ಕೊಡೇರಿ ದೋಣಿ ದುರಂತ; ಓರ್ವ ಮೀನುಗಾರನ ಮೃತದೇಹ ಪತ್ತೆ

Spread the love

ಕೊಡೇರಿ ದೋಣಿ ದುರಂತ; ಓರ್ವ ಮೀನುಗಾರನ ಮೃತದೇಹ ಪತ್ತೆ

ಕುಂದಾಪುರ: ಬೈಂದೂರು ಸಮೀಪದ ಕೊಡೇರಿ ಬಳಿ ಭಾನುವಾರ ಸಂಭವಿಸಿದ್ದ ದೋಣಿ ದುರಂತದಲ್ಲಿ ಕಾಣೆಯಾದ ನಾಲ್ಕು ಮೀನುಗಾರರ ಪೈಕಿ ಒರ್ವ ಮೀನುಗಾರನ ಮೃತದೇಹ ಕಿರಿಮಂಜೇಶ್ವರದ ಹೊಸ ಹಿತ್ಲು ಸಮೀಪ ಸೋಮವಾರ ಬೆಳಿಗ್ಗೆ ಪತ್ತೆಯಾಗಿದೆ.

ಮೃತದೇಹ ಪತ್ತೆಯಾದ ಮೀನುಗಾರರನ್ನು ನಾಗ ಖಾರ್ವಿ (55) ಎಂದು ಗುರುತಿಸಲಾಗಿದೆ.

ಕಿರಿಮಂಜೇಶ್ವರ ಗ್ರಾಮದ ಕೊಡೇರಿ ಮೀನುಗಾರಿಕಾ ಬಂದರು ಪ್ರವೇಶ ದ್ವಾರದ ಬಳಿ ಸಮುದ್ರದಲ್ಲಿ ಭಾನುವಾರ ಮೀನುಗಾರಿಕಾ ನಾಡದೋಣಿ ಮಗುಚಿತ್ತು. ಕೆಲವು ನಾಡದೋಣಿಗಳ ಜತೆಗೆ ಮೀನುಗಾರಿಕೆ ನಡೆಸುತ್ತಿದ್ದ ಉಪ್ಪುಂದ ಕರ್ಕಿಕಳಿಯ ‘ಸಾಗರಶ್ರೀ’ ದೋಣಿ ಅಲೆಗಳ ಹೊಡೆತದಿಂದ ನಿಯಂತ್ರಣ ಕಳೆದುಕೊಂಡು ತಡೆಗೋಡೆಗೆ ಬಡಿದು ಮಗುಚಿದಾಗ ಅದರಲ್ಲಿದ್ದ 12 ಜನರು ನೀರಿಗೆ ಬಿದ್ದಿದ್ದರು. ಅದರಲ್ಲಿ ಎಂಟು ಮಂದಿ ಈಜಿ ದಡ ಸೇರಿದ್ದರೆ ಉಳಿದ ನಾಲ್ವರು ನಾಪತ್ತೆಯಾಗಿದ್ದರು. ಇನ್ನೂ ಮೂವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ


Spread the love