ಕೆ.ಎಂ.ಸಿ. ಆಸ್ಪತ್ರೆ ಅತ್ತಾವರ ಹಾಗೂ ಚೈಲ್ಡ್ ಕ್ಯಾನ್ಸರ್ ಕೇರ್ ಫೌಂಡೇಶನ್ ಒಡಂಬಡಿಕೆ

Spread the love

ಕೆ.ಎಂ.ಸಿ. ಆಸ್ಪತ್ರೆ ಅತ್ತಾವರ ಹಾಗೂ ಚೈಲ್ಡ್ ಕ್ಯಾನ್ಸರ್ ಕೇರ್ ಫೌಂಡೇಶನ್ ಒಡಂಬಡಿಕೆ

ಮಂಗಳೂರು : ಕೆ.ಎಂ.ಸಿ. ಆಸ್ಪತ್ರೆ ಅತ್ತಾವರ ಮಂಗಳೂರು, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಇದರ ಅಂಗ ಸಂಸ್ಥೆಯಾಗಿದ್ದು ಇಂದು “ಹೋಪ್ ಬಿಯಾಂಡ್ ಲ್ಯುಕೇಮಿಯಾ ಪ್ರಾಜೆಕ್ಟ್” ಎಂಬ ಯೋಜನೆಗೆ ಕ್ಯಾಲಿಕಟ್‍ನ ‘ಹೋಪ್ ಚೈಲ್ಡ್ ಕ್ಯಾನ್ಸರ್ ಕೇರ್ ಫೌಂಡೇಶನ್’ ಜೊತೆಗೆ ಕ್ಯಾನ್ಸರ್‍ನಿಂದ ಬಳಲುವ ಮಕ್ಕಳ ಚಿಕಿತ್ಸೆಯನ್ನು ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದಲ್ಲಿ ಬೆಂಬಲಿಸಲು ಈ ಎರಡೂ ಸಂಸ್ಥೆಗಳು ಒಡಂಬಡಿಕೆ ಯನ್ನು ಮಾಡಿಕೊಂಡವು.

ಕೆ.ಎಂ.ಸಿ. ಆಸ್ಪತ್ರೆ ಮಂಗಳೂರಿನ ವೈದ್ಯಕೀಯ ಅಧೀಕ್ಷಕರಾಗಿರುವ ಡಾ.ಆನಂದ್ ವೇಣುಗೋಪಾಲ್ ರವರು ಮಂಗಳೂರಿನಲ್ಲಿ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಕೆ.ಎಂ.ಸಿ. ಆಸ್ಪತ್ರೆ ಅತ್ತಾವರವು ಅತ್ಯಂತ ಮುಂದುವರಿದ ಸಮಗ್ರವಾದ ಕ್ಯಾನ್ಸರ್ ಚಿಕಿತ್ಸಾ ಕೇಂದ್ರವಾಗಿದ್ದು ಕ್ಯಾನ್ಸರ್ ರೋಗಿಗಳಿಗೆ ವೈದ್ಯಕೀಯ, ಶಸ್ತ್ರಚಿಕಿತ್ಸಾ, ಮಕ್ಕಳ ಹಾಗೂ ವಿಕಿರಣ ಚಿಕಿತ್ಸಾ ಸೌಲಭ್ಯಗನ್ನು ಒಂದೇ ಸೂರಿನಡಿಯಲ್ಲಿ ಒದಗಿಸುತ್ತಿದೆ. ಮಕ್ಕಳ ಕ್ಯಾನ್ಸರ್ ಚಿಕಿತ್ಸೆಗಾಗಿ ನಾವು ಈಗಾಗಲೇ “ಪ್ರಾಜೆಕ್ಟ್ ಮಿಲಾಪ್, ಇಂಪ್ಯಾಕ್ಟ್ ಗುರು, ಲ್ಯುಕೇಮಿಯಾ ಕ್ರುಸೇಡರ್ಸ್ ಮತ್ತು ಕ್ಯಾನ್‍ಕಿಡ್ಸ್” ಮುಂತಾದ ಸಂಸ್ಥೆಗಳಿಂದ ಹಣಕಾಸಿನ ನೆರವನ್ನು ಪಡೆಯುತ್ತಿದ್ದು ಇದೀಗ ಹೋಪ್ ಚೈಲ್ಡ್ ಕ್ಯಾನ್ಸರ್ ಕೇರ್ ಫೌಂಡೇಶನ್ ಜೊತೆಗೆ ಒಡಂಬಡಿಕೆ ಮಾಡಿಕೊಳ್ಳುವುದರ ಮೂಲಕ ಪ್ರತ್ಯೇಕವಾಗಿ ಕೇರಳ ರಾಜ್ಯದಲ್ಲಿ ಕ್ಯಾನ್ಸರ್‍ನಿಂದ ಬಳಲುತ್ತಿರುವ ಬಡ ಕುಟುಂಬದ ಮಕ್ಕಳ ಚಿಕಿತ್ಸೆಗಾಗಿ ಅಗತ್ಯ ನೆರವನ್ನು ನೀಡಲಿದೆ” ಎಂದು ತಿಳಿಸಿದರು.

