ಕೊರೋನಾ: ಸಿಎಮ್ ಬಿ ಎಸ್ ವೈ ಶೀಘ್ರ ಚೇತರಿಕೆಗೆ ದಿನೇಶ್ ಗುಂಡೂರಾವ್ ಹಾರೈಕೆ

Spread the love

ಕೊರೋನಾ: ಸಿಎಮ್ ಬಿ ಎಸ್ ವೈ ಶೀಘ್ರ ಚೇತರಿಕೆಗೆ ದಿನೇಶ್ ಗುಂಡೂರಾವ್ ಹಾರೈಕೆ

ಉಡುಪಿ: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಕೊರೋನಾ ವೈರಸ್ ಸೋಂಕಿನಿಂದ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾರೈಸಿದ್ದಾರೆ.

ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಯಡಿಯೂರಪ್ಪ ರಾಜ್ಯದ ಹಿರಿಯ ನಾಯಕರು ಅವರಿಗೆ ವಯಸ್ಸಾಗಿರುವುದರಿಂದ ಸಹಜವಾಗಿ ಆತಂಕ ಇದೆ. ಸಿಎಮ್ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕು ಅಲ್ಲದೆ ವೈದ್ಯರು ಕೂಡ ಅವರಿಗೆ ಹೆಚ್ಚು ಮುತುವರ್ಜಿಯಿಂದ ಚಿಕಿತ್ಸೆ ನೀಡಬೇಕು. ಒಟ್ಟಾರೆ ಸಿಎಂ ಯಡಿಯೂರಪ್ಪ ಶೀಘ್ರ ಗುಣಮುಖರಾಗಲಿ ಅವರ ಜೊತೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕಾಂಗ್ರೆಸ್ ಶಾಸಕ ಐವನ್ ಡಿಸೋಜಾ ಕೂಡ ಬೇಗ ಗುಣಮುಖರಾಗಲಿ ಎಂದು ಅವರು ಹಾರೈಸಿದರು.


Spread the love