ಕೇಂದ್ರ ಸರಕಾರದ ಗುಣಮಟ್ಟ ಮಾಪನ ಸಂಸ್ಥೆ ಗವರ್ನಿಂಗ್ ಬೋರ್ಡ್ ಸದಸ್ಯರಾಗಿ ಯು.ಟಿ.ಖಾದರ್  

Spread the love

ಕೇಂದ್ರ ಸರಕಾರದ ಗುಣಮಟ್ಟ ಮಾಪನ ಸಂಸ್ಥೆ ಗವರ್ನಿಂಗ್ ಬೋರ್ಡ್ ಸದಸ್ಯರಾಗಿ ಯು.ಟಿ.ಖಾದರ್  

ಮಂಗಳೂರು: ರಾಷ್ಟ್ರ ಮಟ್ಟದ ಗುಣಮಟ್ಟ ಮಾಪನ ಸಂಸ್ಥೆ ಪ್ರತಿಷ್ಠಿತ BIS (Beauro of Indian Standard) ರಾಷ್ಟ್ರೀಯ ಗವರ್ನಿಂಗ್ ಬೋರ್ಡ್ ಕೌನ್ಸಿಲ್ ಸದಸ್ಯರಾಗಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಯು.ಟಿ.ಖಾದರ್ ಅವರನ್ನು ಕೇಂದ್ರ ಸರಕಾರ ನೇಮಿಸಿ ಆದೇಶ ಹೊರಡಿಸಿದೆ.

ರಾಷ್ಟ್ರಮಟ್ಟದಲ್ಲಿ ಅಧ್ಯಕ್ಷರು ಸೇರಿ ಒಟ್ಟು 6 ಮಂದಿ ಸದಸ್ಯರಿರುವ ಬಿಐಎಸ್ ಸಂಸ್ಥೆಗೆ ದಕ್ಷಿಣ ಭಾರತದಿಂದ ಯು.ಟಿ.ಖಾದರ್ ನೇಮಕರಾಗಿದ್ದಾರೆ. ಕೇಂದ್ರ ಆಹಾರ ಸಚಿವರು ಇದರ ಅಧ್ಯಕ್ಷರಾಗಿದ್ದು, ಉಳಿದಂತೆ ಉತ್ತರ ಭಾರತದ ಮೂವರು ಸಚಿವರು, ಈರ್ವರು ಉನ್ನತ ಅಧಿಕಾರಿಗಳು ಸೇರಿದಂತೆ ಒಟ್ಟು ಐವರನ್ನು ಕೇಂದ್ರ ಸರಕಾರ ಆರಿಸಿದೆ.


Spread the love