ಕೇಂದ್ರ ಬಜೆಟ್; ಮೂಗಿಗೆ ತುಪ್ಪ ಸವರಿ, ಮಹಿಳೆಯರನ್ನು ಮರೆತ ಮೋದಿ ಸರಕಾರ – ಡಾ| ಜಯಮಾಲಾ

Spread the love

ಕೇಂದ್ರ ಬಜೆಟ್; ಮೂಗಿಗೆ ತುಪ್ಪ ಸವರಿ, ಮಹಿಳೆಯರನ್ನು ಮರೆತ ಮೋದಿ ಸರಕಾರ – ಡಾ| ಜಯಮಾಲಾ

ಹಾಸನ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮಂಡಿಸಿರುವುದು ಮೂಗಿಗೆ ತುಪ್ಪ ಸವರುವ ಬಜೆಟ್ ಎಂದು ಮಹಿಳಾ ಮತ್ತು ಮಕ್ಕಳ ಸಚಿವೆ ಜಯಮಾಲಾ ವರ್ಣಿಸಿದ್ದಾರೆ.

ಕೇಂದ್ರ ಬಜೆಟ್ ಕುರಿತು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಮೊಸಳೆ ಗ್ರಾಮದಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಅವರು, ದೇಶದಲ್ಲಿ ಹೆಣ್ಣುಮಕ್ಕಳೂ ಇದ್ದಾರೆ ಎನ್ನುವುದನ್ನು ಕೇಂದ್ರ ಸರಕಾರ ಮರೆತಿದೆ. ಮಹಿಳೆಯರಿಗಾಗಿ ಯಾವುದೇ ಯೋಜನೆಗಳನ್ನು ಘೋಷಿಸಿಲ್ಲ. ಇದು ಚುನಾವಣೆ ಬಜೆಟ್ ಅಷ್ಟೆ ಎಂದಿದ್ದಾರೆ.

ರೈತರಿಗೆ ಕೇವಲ 6 ಸಾವಿರ ರೂಪಾಯಿ ಕೊಟ್ಟರೆ ಸಾಕಾಗುತ್ತಾ?, ಎಂದು ಪ್ರಶ್ನಿಸಿರುವ ಅವರು, ರಾಜ್ಯದಲ್ಲಿ ನಾವು 40 ಲಕ್ಷ ರೈತರ 2 ಲಕ್ಷ ರೂಪಾಯಿವರೆಗಿನ ಸಾಲ ಮನ್ನಾ ಮಾಡಿದ್ದೇವೆ. ಕೇಂದ್ರದವರಿಗೆ 20 ಲಕ್ಷ ರೈತರ ಸಾಲ ಮನ್ನಾ ಮಾಡುವುದಕ್ಕೆ ಆಗುವುದಿಲ್ವ?, ಯೋಜನೆಗಳನ್ನು ಘೋಷಣೆ ಮಾಡಿ ರಾಜ್ಯ ಸರಕಾರದ ಮೇಲೆ ಹೊರೆ ಹಾಕುತ್ತಾರೆ ಎಂದು ಸಚಿವೆ ಆಕ್ರೋಶ ವ್ಯಕ್ತಪಡಿಸಿ್ದ್ದಾರೆ.


Spread the love