ಕುಡುಪು ದೇವಳದಲ್ಲಿ ನಾಗರ ಪಂಚಮಿ ಆಚರಣೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿ – ಸ್ಪಷ್ಟನೆ

Spread the love

ಕುಡುಪು ದೇವಳದಲ್ಲಿ ನಾಗರ ಪಂಚಮಿ ಆಚರಣೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿ – ಸ್ಪಷ್ಟನೆ

ಮಂಗಳೂರು: ಕುಡುಪು ದೇವಸ್ಥಾನದ ಬಗ್ಗೆ ನಾಗರಪಂಚಮಿ ಆಚರಣೆಯ ಕುರಿತಂತೆ  ಪ್ರಕಟಣೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇಂತಹ ಯಾವುದೇ ಪ್ರಕಟಣೆ ದೇವಸ್ಥಾನದಿಂದ ನೀಡಿರುವುದಿಲ್ಲ ಎಂದು ಮುಜರಾಯಿ ಅಧಿಕಾರಿಗಳು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ  ಶ್ರೀ ಕ್ಷೇತ್ರದಲ್ಲಿ ಪ್ರತೀ ವರ್ಷ ಆಚರಿಸುವ “ನಾಗರ ಪಂಚಮಿ” ಪುಣ್ಯ ದಿನದಂದು, ಹೆಚ್ಚಿನ ಸಂಖ್ಯೆಯಲ್ಲಿ  ರಂದು ಶನಿವಾರ ಭಕ್ತಾದಿಗಳು ಬರುವುದರಿಂದ ಈ ವರ್ಷ ದಿನಾಂಕ ಜುಲೈ 25 ರಂದು ಶನಿವಾರ  ನಾಗರ ಪಂಚಮಿ  ದಿನದಂದು, ಕೋವಿಡ್-19 (ಕೊರೊನಾ ವೈರಾಣು) ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಭಕ್ತಾಧಿಗಳಿಂದ ಸಾಮಾಜಿಕ ಅಂತರವನ್ನು ಕಾಪಾಡುವುದು ಕಷ್ಟಕರವಾಗಿರುವುದರಿಂದ, ಸದ್ರಿ ನಾಗರ ಪಂಚಮಿ ದಿನದಂದು (25.07.2020) ಭಕ್ತಾಧಿಗಳಿಗೆ ಶ್ರೀ ಕ್ಷೇತ್ರಕ್ಕೆ ಭೇಟಿಯನ್ನು ನಿರ್ಭಂಧಿಸಲಾಗಿದೆ.

 ಸದ್ರಿ ನಾಗರ ಪಂಚಮಿ ದಿನದಂದು (25.07.2020) ದೇವಾಲಯದಲ್ಲಿ ಯಾವುದೇ ಸೇವೆಗಳು, ಸೇವಾ ಪ್ರಸಾದ ವಿತರಣಾ, ತೀರ್ಥ ಪ್ರಸಾದ ಮತ್ತು ಅನ್ನ ಸಂತರ್ಪಣೆ ಗಳು ಇರುವುದಿಲ್ಲ. ಮುಂದಿನ ದಿನಗಳಲ್ಲಿ ಅನುಕೂಲಕರ ಪರಿಸ್ಥಿತಿ ಉಂಟಾದಾಗ ಭಕ್ತಾಧಿಗಳಿಗೆ ಸೇವೆಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗುವುದು ಎಂಬ ಪ್ರಕಟಣೆಯೊಂದು ಹರಿದಾಡುತ್ತಿದ್ದು ಇಂತಹ ಯಾವುದೇ ಪ್ರಕಟಣೆ ದೇವಸ್ಥಾನದಿಂದ ನೀಡಿರುವುದಿಲ್ಲ ಎಂದು ಮುಜರಾಯಿ ಅಧಿಕಾರಿಗಳು ತಿಳಿಸಿದ್ದಾರೆ


Spread the love