ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದಲ್ಲಿ ಅಂತರಾಷ್ಟ್ರೀಯ ಮಕ್ಕಳ ಕ್ಯಾನ್ಸರ್ ಅರಿವು ದಿನಾಚರಣೆ

Spread the love

ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದಲ್ಲಿ ಅಂತರಾಷ್ಟ್ರೀಯ ಮಕ್ಕಳ ಕ್ಯಾನ್ಸರ್ ಅರಿವು ದಿನಾಚರಣೆ

ಮಂಗಳೂರು : ಮಕ್ಕಳಿಗೆ ವಿಶೇಷವಾದ ಕ್ಯಾನ್ಸರ್ ಚಿಕಿತ್ಸೆಯನ್ನು ಒದಗಿಸುವ ಪೀಡಿಯಾಟ್ರಿಕ್ ಹೆಮಟಾಲಜಿ ಆಂಕಾಲಜಿ ವಿಭಾಗ ಹೊಂದಿರುವ ಜಿಲ್ಲೆಯ ಏಕೈಕ ಆಸ್ಪತ್ರೆಯಾದ ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದಲ್ಲಿ ಅಂತರಾಷ್ಟ್ರೀಯ ಮಕ್ಕಳ ಕ್ಯಾನ್ಸರ್ ನಿಯಂತ್ರಣ ದಿನಾಚರಣೆಯನ್ನು ಆಸ್ಪತ್ರೆಯ ಸಂಜೀವಿನಿ ಸಭಾಂಗಣದಲ್ಲಿ ದಿನಾಂಕ 15.02.2021 ರಂದು ಬೆಳಿಗ್ಗೆ 10:30 ಕ್ಕೆ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದಲ್ಲಿ ಕ್ಯಾನ್ಸರ್ ರೋಗದಿಂದಾಗಿ ಚಿಕಿತ್ಸೆಗೊಳಲ್ಪಟ್ಟು ಗುಣಮುಖರಾದ ಮಕ್ಕಳು ಬಾಗವಹಿಸಲಿದ್ದು ಈ ಮಕ್ಕಳು ಕಾರ್ಯಕ್ರಮದ ಕೇಂದ್ರಬಿಂದುಗಳಾಗಲಿದ್ದಾರೆ. ಕಾರ್ಯಕ್ರಮದಲ್ಲಿ ಕ್ಯಾನ್ಸರ್ ಗೆದ್ದ ಮಕ್ಕಳೊಂದಿಗೆ ಸಂವಾದವನ್ನು ಹಮ್ಮಿಕೊಂಡಿದ್ದು ಮಕ್ಕಳು ತಮ್ಮ ಅನಿಸಿಕೆಗಳನ್ನು ಮತ್ತು ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಕಾರ್ಯಕ್ರಮವನ್ನು ಮಂಗಳೂರಿನ ಖ್ಯಾತ 92.7 ಬಿಗ್ ಎಫ್.ಎಮ್. ಇದರ ಆರ್.ಜೆ. ಶ್ರೀ. ಎರೊಲ್ ಇವರು ನಡೆಸಿಕೊಡಲಿದ್ದಾರೆ. ಜನರಿಗೆ ಮಕ್ಕಳ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವುದು, ಮಕ್ಕಳ ಕ್ಯಾನ್ಸರ್‍ಗೆ ಇರುವ ಚಿಕಿತ್ಸೆಯ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಮಕ್ಕಳಿಗೆ ಹಾಗೂ ಪೋಷಕರಿಗೆ ಮಾನಸಿಕ ಸ್ಥೈರ್ಯವನ್ನು ತುಂಬುವುದು ಈ ಕಾಯಕ್ರಮದ ಉದ್ದೇಶವಾಗಿದೆ.

ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರೀಸರ್ಚ್ ಪ್ರಕಾರ ಭಾರತದಲ್ಲಿ ಒಟ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ 5.5% ರಷ್ಟು ಕ್ಯಾನ್ಸರ್ ಮಕ್ಕಳಲ್ಲಿ ಕಂಡುಬರುತ್ತದೆ. ಕಳೆದ ಹತ್ತು ವರ್ಷಗಳಲ್ಲಿ 2.5% ರಷ್ಟು ಇದ್ದ ಪ್ರಕರಣಗಳು ಪ್ರಸ್ತುತ ದ್ವಿಗುಣಗೊಂಡಿದೆ. ಈ ಅಂಕಿ ಅಂಶಗಳ ಪ್ರಕಾರÀ ಭಾರತದಲ್ಲಿ ವರ್ಷಕ್ಕೆ ಸುಮಾರು 50000 ರಷ್ಟು ಮಕ್ಕಳ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿವೆ. ಆದರೆ ದುಖಃದ ಸಂಗತಿಯೆಂದರೆ ಮಕ್ಕಳ ಕ್ಯಾನ್ಸರ್ ಪ್ರಕರಣಗಳಲ್ಲಿ 10 ಮಕ್ಕಳಲ್ಲಿ ಕೇವಲ ಒಂದು ಮಗು ಮಾತ್ರ ಸಂಪೂರ್ಣ ಚಿಕಿತ್ಸೆಯನ್ನು ಪಡೆಯುತ್ತದೆ. ಇದರ ಪರಿಣಾಮವಾಗಿ ಸಾಮಾನ್ಯ ಮಕ್ಕಳ ಕ್ಯಾನ್ಸರ್‍ಗಳಾದ ಲಿಂಫೋಮ ಮತ್ತು ಲ್ಯುಕೇಮಿಯಾವನ್ನು ಗುಣಪಡಿಸುವ ಪ್ರಮಾಣವು ಅಭಿವೃದ್ದಿ ಹೊಂದಿದ ದೇಶಗಳಲ್ಲಿ 80% ಕ್ಕಿಂತ ಹೆಚ್ಚಿದ್ದರೆ ಭಾರತದಲ್ಲಿ ಇದು 30% ಕ್ಕಿಂತ ಕಡಿಮೆ ಇದೆ.

ಅಂತರಾಷ್ಟ್ರೀಯ ಮಕ್ಕಳ ಕ್ಯಾನ್ಸರ್ ದಿನಾಚರಣೆ (Iಅಅಆ) ಯನ್ನು 2002 ರಲ್ಲಿ ಚೈಲ್ಡ್ ಹುಡ್ ಕ್ಯಾನ್ಸರ್ ಇಂಟರ್‍ನ್ಯಾಶನಲ್ (ಅಅI) ಸ್ಥಾಪಿಸಿದ್ದು ವಿಶ್ವದಾದ್ಯಂತ ಫೆಬ್ರವರಿ 15ರಂದು ಈ ದಿನವನ್ನು ಆಚರಿಸಲಾಗುತ್ತದೆ. ಚೈಲ್ಡ್ ಹುಡ್ ಕ್ಯಾನ್ಸರ್ ಇಂಟರ್‍ನ್ಯಾಶನಲ್ ಇದು 88 ದೇಶಗಳಲ್ಲಿ 171 ಸದಸ್ಯ ಸಂಸ್ಥೆಗಳ ಜಾಗತಿಕ ಜಾಲವನ್ನು ಹೊಂದಿದ್ದು ಮಕ್ಕಳ ಕ್ಯಾನ್ಸರ್‍ನಿಂದ ಬರುವ ಮರಣ ಪ್ರಮಾಣವನ್ನು ಕಡಿಮೆ ಮಾಡುವ ಮತ್ತು ಕ್ಯಾನ್ಸರ್ ಸಂಬಂಧಿತ ನೋವು ಮತ್ತು ಸಂಕಟಗಳನ್ನು ಹೋಗಲಾಡಿಸುವ ಜಾಗತಿಕ ಗುರಿಯನ್ನು ಹೊಂದಿದೆ.

