ಕುದ್ರೋಳಿ-ಅಳಕೆ ರಸ್ತೆ, ಬ್ರಿಡ್ಜ್ ಗೆ 11  ಕೋಟಿ ರೂಪಾಯಿ: ಶಾಸಕ ಜೆ.ಆರ್.ಲೋಬೊ

Spread the love

ಕುದ್ರೋಳಿ-ಅಳಕೆ ರಸ್ತೆ, ಬ್ರಿಡ್ಜ್ ಗೆ 11  ಕೋಟಿ ರೂಪಾಯಿ: ಶಾಸಕ ಜೆ.ಆರ್.ಲೋಬೊ

ಮಂಗಳೂರು: ಕುದ್ರೋಳಿ-ಅಳಕೆ ರಸ್ತೆಯಲ್ಲಿ ನೂತನವಾಗಿ ಬ್ರಿಡ್ಜ್ ಕಾಮಗಾರಿಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ 11 ಕೋಟಿ ರೂಪಾಯಿ ಬಿಡುಗಡೆಯಾಗಿದೆ ಎಂದು ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದರು.

ಅವರು ಕುದ್ರೋಳಿ-ಅಳಕೆ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಬ್ರಿಡ್ಜ್ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿ ಸುಮಾರು 15 ಮೀಟರ್ ಅಗಲದ  ಸೇತುವೆಯ ನಿರ್ಮಾಣ ವೇಗವಾಗಿದ್ದು ಈ ರಸ್ತೆಯ ಅಭಿವೃದ್ಧಿಗೆ ನಾವು ಬದ್ಧರಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿದರು.

ಈಗಾಗಲೇ ಮೆಸ್ಕಾಂ ವಿಭಾಗಕ್ಕೆ ವಿದ್ಯುತ್ ಕಂಬ ಹಾಗೂ ವೈಯರ್ ಗಳ ಸ್ಥಳಾಂತರಕ್ಕೆ ಸೂಚನೆ ಕೊಟ್ಟಿದ್ದೇನೆ. ಈ ರಸ್ತೆ ನಗರದ ಮುಖ್ಯ ರಸ್ತೆಯಾಗಿದ್ದು ಜನನಿಭಿಡವಾಗಿದೆ. ಇಲ್ಲಿಯ ರಸ್ತೆ ರಸ್ತೆ ಮತ್ತು ಸೇತುವೆ ನಿರ್ಮಾಣವಾದರೆ ಬಹಳಷ್ಟು ಜನರಿಗೆ ಉಪಯುಕ್ತವಾಗಿಲಿದೆ ಎಂದರು.

ಈ ರಸ್ತೆಯಲ್ಲಿ ಬಂದರು ಕಡೆಗೆ ಹೋಗುವ ಲಾರಿಗಳಿಗೂ ಪ್ರಯೋಜನವಾಗಿಲಿದ್ದು ಆದಷ್ಟು ಶೀಘ್ರದಲ್ಲಿ ಇದರ ಕಾರ್ಯ ಮುಗಿಸಲಿದ್ದೇವೆ ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು.

ಈ ಸಂದರ್ಭದಲ್ಲಿ ಸ್ಥಳೀಯರಾದ ಗೋಪಾಲಕೃಷ್ಣ ಆಚಾರ್ಯ, ಯೂಸೂಫ್ ಕುದ್ರೋಳಿ, ಕೃತಿನ್ ಕುಮಾರ್ ಉಪಸ್ಥಿತರಿದ್ದರು.

ಕಂಕನಾಡಿ ರೈಲ್ವೇ ನಿಲ್ದಾಣ ರಸ್ತೆ ಅಗಲೀಕರಣಕ್ಕೆ 4.05 ಕೋಟಿ ರೂಪಾಯಿ : ಶಾಸಕ ಜೆ.ಆರ್.ಲೋಬೊ

ಮಂಗಳೂರು: ಮಂಗಳೂರು ಜಂಕ್ಷನ್ (ಕಂಕನಾಡಿ) ರೈಲ್ವೇ ನಿಲ್ದಾಣ ರಸ್ತೆ ಅಭಿವೃದ್ಧಿಗೆ 4.05 ಕೋಟಿ ರೂಪಾಯಿ ವೆಚ್ಚ ಮಾಡಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದರು.

