ಕೆಸಿಎಫ್ ವತಿಯಿಂದ ದ್ವೇಷ ತೊಲಗಲಿ, ದೇಶ ಬೆಳಗಲಿ ಧ್ಯೇಯದೊಂದಿಗೆ ಸ್ವಾತಂತ್ರ್ಯೋತ್ಸವ

Spread the love

ಕೆಸಿಎಫ್ ವತಿಯಿಂದ ದ್ವೇಷ ತೊಲಗಲಿ, ದೇಶ ಬೆಳಗಲಿ ಧ್ಯೇಯದೊಂದಿಗೆ ಸ್ವಾತಂತ್ರ್ಯೋತ್ಸವ

ಮದೀನಾ : ಕರ್ನಾಟಕ ಕಲ್ಚರಲ್ ಫೌಂಡೇಶನ್ ಮದೀನಾ ಸೆಕ್ಟರ್ ವತಿಯಿಂದ ದ್ವೇಷ ತೊಲಗಲಿ, ದೇಶ ಬೆಳಗಲಿ ಧ್ಯೇಯ ವಾಕ್ಯದೊಂದಿಗೆ, ಭಾರತದ 71ನೇ ಸ್ವಾತಂತ್ರ್ಯ ದಿನಾಚರಣೆ ಮದೀನಾ ಮುನವ್ವರದ ಕೆಸಿಎಫ್ ಭವನದಲ್ಲಿ ನಡೆಯಿತು.

ಕೆಸಿಎಫ್ ಮದೀನಾ ಝೋನಲ್ ಅಧ್ಯಕ್ಷ  ಫಾರೂಕ್ ನ ಈಮಿ ಸರಳಿಕಟ್ಟೆ ದಿಕ್ಸೂಚಿ ಭಾಷಣ ಮಾಡಿದರು.

ದೇಶ ಪ್ರೇಮ ಇಸ್ಲಾಮಿನ  ಭಾಗವಾಗಿದೆ ಎಂದ ಅವರು, ಸ್ವತಂತ್ರಕ್ಕಾಗಿ ಹೋರಾಡಿ ಅಮರರಾದ ಬಹದ್ದೂರ್ ಶಾ, ಟಿಪ್ಪುಸುಲ್ತಾನರ ಚರಿತ್ರೆಯನ್ನು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು

ಕೆಸಿಎಫ್ ಮದೀನಾ ಸೆಕ್ಟರ್ ಅಧ್ಯಕ್ಷ ಅಶ್ರಫ್ ಸಖಾಫಿ ನೂಜಿ ಮಾತನಾಡಿ ನಮ್ಮ ಪೂರ್ವಜರು ತಮ್ಮ ಜೀವನ ಸಮರ್ಪಿಸಿ ತ್ಯಾಗ, ಕಷ್ಟ , ಬಲಿದಾನದ ಮೂಲಕ ಭಾರತ ಸ್ವಾತಂತ್ರ್ಯ ಕ್ಕಾಗಿ ಬ್ರಿಟಿಷರ ವಿರುದ್ಧ ರಕ್ತ ಸಾಕ್ಷಿಗಳಾಗಿ ನಮಗೆ ಸ್ವಾತಂತ್ರ್ಯ ದಕ್ಕಿಸಿ ಕೊಟ್ಟಿದ್ದಾರೆ. ಇಂದು ಹಳ್ಳಿಯಿಂದ ದೆಲ್ಲಿಯವರೆಗೆ ಸ್ವಾತಂತ್ರೋತ್ಸವ ಆಚರಿಸಲಾಗುತ್ತಿದೆ. ಆದ್ರೆ ನಮಗೆ ಪರಿಪೂರ್ಣ ಸ್ವಾತಂತ್ರ್ಯ ಸಿಕ್ಕಿಲ್ಲ. ಬೆಳಗ್ಗೆ ಹೋದ ವ್ಯಕ್ತಿ ಮರಳಿ ಮನೆಗೆ ಬರುತ್ತಾನೆ ಎನ್ನಲು ಸಾಧ್ಯವಿಲ್ಲದ ಪರಿಸ್ಥಿತಿ ಬಂದೊಗಿದ್ದು, ಅಕ್ರಮ, ಅನಾಚಾರ, ಅಧರ್ಮ ಹಾಗೂ ನಮ್ಮಲ್ಲಿಯೇ ಕಚ್ಚಾಡುವ ಪ್ರವೃತ್ತಿ ಹೆಚ್ಚಾಗಿದೆ ಎಂದರು. ಇದೇ ವೇಳೆ ಸಯ್ಯದ್ ಖ್ವಾಜ ಜಿಸ್ತಿ  ತಂಙಳ್ ಹೈದರಬಾದ್ ದುವಾ ನಿರ್ವಹಿಸಿ  ಭಾರತೀಯರಿಗೆ ಸ್ವಾತಂತ್ರೋತ್ಸವ ಶುಭಾಶಯ ಕೋರಿದರು.

ಈ ಸಂಧರ್ಬದಲ್ಲಿ  ಅಬ್ದುಲ್ಲಾ ಮದನಿ, ಇಸ್ಮಾಯಿಲ್ ಕಿನ್ಯಾ, ಅಶ್ರಫ್ ಕಿನ್ಯಾ, ತಾಜುದ್ದೀನ್ ಸುಳ್ಯ ಮತ್ತಿತರರು ಉಪಸ್ಥಿತರಿದ್ದರು.

ಉಮ್ಮರ್ ಗೇರುಕಟ್ಟೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಹುಸೈನಾರ್ ಮಾಪಳ್ ಧನ್ಯವಾದ ಸಮರ್ಪಿಸಿದರು. ಇದೇ ವೇಳೆ ಹಜ್ಜ್ ನಿರ್ವಹಿಸಲು ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳಿಂದ ಆಗಮಿಸಿದ

 ಹಜ್ಜಾಜಿಗಳಿಗೆ ಮಸ್ಜಿದುನ್ನಭವಿ ವಠಾರದಲ್ಲಿ ಕೆಸಿಎಫ್ ಕಾರ್ಯಕರ್ತರು ಸಿಹಿ ತಿಂಡಿ ವಿತರಿಸಿದರು.

 


Spread the love