ಕೊಡೇರಿ ದೋಣಿ ದುರಂತ: ನಾಲ್ಕನೇ ಮೀನುಗಾರನ ಮೃತದೇಹ ಪತ್ತೆ

Spread the love

ಕೊಡೇರಿ ದೋಣಿ ದುರಂತ: ನಾಲ್ಕನೇ ಮೀನುಗಾರನ ಮೃತದೇಹ ಪತ್ತೆ

ಕುಂದಾಪುರ: ಕೊಡೇರಿ ದೋಣಿ ದುರಂತದಲ್ಲಿ ನಾಪತ್ತೆಯಾದ ನಾಲ್ವರು ಮೀನುಗಾರರ ಶವಗಳು ಸತತ ಕಾರ್ಯಾಚರಣೆಯ ಬಳಿಕ ಪತ್ತೆಯಾಗಿದೆ.

ಉಪ್ಪುಂದದ ಕರ್ಕಿಕಳಿ ನಿವಾಸಿ ಲಕ್ಷ್ಮಣ ಖಾರ್ವಿ(34) ಎಂಬವರ ಶವ ಕಿರಿಮಂಜೇಶ್ವರದ ಆದ್ರಾಗೋಳಿಯ ಕಡಲತೀರದಲ್ಲಿ ಹಾಗೂ ಉಪ್ಪುಂದ ಫಿಶರೀಶ್ ಕಾಲನಿ ನಿವಾಸಿ ಶೇಖರ(39) ಎಂಬವರ ಮೃತದೇಹ ಹೊಸಹಿತ್ಲು ಕಡಲತೀರದಲ್ಲಿ ಪತ್ತೆಯಾಗಿದೆ. ಅಲ್ಲದೆ ಗಂಗೆಬೈಲು ಕಡಲತೀರದಲ್ಲಿ ಮಂಜುನಾಥ ಖಾರ್ವಿಯವರ ಮೃತದೇಹ ಪತ್ತೆಯಾಗಿದೆ. ಇದರೊಂದಿಗೆ ನಾಪತ್ತೆಯಾಗಿದ್ದ ನಾಲ್ವರು ಮೀನುಗಾರರ ಶವಗಳು ಪತ್ತೆಯಾಗಿದೆ.

ಪ್ರತಿಕೂಲ ಹವಮಾನದದಿಂದಾಗಿ ಮೀನುಗಾರರ ಹುಡುಕಾಟಕ್ಕೆ ತೊಂದರೆಯಾಗಿದ್ದು, ಸೋಮವಾರ ಸಂಜೆಯಾಗುತ್ತಲೇ ಶೋಧ ಕಾರ್ಯ ಮೊಟಕುಗೊಳಿಸಿ ಮಂಗಳವಾರ ಮತ್ತೆ ಮುಂದುವರಿಸಲು ನಿರ್ಧರಿಸಲಾಗಿತ್ತು. ಆದರೆ ಸೋಮವಾರ ರಾತ್ರಿ ಲಕ್ಷ್ಮಣ ಖಾರ್ವಿ, ಶೇಖರ ಖಾರ್ವಿಯವರ ಮತ್ತು ಮಂಜುನಾಥ ಖಾರ್ವಿ ಯವರ ಮೃತದೇಹ ಕಡಲತೀರದಲ್ಲಿ ಪತ್ತೆಯಾಗಿದೆ. ನಾಪತ್ತೆಯಾದ ನಾಲ್ವರು ಮೀನುಗಾರರ ಪೈಕಿ ನಾಗ ಖಾರ್ವಿಯವರ ಮೃತದೇಹ ಸೋಮವಾರ ಬೆಳಿಗ್ಗೆ ಪತ್ತೆಯಾಗಿತ್ತು. ಇದೀಗ ನಾಲ್ವರು ಮೀನುಗಾರರ ಮೃತದೇಹ ಪತ್ತೆಯಾದಂತಾಗಿದೆ.

