ಕೊಡಂಗಳ ನದಿಯಲ್ಲಿ ಉಪಯೋಗಿಸಿದ ಪಿಪಿಇ ಉಡುಪು ಪತ್ತೆ – ದೂರು ದಾಖಲು

Spread the love

ಕೊಡಂಗಳ ನದಿಯಲ್ಲಿ ಉಪಯೋಗಿಸಿದ ಪಿಪಿಇ ಉಡುಪು ಪತ್ತೆ – ದೂರು ದಾಖಲು

ಉಡುಪಿ: ಅಲೆವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಡಂಗಳ ಎಂಬಲ್ಲಿ ನದಿಯಲ್ಲಿ ಕೊರೋನಾ ಚಿಕಿತ್ಸೆಗೆ ವೈದ್ಯರು ಧರಿಸುವ ಪರ್ಸನಲ್ ಪ್ರೊಟೆಕ್ಷನ್ ಎಕ್ಯುಪ್ ಮೆಂಟ್ (ಪಿಪಿಇ) ಉಡುಪು ಮಂಗಳವಾರ ಪತ್ತೆಯಾಗಿದೆ ಎಂದು ಅಲೆವೂರು ಪಂಚಾಯತ್ ಅಧ್ಯಕ್ಷರು ದೂರಿದ್ದಾರೆ.

ಪಿಪಿಇ ಉಡುಪಿ ಪತ್ತೆಯಾಗಿರುವ ಬಗ್ಗೆ ಈಗಾಗಲೇ ಪಂಚಾಯತಿ ವತಿಯಿಂದ ಆರೊಗ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಆರೋಗ್ಯ ಇಲಾಖೆಯಿಂದ ಪೊಲೀಸರಿಗೆ ದೂರು ನೀಡಲಾಗಿದೆ.

ಇದೀಗ ಈ ಪಿಪಿಇ ಕೊರೋನಾ ಚಿಕಿತ್ಸೆಯಲ್ಲಿ ಮಾತ್ರ ಬಳಸುವಂತದ್ದಾಗಿರುವುದರಿಂದ ಅಪಾಯಕಾರಿಯಾಗಿರುವ ಅದನ್ನು ಯಾವ ಆಸ್ಪತ್ರೆಯಲ್ಲಿ ಬಳಸಿದ್ದು, ಯಾರು ಅದನ್ನು ಇಲ್ಲಿಗೆ ತಂದು ಎಸೆದವರು ಮತ್ತು ಯಾವ ಉದ್ದೇಶದಿಂದ ಎಸೆಯಲಾಗಿದೆ ಎಂಬ ಬಗ್ಗೆ ಪೊಲೀಸರಿಂದ ತನಿಖೆಯಾಗಬೇಕಾಗಿದೆ.

ಪೊಲೀಸರ ತನಿಖೆಯ ನಂತರ ಈ ಪಿಪಿಇ ಯನ್ನು ಬಯೋಕೆಮಿಕಲ್ ವೇಸ್ಟ್ ಮ್ಯಾನೆಜ್ ಮೆಂಟ್ ನಿಯಮಗಳ ಪ್ರಕಾರ ನಾಶಮಾಡಬೇಕು, ಅದರ ವಿಧಾನಗಳನ್ನು ಪಂಚಾಯತಿಗೆ ನೀಡಲು ಆರೋಗ್ಯ ಇಲಾಖೆ ಸಿದ್ದವಾಗಿದೆ ಎಂದು ಕೊರೋನಾ ನೋಡಲ್ ಅಧಿಕಾರಿ ಡಾ. ಪ್ರಶಾಂತ್ ಭಟ್ ತಿಳಿಸಿದ್ದಾರೆ.


Spread the love