ಕುಡಿದ ಮತ್ತಿನಲ್ಲಿ  ಅತ್ತೆಗೆ ಥಳಿಸಿದ ಯುವಕ: ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್

Spread the love

ಕುಡಿದ ಮತ್ತಿನಲ್ಲಿ  ಅತ್ತೆಗೆ ಥಳಿಸಿದ ಯುವಕ: ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್

ಬೆಳ್ತಂಗಡಿ: ಕುಡಿದ ಮತ್ತಿನಲ್ಲಿ ತನ್ನ ಅತ್ತೆಗೆ ಯುವಕನೋರ್ವ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ವೇಣೂರಿನ ಜಂತಿಗೋಳಿಸ ಸಮೀಪದ ನಿವಾಸಿ ಹೇಮಂತ್ (24) ಎಂಬಾತನೇ ಅಮಾನವೀಯವಾಗಿ ವರ್ತಿಸಿದ ಯುವಕ.

ಈತ ಅಮಾನುಷವಾಗಿ ತನ್ನ ಅತ್ತೆಗೆ  ಹಲ್ಲೆ ನಡೆಸುತ್ತಿರುವ ದೃಶ್ಯವನ್ನು ಪಕ್ಕದ ಮನೆಯವರು ಚಿತ್ರೀಕರಿಸಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇಟ್ಟಿಗೆ ಪ್ಯಾಕ್ಟರಿ ವಿರುದ್ದ ಸಹಿ ಸಂಗ್ರಹಕ್ಕೆ ಅತ್ತೆ ಸಹಿ ಹಾಕಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡು ಅತ್ತೆಗೆ ಥಳಿಸಿದ್ದಾನೆ. ಬೆಲ್ಟ್  ಮತ್ತು ಕಾಲಿನಿಂದ ಒದ್ದು, ಕೆಳಗೆ ಬೀಳಿಸಿ ಅತ್ತೆಗೆ ಹಲ್ಲೆ ನಡೆಸಿದ್ದಾನೆ. ಕಂಠಪೂರ್ತಿ ಕುಡಿದಿದ್ದ ಈತನ ಕೃತ್ಯ ಮೊಬೈಲ್ ನಲ್ಲಿ ಸೆರೆಯಾಗಿ ವೈರಲ್ ಆಗಿದೆ.

ವೇಣೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ.


Spread the love