ಅವರು ಕಂಕನಾಡಿ ಜಂಕ್ಷನ್ ರಸ್ತೆ ವೀಕ್ಷಣೆ ಮಾಡಿ ಮಾತನಾಡಿ ಮಂಗಳೂರು ಮಹಾನಗರಪಾಲಿಕೆ ಪ್ರೀಮಿಯಮ್ ಎಫ್ ಎ ಆರ್ ನಿಂದ 2.05 ಕೋಟಿ ರೂಪಾಯಿ ಮತ್ತು ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆಯಿಂದ 2 ಕೋಟಿ ರೂಪಾಯಿ ಮಂಜೂರಾಗಿದೆ ಎಂದರು.

ಈ ಕಾಮಗಾರಿಯನ್ನು ಈ ವಾರದಲ್ಲೇ ಆರಂಭಿಸಬೇಕು. ಇದರಿಂದ ಈ ಭಾಗದ ಜನರು ರೈಲ್ವೇ ನಿಲ್ದಾಣಕ್ಕೆ ಸರಿಯಾದ ಸಮಯದಲ್ಲಿ ಬರುತ್ತಾರೆ, ಇದು ಸಾರ್ವಜನಿಕರಿಗೆ ನೆರವಾಗಲಿದೆ ಎಂದರು.

ಬಹಳ ವರ್ಷಗಳ ಹಿಂದೆ ಮಂಗಳೂರು ಜಂಕ್ಷನ್ ರೈಲ್ವೇ ನಿಲ್ದಾಣವಾಗಿದ್ದರೂ ಇಲ್ಲಿಗೆ ಸರಿಯಾದ ರಸ್ತೆ ಇರದ ಕಾರಣ ಜನರು ಕಿರಿದಾದ ರಸ್ತೆಯಲ್ಲಿಯೇ ಪ್ರಯಾಸದಿಂದ ಬರುತ್ತಿದ್ದರು. ಬಸ್ಸುಗಳ ಸೌಕರ್ಯವೂ ಇಲ್ಲದಿದ್ದ ಕಾರಣದಿಂದ ಜನರು ಆಟೋ ರಿಕ್ಷಾ, ಟ್ಯಾಕ್ಸಿ, ಕಾರುಗಳಿಂದಲೇ ಬರಬೇಕಾಗಿತ್ತು ಎಂದ ಶಾಸಕ ಜೆ.ಆರ್.ಲೋಬೊ ಅವರು ಈ ರಸ್ತೆ ಅಗಲೀಕರಣ ಅನಿರ್ವಾಯವಾಗಿತ್ತು ಎಂದರು.

ಈ ರಸ್ತೆಯನ್ನು ಮಂಗಳೂರು ನಗರಪಾಲಿಕೆ ಮತ್ತು ಸರ್ಕಾರದ ಲೋಕೋಪಯೋಗಿ ಇಲಾಖೆ ವ್ಯವಸ್ಥಿತವಾಗಿ ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ತ್ವರಿತವಾಗಿ ನಿರ್ಮಿಸಬೇಕು ಎಂದರು.

ಶಾಸಕರೊಂದಿಗೆ ಕಾರ್ಪೊರೇಟರ್ ಪ್ರವಿಣ್ ಚಂದ್ರ ಆಳ್ವ, ಮಹಾನಗರಪಾಲಿಕೆಯ ಉಪಆಯುಕ್ತ (ಅಭಿವೃದ್ಧಿ) ಕೆ.ಎಸ್.ಲಿಂಗೇಗೌಡ, ಜಂಟಿ ನಿರ್ದೇಶಕ ಜಯರಾಜ್, ಟಿಪಿಒ ಬಾಲಕೃಷ್ಣ, ಇಂಜಿನಿಯರ್ ಗಣಪತಿ, ಸ್ಥಳೀಯ ಮುಖಂಡರಾದ ಕೃತಿನ್ ಕುಮಾರ್, ಧನರಾಜ್, ಅನಿಲ್ ಮೊದಲಾದವರಿದ್ದರು.

 


Spread the love

1 Comment

  1. Good job. Mr Lobo is a quiet party person who deserves to be a minister. He can easily become one as Christians are in minority and it is the norm to offer posts.

    Remember minister K J George? Hint hint.

Comments are closed.