ಕೆಜಿಎಫ್: ಗಣೇಶ ಮೂರ್ತಿ ವಿಸರ್ಜಿಸಲು ಹೋಗಿ ಆರು ಮಕ್ಕಳು ನೀರು ಪಾಲು

ಕೆಜಿಎಫ್: ಗಣೇಶ ಮೂರ್ತಿ ವಿಸರ್ಜಿಸಲು ಹೋಗಿ ಆರು ಮಕ್ಕಳು ನೀರು ಪಾಲು

ಕೋಲಾರ: ಗಣೇಶ ಮೂರ್ತಿ ವಿಸರ್ಜಿಸಲು ಹೋಗಿ ಆರು ಮಕ್ಕಳು ನೀರುಪಾಲಾಗಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಕೆಜಿಎಫ್ ತಾಲೂಕಿನ ಮರದಘಟ್ಟ ಗ್ರಾಮದಲ್ಲಿ ಇಂದು ಜರುಗಿದೆ.

ವೈಷ್ಣವಿ, ತೇಜು, ವೀಣಾ, ರೋಹಿತ್, ರಕ್ಷಿತ್ ಹಾಗೂ ಧನುಷ್ ಮೃತಪಟ್ಟಿದ್ದು, ಇವರೆಲ್ಲ 12 ರಿಂದ 14 ವರ್ಷದೊಳಗಿನರಾಗಿದ್ದಾರೆ.ಮೃತರ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ.

ಮೊಹರಂ ಪ್ರಯುಕ್ತ ಇಂದು ಶಾಲೆಗೆ ರಜೆ ಘೋಷಿಸಲಾಗಿತ್ತು. ರಜೆ ಹಿನ್ನೆಲೆಯಲ್ಲಿ ಕೆರೆಯಿಂದ ಮಣ್ಣು ತಂದ ಮಕ್ಕಳು ಗಣೇಶ ಮೂರ್ತಿ ತಯಾರಿಸಿ ಮೂರ್ತಿಗೆ ಪೂಜೆ ಸಲ್ಲಿಸಿದ್ದರು. ಬಳಿಕ ಮೂರ್ತಿಯನ್ನು ಕೆರೆಯಲ್ಲಿ ವಿಸರ್ಜಿಸಲು ಹೋಗಿದ್ದಂತಹ ಸಂದರ್ಭದಲ್ಲಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿರುವ ಬಗ್ಗೆ ಪ್ರಾಥಮಿಕ ವರದಿಯಾಗಿದೆ.

ಸ್ಥಳಕ್ಕೆ ಅಂಡರ್ ಸನ್ ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.