಮನೆ ಮೇಲೆ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ದಾಳಿ ನಡೆದಿದೆ.

ರಾಜೇಶ್ ಬೆಳ್ಕೆರೆಗೆ ಸಂಬಂಧಪಟ್ಟಂತೆ ಮೂರು ಕಡೆ ತಪಾಸಣೆ ನಡೆಸಲಾಗುತ್ತಿದೆ. ಸೋಮವಾರ ಬೆಳಿಗ್ಗೆ ಕುಂದಾಪುರದ ಸಲೀಂ ಅಲಿ ರಸ್ತೆಯಲ್ಲಿರುವ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ರಾಜೇಶ್ ಬೆಳ್ಕೆರೆ ಹಲವು ವರ್ಷದಿಂದ ಕುಂದಾಪುರದಲ್ಲಿ ನೆಲೆಸಿದ್ದಾರೆ. ಏಕಕಾಲದಲ್ಲಿ ಈ ದಾಳಿ ನಡೆದಿದ್ದು ಉಡುಪಿಯಲ್ಲಿರುವ ಕಚೇರಿ ಹಾಗೂ ಅಂಕೋಲದಲ್ಲಿರುವ ಮನೆಯಲ್ಲಿ ತಪಾಸಣೆ ನಡೆಯುತ್ತಿದೆ.


Spread the love