ಕೊರೋನಾ ತಡೆಯುವಲ್ಲಿ ಸರಕಾರ ಸಂಪೂರ್ಣ ವಿಫಲ ಬಿಎಸ್ ವೈ ರಾಜಿನಾಮೆಗೆ ದ.ಕ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ ತೌಫಿಕ್ ಆಗ್ರಹ

Spread the love

ಕೊರೋನಾ ತಡೆಯುವಲ್ಲಿ ಸರಕಾರ ಸಂಪೂರ್ಣ ವಿಫಲ ಬಿಎಸ್ ವೈ ರಾಜಿನಾಮೆಗೆ ದ.ಕ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ ತೌಫಿಕ್ ಆಗ್ರಹ

ಮಂಗಳೂರು: ಕೋವಿಡ್ -19 ನಂತಹ ಮಹಾಮಾರಿ ಇರುವ ಈ ಸಂದರ್ಭದಲ್ಲಿ ಬಡವರ ಕಷ್ಟಕ್ಕೆ ಸ್ಪಂದಿಸದ ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರಾಜೀನಾಮೆ ನೀಡಬೇಕಾಗಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಎಂ ತೌಫಿಕ್ ಆಗ್ರಹಿಸಿದ್ದಾರೆ.

ಭೀಕರತೆ
ಕೊರೊನ (covid-19)ಹೆಸರು ಕೇಳಿದ್ರೆನೇ ಭಯ ಹುಟ್ಟಿಸುವ0ತ ಸಾಂಕ್ರಾಮಿಕ ರೋಗ ಪ್ರಪಂಚದ 188 ಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಕದಂಬ ಬಾಹುವನ್ನು ಚಾಚಿ ಲಕ್ಷಾಂತರ ಜನರ ಪ್ರಾಣ ಹೀರಿದೇ.ತನ್ನ ಅಸ್ತಿತ್ವ ಎಲ್ಲೆಡೆ ಹರಡುತ್ತಿದೆ. , ಲಾಕ್ ಡೌನ್ ಸೀಲ್ ಡೌನ್ ನಂತ ಎಷ್ಟೇ ಜಾಗರೂಕತೆಯ ಕ್ರಮ ಕೈಗೊಂಡರು ಎಲ್ಲವನ್ನು ಮೀರಿ ಪಸರಿಸುತ್ತಿದೆ. ಜನರ ಜೀವ, ಜೀವನ, ಪ್ರಪಂಚದ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿ ಸಾವು ನೋವಿನ ಕೂಪಕ್ಕೆ ತಳ್ಳಿದೆ. ಎಷ್ಟೋ ಜನರು ತಿನ್ನಲು ಸಹ ಅಸಾಧ್ಯವಾದ ಪರಿಸ್ಥಿತಿಗೆ ನೂಕಿದೆ ಈ ಕೊರೊನ.

ವಿಫಲತೆ
ಮೊದಲು ಜೀವ ಮುಖ್ಯ ನಂತರ ಜೀವನ ಅಂತ ಹೇಳಿ ಕಠಿಣ ಕಾನೂನುಗಳನ್ನು ಮಾಡಿದ ಸರ್ಕಾರ ನಂತರದ ದಿನಗಳಲ್ಲಿ ಮನುಷ್ಯರ ಜೀವಕ್ಕಿಂತ ದೇಶದ ಆರ್ಥಿಕತೆ ಮುಖ್ಯ ಎಂದು ಮಾಸ್ಕ್, ಟೆಸ್ಟಿಂಗ್, ಸ್ಯಾನಿಟೈಸರ್ ನ ಹಗರಣದಲ್ಲಿ ಮೈಮರೆತ ರಾಜ್ಯದ ಬಿಜೆಪಿ ಸರ್ಕಾರವು covid-19 ನಿಯಂತ್ರಿಸುವಲ್ಲಿ ಪೂರ್ತಿಯಾಗಿ ವಿಫಲವಾಗಿದೆ. ನಿಮ್ಮ ಜೀವ ನಿಮ್ಮ ಆರೋಗ್ಯ ನಿಮ್ಮ ಕೈಯ್ಯಲ್ಲಿ ಅನ್ನೋ ಸಂದೇಶ ಕೊಟ್ಟು ಎಲ್ಲಾ ರೂಲ್ಸ್ಗಳನ್ನ ಸಡಿಲಗೊಳಿಸಿದ್ದೆ ಕೊರೊನ ಹೆಚ್ಚಾಗಳು ಕಾರಣ. ಶುರುವಿನಲ್ಲಿ 1, 5, 10, ಎಂದು ಒಂದಂಕಿಯಲ್ಲಿ ಜನರ ಸಾವಿಗೆ ಕಾರಣ ಆಗ್ತಿದ್ದ ಈ covid-19 ಈಗ ನಾಲ್ಕoಕಿ ದಾಟಿ ಮುಂದೆ ಹೋಗ್ತಿರೋದು ಸರ್ಕಾರದ ಅಜಾಗರೂಕತೆಯೇ ಆಗಿದೆ. ಇಂತ ಸಾವು ನೋವುಗಳಲ್ಲೂ ಒಂದಾಗಿ ಎಲ್ಲರ ಹಿತಾಸಕ್ತಿಯ ಕಡೆ ಅಷ್ಟಾಗಿ ಗಮನಿಸದೆ ಪಕ್ಷದ ಹಿಂದೆ ಹೋದದ್ದು ಸಹ ಸರ್ಕಾರದ ತಪ್ಪಾಗಿದೆ. ಹೈಡ್ರಾ ಕ್ಸಿ ಕ್ಲೋರೋ ಕ್ವೀನ್, ಪ್ಲಾಸ್ಮ, ಆಯುರ್ವೇದ ಅಂತ ಹೇಳಿದ್ರು ಇನ್ನು ಯಾವುದೇ ಜಾರಿಗೆ ಬರದೇ ಇರೋದು ಮುಂದೊಂದು ದಿನ ಪ್ರತಿ ಮನೆಯಲ್ಲೂ ಕೊರೊನ ಬಂದ್ರು ಆಶ್ಚರ್ಯ ಇಲ್ಲ. ಕೊರೊನದೊಂದಿಗೆ ನಮ್ಮ ಪಯಣ ಇನ್ನು ಅದೆಷ್ಟು ದಿನ. ಏನೆ ಆಗ್ಲಿ ನಾವು ಸಹ ನಮ್ಮ ಸುರಕ್ಷತೆಯಾ ಬಗ್ಗೆ ಹೆಚ್ಚೇ ಕಾಳಜಿ ವಹಿಸಬೇಕು.


Spread the love