ಕೊಲೆ ಯತ್ನ ಪ್ರಕರಣ – ನಾಲ್ವರು ಆರೋಪಿಗಳ ಬಂಧನ

Spread the love

ಕೊಲೆ ಯತ್ನ ಪ್ರಕರಣ – ನಾಲ್ವರು ಆರೋಪಿಗಳ ಬಂಧನ

ಮಂಗಳೂರು: ನಗರದ ಶಕ್ತಿನಗರದಲ್ಲಿರುವ ಕಂಪೆನಿಯಲ್ಲಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ತೇಜಸ್ ಎಂಬವರಿಗೆ ತಲವಾರು ಮತ್ತು ಚೂರಿಯಿಂದ ಕೊಲೆಗೆ ಯತ್ನಿಸಿದ ನಾಲ್ಕು ಮಂದಿ ಆರೋಪಿಗಳನ್ನು ಕಂಕನಾಡಿ ಪೋಲಿಸರು ಬಂಧಿಸಿದ್ದಾರೆ.

ಬಂಧಿತರನ್ನು ನೀತಿನಗದ ಪ್ರಥ್ವಿರಾಜ್ ಯಾನೆ ಪುಟ್ಟ (19), ವಿಶಾಲ್ ಯಾನೆ ವಿಶಾಲ್ ಕುಮಾರ್ (20), ಅಭಿಷೇಕ್ ಯಾನೆ ಮಣಿ (23), ಸಚಿನ್ (21) ಎಂದು ಗುರುತಿಸಲಾಗಿದೆ.

ತೇಜಸ್ ಅವರು ತನ್ನ ದ್ವಿಚಕ್ರ ವಾಹನದಲ್ಲಿ ಸಹೊದ್ಯೋಗಿ ಸಾಜು ಎಂಬರೊಂದಿಗೆ ಮನೆಗೆ ತೆರಳುತ್ತಿದ್ದಾಗ ಶಕ್ತಿನಗರ ಬೊಲ್ಯ ಶಾಲೆಯ ಬಳಿ ಆರೋಪಿಗಳು ತಡೆದು ನಿಲ್ಲಿಸಿ ಹಲ್ಲೆಗೈದು ಕೊಲೆಗೆ ಯತ್ನಿಸಿದ್ದರು. ಅಲ್ಲದೆ ಅವಾಚ್ಯ ಶಬ್ದದಿಂದ ಬೈದು ನಿಂದಿಸಿದ್ದರು. ಪ್ರಕರಣ ಬೆನ್ನತ್ತಿದ್ದ ಪೊಲೀಸ್ ಇನ್ಸ್ ಪೆಕ್ಟರ್ ರವಿ ನಾಯ್ಕ ಆರೋಪಿಗಳನ್ನು ಬಂಧಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಸಿಬಂದಿಗಳಾದ ಗಿಲ್ಬರ್ಟ್ ಡಿಸೋಜ, ಮದನ್ ಸಂತೋಷ್, ವಿನೋದ್, ರವೀಂದ್ರನಾಥ ರೈ, ರಘುವೀರ್, ನೂತನ್ ಕುಮಾರ್, ಸಂದೀಪ್ ಪಾಲ್ಗೊಂಡಿದ್ದರು.


Spread the love