ಕೊಂಕಣಿ ಅಕಾಡೆಮಿ ಮಾಜಿ ಅಧ್ಯಕ್ಷ ಎರಿಕ್ ಒಝೇರಿಯೊ ನಿಧನಕ್ಕೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸಂತಾಪ

Spread the love

ಕೊಂಕಣಿ ಅಕಾಡೆಮಿ ಮಾಜಿ ಅಧ್ಯಕ್ಷ ಎರಿಕ್ ಒಝೇರಿಯೊ ನಿಧನಕ್ಕೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸಂತಾಪ

ಕೊಂಕಣಿ ಸಾಹಿತ್ಯ ಅಕಾಡೆಮಿಯ ಸ್ಥಾಪನೆಗೆ ದುಡಿದವರಲ್ಲಿ ಪ್ರಮುಖರು, ಕೊಂಕಣಿಯ ಖ್ಯಾತ ಸಂಗೀತರಾರು, ಮಾಂಡ್ ಸೊಭಾಣ್ ಸಂಸ್ಥೆಯ ಗುರಿಕಾರರು, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಎರಿಕ್ ಒಝೇರಿಯೊರವರು ಅಕಾಲಿಕ ಮರಣ ಹೊಂದಿರುತ್ತಾರೆ.

ಇವರು ಮಾಂಡ್‌ ಸೊಭಾಣ್‌ (ಸುಂದರ ಕಲಾ ವೇದಿಕೆ) ಹೆಸರಿನ ಸಂಸ್ಥೆಯನ್ನು ಸ್ಥಾಪಿಸಿ, ಕಳೆದ 39 ವರ್ಷಗಳಿಂದ ಮಾತೃಭಾಷೆಯ ಬಗ್ಗೆ ಜಾಗೃತಿ ಮೂಡಿಸಲು ಶ್ರಮಿಸಿದ್ದಾರೆ. ಹಲವಾರು ಮಹತ್ವಪೂರ್ಣ ಕಾರ್ಯಕ್ರಮಗಳು, ಯಾತ್ರೆ- ತಿರುಗಾಟಗಳು, ಜಾಗೃತಿ ಅಭಿಯಾನಗಳ ಮೂಲಕ ಕೊಂಕಣಿ ಭಾಷೆಯನ್ನು ಬೆಳೆಸುವಲ್ಲಿ ತನ್ನನ್ನೇ ತಾನು ತೊಡಗಿಸಿಕೊಂಡಿದ್ದರು.

ಜಗತ್ತಿನಾದ್ಯಂತ ಕೊಂಕಣಿ ಭಾಷಿಕರ ಏಕೀಕರಣ. ಕೊಂಕಣಿ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಸಂರಕ್ಷಿಸುವುದು ಮತ್ತು ಉತ್ತೇಜಿಸುವುದು. ಗುಮಟ್, ಬೈಲಾ ನೃತ್ಯ, ಹಿತ್ತಾಳೆ ಬ್ಯಾಂಡ್‌ನಂತಹ ಕೊಂಕಣಿ ಜಾನಪದ ರೂಪಗಳ ಪುನರುಜ್ಜೀವನ. ಸಿದ್ದಿ, ಕುಡುಬಿ, ಖಾರ್ವಿ ಸಮುದಾಯಗಳ ಕಲ್ಯಾಣ. ಭಾರತದ ಪಶ್ಚಿಮ ಕರಾವಳಿಯಾದ್ಯಂತ ವಿವಿಧ ಉಪಭಾಷೆಗಳ ನಡುವೆ ಸೇತುವೆಯಾಗಿರುವ ಶ್ರೀಯುತರು ಕಲೆ ಮತ್ತು ಸಂಸ್ಕೃತಿ ಹಾಗೂ ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆಗೈದಿರುತ್ತಾರೆ. 1000 ಕ್ಕೂ ಹೆಚ್ಚು ಹಾಡುಗಳನ್ನು ಸಂಯೋಜಿಸಿದ್ದಾರೆ, ಜಗತ್ತಿನಾದ್ಯಂತ 800 ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ. ಕೊಂಕಣಿ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಜಾಗೃತಿ ಮೂಡಿಸಿದ್ದಾರೆ.

ʼಇವರ ನಿಧನದಿಂದ ಕೊಂಕಣಿ ಭಾಷೆ, ಸಾಹಿತ್ಯ, ಸಂಗೀತ ಕ್ಷೇತ್ರಕ್ಕೆ ತುಂಬಲಾಗದಷ್ಟು ಅಪಾರ ನಷ್ಟವಾಗಿದೆ. ಇವರ ಅಕಾಲಿಕ ಮರಣದಿಂದ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ದುಃಖಪಡುತ್ತದೆ ಹಾಗೂ ಅವರ ಕುಟುಂಬಕ್ಕೆ ಅಗಲಿಕೆಯ ನೋವನ್ನು ಭರಿಸಲು ಪರಮಾತ್ಮನಾದ ದೇವರು ಶಕ್ತಿ ನೀಡಲಿʼ ಎಂದು ಅಕಾಡೆಮಿಯ ಸರ್ವ ಸದಸ್ಯರ ಪರವಾಗಿ, ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್‌ರವರು ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments