ಕೊರೋನಾ ಗೆ ಉಡುಪಿ ಜಿಲ್ಲೆಯಲ್ಲಿ 6 ನೇ ಬಲಿ

Spread the love

ಕೊರೋನಾ ಮಹಾಮಾರಿಗೆ ಉಡುಪಿ ಜಿಲ್ಲೆಯಲ್ಲಿ 6 ನೇ ಬಲಿ

ಉಡುಪಿ: ಮಹಾಮಾರಿ ಕೊರೋನಾ ಉಡುಪಿ ಜಿಲ್ಲೆಯಲ್ಲಿ ಗುರುವಾರ ಮತ್ತೋರ್ವ ವ್ಯಕ್ತಿಯನ್ನು  ಬಲಿ ಪಡೆದಿದ್ದು ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿನಿಂದ ಮೃತರಾದವರ ಸಂಖ್ಯೆ 6 ಕ್ಕೆ ಏರಿಕೆ ಆಗಿದೆ.

ಹೈ ಶುಗರ್  ನಿಂದ ಬಳಲುತ್ತಿದ್ದ ಉಡುಪಿ ನಗರದ 46 ವರ್ಷ ವಯಸ್ಸಿನ ವ್ಯಕ್ತಿಯೋರ್ವರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಅವರಲ್ಲಿ ಕೋವಿಡ್ ಲಕ್ಷಣ ಕಂಡು ಬಂದ ಹಿನ್ನಲೆಯಲ್ಲಿ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ರಾತ್ರಿ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿದ್ದು ಕೂಡಲೇ ಟಿ ಎಮ್ ಎ ಪೈ ಆಸ್ಪತ್ರೆ ಉಡುಪಿ ಇಲ್ಲಿಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಮೃತಪಟ್ಟಿದ್ದಾರೆ.


Spread the love