ಕೆಲಕ್ಕೆಂದು ಬಂದ ಯುವತಿ ನಾಪತ್ತೆ

Spread the love

ಕೆಲಕ್ಕೆಂದು ಬಂದ ಯುವತಿ ನಾಪತ್ತೆ
ಮಂಗಳೂರು: ಉತ್ತರ ಕನ್ನಡ ಜಿಲ್ಲೆಯ ರಾಯಪಟ್ಟಣ, ಹಳಿಯಾಳ ಮೂಲದ ಇಬ್ಬರು ಯುವತಿಯರು ನಾಪತ್ತೆಯಾಗಿದ್ದು ಈ ಕುರಿತು ನಾಪತ್ತೆ ಪ್ರಕರಣ ದಾಖಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ರಾಯಪಟ್ಟಣ, ಹಳಿಯಾಳ ತಾಲೂಕಿನ ಡೋಂಡಿಬಾಯಿ ಚಿಮನ ಬಾಜಾರಿ ಎಂಬ ಯುವತಿ ಉಳ್ಳಾಲದ ಮೀನೀನ ಉತ್ಪನ್ನದ ಕಂಪೆನಿಗೆ ಕೆಲಸಕ್ಕೆ ಬಂದು ನಾಪಾತ್ತೆಯಾಗಿದ್ದು, ದೋಂಡಿಬಾಯಿಯನ್ನು ಮಂಗಳೂರಿನ ಕೆಲಸಕ್ಕಿದ್ದ ಮೂಲತಃ ಅಲಕೇರ, ಯಲ್ಲಪುರ ಸುನಿತಾ ಎಂಬ ಯುವತಿ ಕಳೆದ ಎಂಟು ತಿಂಗಳ ಹಿಂದೆ ತಾನು ಮಂಗಳೂರಿನ ಉಳ್ಳಾಲದ ಮೀನು ಉತ್ಪನ್ನ ಫ್ಯಾಕ್ಟರಿಯೊಂದರ ಏಜೆಂಟ್ ಎಂದು ಪರಿಚಯಿಸಿ ಚಿಮನಿಯನ್ನು ಫ್ಯಾಕ್ಟರಿಗೆ ಕೆಲಸಕ್ಕೆ ಸೇರಿಸಿದ್ದಳು ಎನ್ನಲಾಗಿದೆ.
ಕಳೆದ ಒಂದು ತಿಂಗಳ ಹಿಂದಷ್ಟೇ ದೊಂಡಿಬಾಯಿ ಊರಿಗೆ ಬಂದು ಹೋಗಿದ್ದು, ಕಳೆದ 8 ದಿನಗಳಿಂದ ಫೋನ್ ಸಂಪರ್ಕಕ್ಕೆ ಸಿಕ್ಕಿರಲಿಲ್ಲ ಈ ಬಗ್ಗೆ ಸುನೀತಾಳಲ್ಲಿ ವಿಚಾರಿಸಲು ಹೊರಟಾಗ ಆಕೆಯ ಮೊಬೈಲ್ ಕೂಡ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಆರೋಪಿಸಿ ದೋಂಡಿಬಾಯಿ ಸಹೋದರ ಬಾಬು ಚೆಮನು ಬಾಜಾರಿಯವುರ ಮಾರ್ಚ್ 15ರಂದು ಹಳಿಯಾಳ ಪೋಲಿಸ್ ಠಾಣೆಗೆ ದೂರನ್ನು ನೀಡಿದ್ದರು.
ಉಳ್ಳಾಲದಲ್ಲಿ ಕೆಲಸಕ್ಕಿದ್ದ ದೋಂಡಿ ಬಾಯಿ ಅಲ್ಲಿಂದಲೇ ನಾಪತ್ತೆಯಾಗಿರುವುದರಿಂದ ಉಳ್ಳಾಲ ಪೋಲಿಸ್ ಠಾಣೆಗೆ ದೂರು ನೀಡುವಂತೆ ಹಳಿಯಾಳ ಪೋಲಿಸರು ಸೂಚನೆ ನೀಡಿದ್ದರಿಂದ ಗುರುವಾರ ಉಳ್ಳಾಲಕ್ಕೆ ಆಗಮಿಸಿ ಪ್ರಕರಣ ದಾಖಲಿಸಿದ್ದಾರೆ.
ಪೋಲಿಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.


Spread the love