ಕೆ.ಎಂ.ಸಿ. ಆಸ್ಪತ್ರೆ ಮಂಗಳೂರಿನ ಮಕ್ಕಳ ಕ್ಯಾನ್ಸರ್ ವಿಭಾಗದ ಮುಖ್ಯಸ್ಥರಾದ ಡಾ. ಹರ್ಷಪ್ರಸಾದ್ ಎಲ್, ಮಾತನಾಡಿ “ಹೆಚ್ಚಿನ ವಿಧದ ಮಕ್ಕಳ ಕ್ಯಾನ್ಸರ್ ಗಳು ಗುಣಪಡಿಸಬಲ್ಲವುಗಳಾಗಿವೆ. ಅಕ್ಯೂಟ್ ಲಿಂಫೋಬ್ಲಾಸ್ಟಿಕ್ ಲ್ಯೂಕೇಮಿಯಾ ಇದು ರಕ್ತದ ಕ್ಯಾನ್ಸರ್‍ನ ಒಂದು ವಿಧವಾಗಿದ್ದು ಇದು ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವಂತಹ ರಕ್ತದ ಕ್ಯಾನ್ಸರ್‍ನ ವಿಧವಾಗಿದೆ. ಇದನ್ನು ಶೇಕಡಾ 80-85 ರóಷ್ಟು ಚಿಕಿತ್ಸೆಯ ಮೂಲಕ ಗುಣಪಡಿಸಬಹುದಾಗಿದೆ. ಕೆ.ಎಂ.ಸಿ. ಆಸ್ಪತ್ರೆ ಅತ್ತಾವರವು ಕಳೆದ 18 ವರ್ಷಗಳಿಂದ ಕ್ಯಾನ್ಸರ್‍ನಿಂದ ಬಳಲುತ್ತಿರುವ ಮಕ್ಕಳಿಗೆ ಚಿಕಿತ್ಸೆಯನ್ನು ನೀಡುತ್ತಾ ಬಂದಿದೆ. “ಹೋಪ್ ಬಿಯಾಂಡ್ ಲ್ಯುಕೇಮಿಯಾ ಪ್ರಾಜೆಕ್ಟ್” ಇದು ಕ್ಯಾಲಿಕಟ್‍ನ ಹೋಪ್ ಚೈಲ್ಡ್ ಕ್ಯಾನ್ಸರ್ ಕೇರ್ ಫೌಂಡೇಶನ್ ಪ್ರಾರಂಭಿಸಿದ ಒಂದು ಹೊಸ ಯೋಜನೆಯಾಗಿದ್ದು ಅಕ್ಯೂಟ್ ಲಿಂಫೋಬ್ಲಾಸ್ಟಿಕ್ ಲ್ಯೂಕೇಮಿಯಾ ಎಂಬ ವಿಧದ ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆಗಾಗಿ ಬೆಂಬಲಿಸುತ್ತಿದೆ. ಈ ಹೋಪ್ ತಂಡವು ಮಕ್ಕಳ ಕ್ಯಾನ್ಸರ್ ತಜÐರನ್ನು ಒಳಗೊಂಡಂತೆ ಹಲವಾರು ವೈದ್ಯಕೀಯ ವಿಭಾಗದ ವೃತ್ತಿಪರರನ್ನು ಹೊಂದಿದ್ದು ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದಲ್ಲಿ ರಕ್ತದ ಕ್ಯಾನ್ಸರ್‍ನ ಚಿಕಿತ್ಸೆ ಬೇಕಾಗುವ ಕೇರಳ ರಾಜ್ಯದ ಮಕ್ಕಳಿಗೆ ಆರ್ಥಿಕ, ವೈದ್ಯಕೀಯ ಹಾಗೂ ಭಾವನಾತ್ಮಕವಾಗಿ ಸ್ಪಂದಿಸಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ನೀಡಲು ನೆರವಾಗುತ್ತಿದೆ” ಎಂದು ತಿಳಿಸಿದರು.

ಹೋಪ್ ಚೈಲ್ಡ್ ಕ್ಯಾನ್ಸರ್ ಕೇರ್ ಫೌಂಡೇಶನ್‍ನ ವೈದ್ಯಕೀಯ ನಿರ್ದೆಶಕರಾಗಿರುವ ಡಾ.ಜೈನುಲ್ ಅಬಿದೀನ್ ಇವರು ಮಾತನಾಡಿ “ಈ ಫೌಂಡೇಶನ್ ಆರಂಭದಲ್ಲಿ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವಂತಹ ಲಿಂಫೋಬ್ಲಾಸ್ಟಿಕ್ ಲ್ಯೂಕೇಮಿಯಾ ಎಂಬ ವಿಧದ ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿರುವವರನ್ನು ಚಿಕಿತ್ಸೆಗಾಗಿ ಬೆಂಬಲಿಸಲು ನಿರ್ಧರಿಸಿದ್ದು ಅವರಿಗೆ ಉನ್ನತ ಗುಣಮಟ್ಟದ ಚಿಕಿತ್ಸೆಯನ್ನು ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದಲ್ಲಿ ನೀಡಲು ಸಹಾಯಹಸ್ತವನ್ನು ಚಾಚಿದೆ” ಎಂದರು.

