ಕೊರೊನಾ ವಾರಿಯರ್: ಕೇರಳದ ಮಕ್ಕಳನ್ನು ಕುಟುಂಬ ಸೇರಿಸಿದ ಎಎಸ್ಐ ಸಂತೋಷ್

m
Spread the love

ಕೊರೊನಾ ವಾರಿಯರ್: ಕೇರಳದ ಮಕ್ಕಳನ್ನು ಕುಟುಂಬ ಸೇರಿಸಿದ ಎಎಸ್ಐ ಸಂತೋಷ್

ಮಂಗಳೂರು: ರಜೆಯ ನಿಮಿತ್ತ ಮಂಗಳೂರಿಗೆ ಬಂದು ಕೇರಳದಲ್ಲಿರುವ ತಂದೆ, ತಾಯಿಯನ್ನು ಸೇರಲಾಗದೇ ಸಂಕಷ್ಟದಲ್ಲಿದ್ದ ಇಬ್ಬರು ಮಕ್ಕಳಿಗೆ ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ (ಎಎಸ್ಐ) ಸಂತೋಷ್ ಕುಮಾರ್ ಪಡೀಲ್ ನೆರವಾಗಿದ್ದಾರೆ. ಖುದ್ದಾಗಿ ಕೇರಳದ ಗಡಿಯವರೆಗೂ ಹೋಗಿ ಮಕ್ಕಳನ್ನು ಪೋಷಕರ ಮಡಿಲಿಗೆ ಒಪ್ಪಿಸಿ ಬಂದಿದ್ದಾರೆ.

m

ಪಂಪ್ವೆಲ್ ನಿವಾಸಿಯಾಗಿರುವ ಮಗುವೊಂದನ್ನು ಚಿಕಿತ್ಸೆಗೆ ಕರೆದೊಯ್ಯು ವುದಕ್ಕೂ ಸಂತೋಷ್ ಕುಮಾರ್ ಅವರು ಮಂಗಳವಾರ ನೆರವಾಗಿದ್ದಾರೆ.

‘ಸಂತೋಷ್ ಕುಮಾರ್ ಪಡೀಲ್ ನಮ್ಮ ಈ ದಿನದ ಕೊರೊನಾ ವಾರಿಯರ್. ಇಂತಹ ಅಧಿಕಾರಿಯನ್ನು ಹೊಂದಿರುವುದಕ್ಕಾಗಿ ಪೊಲೀಸ್ ಇಲಾಖೆ ಹೆಮ್ಮೆಪಡುತ್ತದೆ’ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ ಶ್ಲಾಘಿಸಿದ್ದಾರೆ.


Spread the love