ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷರಾಗಿ ಆಲ್ವಿನ್ ಕ್ವಾಡ್ರಸ್ ಕೋಟ ಮರು ಆಯ್ಕೆ

Spread the love

ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷರಾಗಿ ಆಲ್ವಿನ್ ಕ್ವಾಡ್ರಸ್ ಕೋಟ ಮರು ಆಯ್ಕೆ

ಉಡುಪಿ : ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ 2019-20 ರ ಸಾಲಿನ ಅಧ್ಯಕ್ಷರಾಗಿ ಯುವ ಉದ್ಯಮಿ ಆಲ್ವಿನ್ ಕ್ವಾಡ್ರಸ್ ಕೋಟ ಮರು ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ಸಂಘಟನೆಯ ಕೇಂದ್ರ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಚುನಾವಣೆಯನ್ನು ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಮಾಜಿ ಅಧ್ಯಕ್ಷರಾದ ಎಲ್ ರೋಯ್ ಕಿರಣ್ ಕ್ರಾಸ್ಟೊ ಅವರು ಆಧ್ಯಾತ್ಮಿಕ ನಿರ್ದೇಶಕರಾದ ವಂ ಫರ್ಡಿನಾಂಡ್ ಗೊನ್ಸಾಲ್ವಿಸ್ ಅವರ ಉಪಸ್ಥಿತಿಯಲ್ಲಿ ನಡೆಸಿಕೊಟ್ಟರು,

ಇತರ ಪದಾಧಿಕಾರಿಗಳ ವಿವರ ಇಂತಿದೆ – ನಿಕಟಪೂರ್ವ ಅಧ್ಯಕ್ಷರು ವಲೇರಿಯನ್ ಫೆರ್ನಾಂಡಿಸ್ ಸಂತೆಕಟ್ಟೆ, ಕಲ್ಯಾಣಪುರ, ನಿಯೋಜಿತ ಅಧ್ಯಕ್ಷರು ರೋಬರ್ಟ್ ಮಿನೇಜಸ್ ಕಣಜಾರು, ಉಪಾಧ್ಯಕ್ಷರು- ಫ್ಲ್ಯಾವನ್ ಡಿಸೋಜಾ ಬಸ್ರೂರು, ಪ್ರಧಾನ ಕಾರ್ಯದರ್ಶಿ ಸಂತೋಷ್ ಕರ್ನೆಲಿಯೋ ಸಂತೆಕಟ್ಟೆ ಕಲ್ಯಾಣಪುರ, ಸಹಕಾರ್ಯದರ್ಶಿ ಗ್ರೆಗೋರಿ ಪಿಕೆ ಡಿಸೋಜಾ ಶಂಕರಪುರ, ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್ ಶಿರ್ವ, ಸಹ ಕೋಶಾಧಿಕಾರಿ ಅನಿಲ್ ಡಿಸೋಜಾ ಮೂಡುಬೆಳ್ಳೆ, ಆಂತರಿಕ ಲೆಕ್ಕಪರಿಶೋಧಕರಾಗಿ ಫೆಲಿಕ್ಸ್ ಪಿಂಟೊ ಕೆಮ್ಮಣ್ಣು ಆಯ್ಕೆಯಾಗಿದ್ದಾರೆ.


Spread the love