ಕೊರೋನಾ ದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಪುತ್ತಿಗೆ ಸ್ವಾಮೀಜಿ ಡಿಸ್ಚಾರ್ಜ್

Spread the love

ಕೊರೋನಾ ದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಪುತ್ತಿಗೆ ಸ್ವಾಮೀಜಿ ಡಿಸ್ಚಾರ್ಜ್

ಉಡುಪಿ: ಕೋರೊನಾ ಸೋಂಕಿಗೆ ತುತ್ತಾಗಿ ಮಣಿಪಾಲದ ಕೆ ಎಮ್ ಸಿ ಆಸ್ಪತ್ರೆಗೆ ದಾಖಲಾಗಿದ್ದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಕೋರೋನಾ ಪಾಸಿಟಿವ್ ದೃಢಗೊಂಡ ಹಿನ್ನಲೆಯಲ್ಲಿ ಮಣಿಪಾಲ ಕೆ ಎಮ್ ಸಿ ಆಸ್ಪತ್ರೆಯಲ್ಲಿ 12 ದಿನಗಳ ಕಾಲ ಚಿಕಿತ್ಸೆ ಪಡೆದ ಸ್ವಾಮಿಜಿಗಳು ಸದ್ಯ ಪುತ್ತಿಗೆ ಮೂಲ ಮಠದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ

ಸ್ವಾಮೀಜಿಗಳ ಆರೋಗ್ಯ ಸ್ಥಿರವಾಗಿದ್ದು, ಸ್ವಾಮೀಜಿಗೆ ವಿಶ್ರಾಂತಿ ಅವಶ್ಯಕತೆ ಇದೆ. ಭಕ್ತರು ಮಠದತ್ತ ಸದ್ಯಕ್ಕೆ ಆಗಮಿಸುವುದು ಬೇಡ ಹಾಗೂ ಅನಾರೋಗ್ಯ ಕಾಲದಲ್ಲಿ ಯೋಗಕ್ಷೇಮ ವಿಚಾರಿಸಿದ ಎಲ್ಲರಿಗೂ ಧನ್ಯವಾದವನ್ನು ಸಲ್ಲಿಸಿದ್ದಾರೆ ಎಂದು ಪುತ್ತಿಗೆ ಮಠದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ


Spread the love