ಕೂಳೂರು ಹಿಂದೂ ರುದ್ರಭೂಮಿಯ ಉದ್ಘಾಟನೆ

Spread the love

ಕೂಳೂರು ಹಿಂದೂ ರುದ್ರಭೂಮಿಯ ನವೀಕರಣ ಕಾಮಗಾರಿಗಳ ಉದ್ಘಾಟನೆ.

ಮಂಗಳೂರು: ಸರ್ವಜನಿಕ ಹಿಂದೂ ರುದ್ರಭೂಮಿ ಕೂಳೂರು ಇದರ ನವೀಕರಣ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮ ತಾ. 9 ಮೇ 2016 ರಂದು ನಡೆಯಿತು. ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ನಡೆಸಲಾದ ಕಾಮಗಾರಿಯನ್ನು ಸ್ಥಳೀಯ ಕಾರ್ಪೊರೇಟರ್ ದಯಾನಂದ ಶೆಟ್ಟಿ ಉದ್ಘಾಟಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದಯಾನಂದ ಶೆಟ್ಟಿಯವರು ಸುಮಾರು 7 ಲಕ್ಷ ವೆಚ್ಚದಲ್ಲಿ ಸ್ಮಶಾನದ ವಿವಿಧ ಕಾಮಗಾರಿಗಳನ್ನು ನಡೆಸಲಾಗಿದೆ. ಇಂತಹ ಸಾರ್ವಜನಿಕ ಕೇಂದ್ರಗಳ ಸಮಗ್ರ ಅಭಿವೃದ್ದಿಗೆ ಸಾರ್ವಜನಿಕರು ಕೈ ಜೋಡಿಸುವ ಅಗತ್ಯವಿದೆ ಎಂದು ಹೇಳಿದರು.

image001kulur-rudra-bhumi-020160511-001 image002kulur-rudra-bhumi-020160511-002

ಸ್ಮಶಾನ ಅಭಿವೃದ್ದಿ ಸಮಿತಿಯ ಉಪಾದ್ಯಕ್ಷರಾದ ಸದಾಶಿವ ಸುವರ್ಣ , ಅಶೋಕ್ ಕೂಳೂರು, ಸ್ಥಳೀಯ ಗಣ್ಯರಾದ ಜಯಾನಂದ ಅಮೀನ್, ಗಿರಿಧರ್ ಸನಿಲ್, ಹರೀಶ್ಚಂದ್ರ, ಜಯಕುಮಾರ್, ಶ್ರೀನಿವಾಸ್ ಕೂಳೂರು, ವಿಜಯ ವಿದ್ಯಾನಗರ, ದಿನೇಶ್ ಶೆಟ್ಟಿ ಅತ್ರೆಬೈಲ್, ಮಾಧವ ಶಾಂತಿನಗರ, ಚರಣ್ ಶೆಟ್ಟಿ, ಮ.ನ.ಪಾ ಕಿರಿಯ ಇಂಜಿನಿಯರ್ ಎಚ್. ಲತಾ, ಗುತ್ತಿಗೆದಾರರಾದ ಸುಚೇತನ್ ಉಪಸ್ಥಿತರಿದ್ದರು. ಹರೀಶ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು.


Spread the love