ಹೋಪ್ ಚೈಲ್ಡ್ ಕ್ಯಾನ್ಸರ್ ಕೇರ್ ಫೌಂಡೇಶನ್‍ನ ಚೇರ್‍ಮೇನ್ ಶ್ರೀ. ಹಾರಿಸ್ ಮಾತನಾಡಿ, “ಈ ಯೋಜನೆಯಲ್ಲಿ ಸೇರಿದ ಎಲ್ಲಾ ಮಕ್ಕಳಿಗೆ ಹಾಗೂ ಅವರ ಕುಟುಂಬಗಳಿಗೆ ಉನ್ನತ ಗುಣಮಟ್ಟದ ಚಿಕಿತ್ಸೆಯನ್ನು ನೀಡುವುದು ನಮ್ಮ ಗುರಿಯಾಗಿದ್ದು ಚಿಕಿತ್ಸೆಗಾಗಿ ವ್ಯಕ್ತಿಗತವಾಗಿ ಆರ್ಥಿಕ ಸಹಾಯವನ್ನು ನೀಡಲಿದ್ದೇವೆ. ಸುಮಾರು 5 ಲಕ್ಷದವರೆಗೆ ಮಕ್ಕಳ ಚಿಕಿತ್ಸೆ, ಮಕ್ಕಳ ಹಾಗೂ ಕುಟುಂಬದವರಿಗೆ ವಸತಿ ವೆಚ್ಚ, ಪ್ರಯಾಣ ವೆಚ್ಚ, ಆಹಾರದ ವೆಚವನ್ನು ನೀಡಲಾಗುತ್ತದೆ. ಕುಟುಂಬದ ಆರ್ಥಿಕ ಪರಿಸ್ಥಿತಿಯ ಆಧಾರದ ಮೇಲೆ ಅವರಿಗೆ ಹೆಚ್ಚುವರಿ ಭತ್ಯೆಯನ್ನು ಕೂಡ ನೀಡಲಾಗುವುದು. ಹೋಪ್ ಫೌಂಡೇಶನ್‍ನ ಮಕ್ಕಳ ಕ್ಯಾನ್ಸರ್ ತಜÐರು ನಿಯಮಿತವಾಗಿ ಚಿಕಿತ್ಸೆಯ ಪರಿಶೀಲನೆ ಮಾಡಿ ಅವರ ಕಾಳಜಿಯನ್ನು ಖಚಿತಪಡಿಸಿಕೊಳ್ಳುತ್ತಾರೆ” ಎಂದು ವಿವರಿಸಿದರು.

ಕೆ.ಎಂ.ಸಿ. ಆಸ್ಪತ್ರೆ ಮಂಗಳೂರಿನ ಮಕ್ಕಳ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾಗಿರುವ ಡಾ. ಕಮಲಾಕ್ಷಿ ಭಟ್ ಮಾತನಾಡಿ ಹೋಪ್ ಬಿಯಾಂಡ್ ಲ್ಯುಕೇಮಿಯಾ ಯೋಜನೆಯು ಕ್ಯಾನ್ಸರ್‍ನಿಂದ ಬಳಲುವ ಮಕ್ಕಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ನೀಡಲು ಸಹಾಯ ಮಾಡುತ್ತದೆ. ಈ ರೀತಿಯ ಬೆಂಬಲ ಹಾಗೂ ಸಹಾಯದಿಂದಾಗಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಕ್ಯಾನ್ಸರ್‍ನಿಂದ ಬಳಲುತ್ತಿರುವ ತಮ್ಮ ಮಕ್ಕಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ದಾಖಲಿಸಲು ಹಿಂದೇಟು ಹಾಕುವುದಿಲ್ಲ ಎಂದು ತಿಳಿಸಿದರು.

ಕೆ.ಎಂ.ಸಿ. ಆಸ್ಪತ್ರೆ ಮಂಗಳೂರಿನಲ್ಲಿ ಮಕ್ಕಳ ಕ್ಯಾನ್ಸರ್ ಆರೈಕೆ ವಿಭಾಗವು ಜಿಲ್ಲೆಯಲ್ಲಿಯೇ ಅತ್ಯಂತ ಆಧುನಿಕ ಹಾಗೂ ಉನ್ನತ ಗುಣಮಟ್ಟದ ವಿಭಾಗವಾಗಿದ್ದು ಇಲ್ಲಿಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲದೇ ಹೊರ ರಾಜ್ಯಗಳಾದ ಕೇರಳ ಹಾಗೂ ಗೋವಾ ರಾಜ್ಯದಿಂದಲೂ ಇಲ್ಲಿನ ತಜ್ಞರಿಂದ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಾರೆ.


Spread the love