ಕೊಲೆ ಪ್ರಕರಣ : ನಾಲ್ವರು ಆರೋಪಿಗಳ ಬಂಧನ

Spread the love

ಕೊಲೆ ಪ್ರಕರಣ : ನಾಲ್ವರು ಆರೋಪಿಗಳ ಬಂಧನ

ಮಂಗಳೂರು: ಯುವಕನೋರ್ವನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕಂಕನಾಡಿ ನಗರ ಠಾಣಾ ಪೋಲಿಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಪಡೀಲ್ ವೀರನಗರ ನಿವಾಸಿ ಪುನೀತ್ ಯಾನೆ ಪಚ್ಚು, ಕಣ್ಣೂರು ಹೊಸಗದ್ದೆ ಪೇರ್ಲ ನಿವಾಸಿಗಳಾದ ಶರತ್, ನಿಖಿಲ್, ಕೊಡಕ್ಕಲ್ ಶಿವನಗರ ನಿವಾಸಿ ಪ್ರಕಾಶ್ ಶೆಟ್ಟಿ ಎಂದು ಗುರುತಿಸಲಾಗಿದೆ.

ಕೃಷ್ಣಾ ಜನ್ಮಾಷ್ಟಮಿಯ ಪ್ರಯುಕ್ತ ಸೆ.14 ರಾತ್ರಿ ಅತ್ತಾವರದಲ್ಲಿ ನಡೆದ ಮೊಸರು ಕುಡಿಕೆ ಕಾರ್ಯಕ್ರಮ ವೀಕ್ಷಿಸಲು ಕೊಡಿಕಲ್ ಶಿವನಗರ ನಿವಾಸಿ ನಿಸರ್ಗ (19) ಎಂಬವರು ತನ್ನ ಸ್ನೇಹಿತರಾದ ನಿಶಾಂತ್, ಪುನೀತ್, ನಿಖಿಲ್, ಪ್ರಕಾಶ್ ಹಾಗೂ ಶರತ್ ನೊಂದಿಗೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿ ಹಿಂದಿರುಗುತ್ತಿದ್ದಾಗ ರಾತ್ರಿ 2.30ರ ವೇಳೆಗೆ ಪಡೀಲ್ ರೈಲ್ವೆ ಸೇತುವೆ ಬಳಿ ಎಲ್ಲರೂ ಸೇರಿದ್ದಾರೆ. ಈ ಸಂದರ್ಭ ನಿಸರ್ಗನ್ನನ್ನು ಉದ್ದೇಶಿಸಿ ಪುನೀತ್ ಎಲ್ಲರ ಎದುರು ನನ್ನನ್ನು ಕೀಳಾಗಿ ನೋಡುತ್ತಿ ಎಂದು ಚೂರಿಯಿಂದ ಹೊಟ್ಟೆಯ ಎಡಭಾಗಕ್ಕೆ ಇರಿದಿದ್ದಾನೆ ಎನ್ನಲಾಗಿದೆ. ತೀರ್ವ ಗಾಯಗೊಂಡ ನಿಸರ್ಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.

ಈ ಬಗ್ಗೆ ನಿಶಾಂತ್ ಎಂಬವರು ಕಂಕನಾಡಿ ನಗರ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.


Spread the love