ಕೊರೋನಾ ವೈರಸ್: ಉಡುಪಿಯಲ್ಲಿ ಮತ್ತೆ 15 ಹೊಸ ಪಾಸಿಟಿವ್ ಪ್ರಕರಣ ದೃಢ

Spread the love

ಕೊರೋನಾ ವೈರಸ್: ಉಡುಪಿಯಲ್ಲಿ ಮತ್ತೆ 15 ಹೊಸ ಪಾಸಿಟಿವ್ ಪ್ರಕರಣ ದೃಢ

ಉಡುಪಿ: ಜಿಲ್ಲೆಯಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಏರುತ್ತಲೇ ಇದ್ದು,, ಶುಕ್ರವಾರ ಮತ್ತೆ ಜಿಲ್ಲೆಯಲ್ಲಿ  15  ಮಂದಿಯಲ್ಲಿ ಕೊರೋನಾ ವೈರಸ್ ಪಾಸಿಟಿವ್ ದೃಢವಾಗಿದೆ.

ಶುಕ್ರವಾರ ಮಧ್ಯಾಹ್ನ ಪ್ರಕಟವಾದ ಮಾರ್ನಿಂಗ್ ಹೆಲ್ತ್ ಬುಲೆಟಿನ್ ನಲ್ಲಿ 15 ಮಂದಿಗೆ ಸೋಂಕು ದೃಢಗೊಂಡಿದ್ದು ಎಲ್ಲಾ 15 ಮಂದಿ ಮಹಾರಾಷ್ಟ್ರದಿಂದ ವಾಪಾಸಾಗಿದ್ದಾರೆ.

ಸೋಂಕಿತರಲ್ಲಿ 9 ಗಂಡು, ನಾಲ್ವರು ಮಹಿಳೆಯರು, ಎರಡು ಮಕ್ಕಳು ಸೇರಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 164 ಕ್ಕೆ ಏರಿಕೆಯಾಗಿದೆ. ಈ ವರೆಗೆ ಸೋಂಕಿತರಲ್ಲಿ ಮಹಾರಾಷ್ಟ್ರದಿಂದ ಬಂದವರು-139 ಮಂದಿ ಇದ್ದು ಜಿಲ್ಲೆಯ ಒಟ್ಟು ಸೋಂಕಿತರಲ್ಲಿ 34 ಮಕ್ಕಳು ಸೇರಿದ್ದಾರೆ.

ಎಲ್ಲಾ ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗುವುದು


Spread the love