ಕೆ.ಎಂ.ಸಿ. ಆಸ್ಪತ್ರೆ ಅತ್ತಾವರವು ಕರ್ನಾಟಕ ಕರಾವಳಿ ಪ್ರದೇಶದ ಪ್ರಮುಖ ಭೋದನಾ ಆಸ್ಪತ್ರೆಯಾಗಿದೆ. ಸುಮಾರು 20 ವರ್ಷಗಳಿಂದ ಪೀಡಿಯಾಟ್ರಿಕ್ ಹೆಮಟಾಲಜಿ ಮತ್ತು ಆಂಕಾಲಜಿ ವಿಭಾಗವು ಪೀಡಿಯಾಟ್ರಿಕ್ ವಿಭಾಗದಡಿಯಲ್ಲಿ ಆರಂಭಗೊಂಡಿದ್ದು ಕಳೆದ 21 ವರ್ಷಗಳಿಂದ ಮಕ್ಕಳಲ್ಲಿ ಕಂಡುಬರುವ ಎಲ್ಲಾ ರೀತಿಯ ಕ್ಯಾನ್ಸರ್‍ಗಳಿಗೆ ಚಿಕಿತ್ಸೆಯನ್ನು ನೀಡುತ್ತಾ ಬಂದಿದೆ. ಆಸ್ಪತ್ರೆಯಲ್ಲಿ ಮಕ್ಕಳಿಗಾಗಿಯೇ ಮೀಸಲಾದ ಆಂಕಾಲಜಿ ವಾರ್ಡ್, ನರ್ಸಿಂಗ್ ತಂಡ, ಪರಿಣತ ವೈದ್ಯರ ತಂಡ, ಸೋಶಿಯಲ್ ವರ್ಕರ್ಸ್, ಡೇಟಾ ಮ್ಯಾನೇಜರ್, ಮಕ್ಕಳ ಶಸ್ತ್ರ ಚಿಕಿತ್ಸಕರು ಮತ್ತು ವಿಕಿರಣಶಾಸ್ತ್ರ ವಿಭಾಗವನ್ನು ಕೂಡ ಹೊಂದಿದೆ. ಪ್ರಸ್ತುತ ಪ್ರತಿ ತಿಂಗಳಿಗೆ ಸುಮಾರು 80 ಹೊಸ ಮಕ್ಕಳ ಕ್ಯಾನ್ಸರ್ ಪ್ರಕರಣಗಳನ್ನು ಪರೀಕ್ಷಿಸುತ್ತಿದ್ದು ತೀವ್ರವಾದ ಲಿಂಫೋಬ್ಲಾಸ್ಟಿಕ್ ಲ್ಯುಕೇಮಿಯಾ ಪ್ರಕರಣದಲ್ಲಿ ಗುಣಹೊಂದುವ ಪ್ರಾಮಾಣವು 65-70% ರಷ್ಟಿದ್ದು ತೀವ್ರತರವಾದ ಲಿಂಫೋಬ್ಲಾಸ್ಟಿಕ್ ಲ್ಯುಕೇಮಿಯಾದಲ್ಲಿ ಗುಣಹೊಂದುವ ಪ್ರಾಮಾಣವು 80% ದಷ್ಟಿದೆ.

ಈ ಕಾರ್ಯಕ್ರಮದಲ್ಲಿ ಕೆ.ಎಂ.ಸಿ. ಆಸ್ಪತ್ರೆ ಮಂಗಳೂರಿನ ಮಕ್ಕಳ ಕ್ಯಾನ್ಸರ್ ವಿಭಾಗದ ಮುಖ್ಯಸ್ಥರಾದ ಡಾ. ಹರ್ಷಪ್ರಸಾದ್, ಮಕ್ಕಳ ರೋಗ ವಿಭಾಗದ ಮುಖ್ಯಸ್ಥರಾದ ಡಾ. ರವಿಕಿರಣ್ ಎಸ್., ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದ ವೈದ್ಯಕೀಯ ಮುಖ್ಯಸ್ಥರಾದ ಡಾ. ಜಾನ್ ರಾಮಪುರಮ್ ರವರು ಭಾಗವಹಿಸಲಿದ್ದಾರೆ ಎಂದು ಆಸ್ಪತ್ರೆಯ ಪ್ರಕಟಣೆಯು ತಿಳಿಸಿದೆ.


Spread the love