ಕೊಡೇರಿ ದೋಣಿ ದುರಂತ: ಮತ್ತೆ ಇಬ್ಬರು ಮೀನುಗಾರರ ಮೃತದೇಹ ಪತ್ತೆ

ಕುಂದಾಪುರ: ಕೊಡೇರಿ ದೋಣಿ ದುರಂತದಲ್ಲಿ ನಾಪತ್ತೆಯಾದ ನಾಲ್ವರು ಮೀನುಗಾರರ ಪೈಕಿ ಇನ್ನಿಬ್ಬರು ಮೀನುಗಾರರ ಮೃತದೇಹ ಸೋಮವಾರ ರಾತ್ರಿ ಒಂಭತ್ತು ಗಂಟೆಯ ಬಳಿಕ ಪತ್ತೆಯಾಗಿದೆ.

ಉಪ್ಪುಂದದ ಕರ್ಕಿಕಳಿ‌ ನಿವಾಸಿ ಲಕ್ಷ್ಮಣ ಖಾರ್ವಿ(34) ಎಂಬವರ ಶವ ಕಿರಿಮಂಜೇಶ್ವರದ ಆದ್ರಾಗೋಳಿಯ ಕಡಲತೀರದಲ್ಲಿ ಹಾಗೂ ಉಪ್ಪುಂದ‌ ಫಿಶರೀಶ್ ಕಾಲನಿ ನಿವಾಸಿ ಶೇಖರ(39) ಎಂಬವರ ಮೃತದೇಹ ಹೊಸಹಿತ್ಲು ಕಡಲತೀರದಲ್ಲಿ ಪತ್ತೆಯಾಗಿದೆ.

ನಾಪತ್ತೆಯಾದ ನಾಲ್ವರ ಪೈಕಿ ಇದೀಗ ಮೂವರ ಮೃತದೇಹ ಪತ್ತೆಯಾಗಿದ್ದು ಮಂಜುನಾಥ ಖಾರ್ವಿಗಾಗಿ ಹುಡುಕಾಟ ಮುಂದುವರೆದಿದೆ.

ಪ್ರತಿಕೂಲ ಹವಮಾನದದಿಂದಾಗಿ ಮೀನುಗಾರರ ಹುಡುಕಾಟಕ್ಕೆ ತೊಂದರೆಯಾಗಿದ್ದು, ಸೋಮವಾರ ಸಂಜೆಯಾಗುತ್ತಲೇ ಶೋಧ ಕಾರ್ಯ ಮೊಟಕುಗೊಳಿಸಿ ಮಂಗಳವಾರ ಮತ್ತೆ ಮುಂದುವರಿಸಲು ನಿರ್ಧರಿಸಲಾಗಿತ್ತು. ಆದರೆ ಸೋಮವಾರ ರಾತ್ರಿ ಲಕ್ಷ್ಮಣ ಖಾರ್ವಿ ಹಾಗೂ ಶೇಖರ ಖಾರ್ವಿಯವರ ಮೃತದೇಹ ಕಡಲತೀರದಲ್ಲಿ ಪತ್ತೆಯಾಗಿದೆ‌. ಪತ್ತೆಯಾದ ನಾಲ್ವರು ಮೀನುಗಾರರ ಪೈಕಿ ನಾಗ ಖಾರ್ವಿಯವರ ಮೃತದೇಹ ಸೋಮವಾರ ಬೆಳಿಗ್ಗೆ ಪತ್ತೆಯಾಗಿತ್ತು. ಇದೀಗ ಮೂವರು ಮೀನುಗಾರರ ಮೃತದೇಹ ಪತ್ತೆಯಾಗಿದ್ದು, ಉಳಿದೊಬ್ಬರ ಹುಡುಕಾಟಕ್ಕಾಗಿ ಮಂಗಳವಾರವೂ ಶೋಧ ಕಾರ್ಯ ಮುಂದುವರೆಯಲಿದೆ‌.


Spread the love