ಕೋಟೆಕಾರು : ಕಾರು ಢಿಕ್ಕಿ ಹೊಡೆದು ಪಾದಚಾರಿ ಸಾವು

Spread the love

ಕೋಟೆಕಾರು : ಕಾರು ಢಿಕ್ಕಿ ಹೊಡೆದು ಪಾದಚಾರಿ ಸಾವು

ಉಳ್ಳಾಲ: ಕಾರು ಢಿಕ್ಕಿ ಹೊಡೆದು ಪಾದಚಾರಿ ಬಿಜೆಪಿ ಕಾರ್ಯಕರ್ತ ಮೃತಪಟ್ಟ ಘಟನೆ ರಾ.ಹೆ.66 ರ ಕೋಟೆಕಾರು ಬಳಿಯ ಅಡ್ಕ ಎಂಬಲ್ಲಿ ಇಂದು ಮಧ್ಯಾಹ್ನ ವೇಳೆ ನಡೆದಿದೆ.

ಕೋಟೆಕಾರು ನೆಲ್ಲಿ ಸ್ಥಳ ಕಾಳಿಕಾಂಬ ದೇವಸ್ಥಾನದ ಬಳಿಯ ನಿವಾಸಿ ಶ್ರೀಕಾಂತ್ (46)ಮೃತರು.

ಶ್ರೀಕಾಂತ್ ಆಟೋ ಇಲೆಕ್ಟ್ರೀಷಿಯನ್ ಕೆಲಸ ಮಾಡುತ್ತಿದ್ದರು.ಇಂದು ಮದ್ಯಾಹ್ನ ಅಡ್ಕದಲ್ಲಿ ಹೆದ್ದಾರಿ ದಾಟುತ್ತಿದ್ದ ವೇಳೆ ಕೇರಳದಿಂದ ಧಾವಿಸುತ್ತಿದ್ದ ಕಾರು ಶ್ರೀಕಾಂತ್ಗೆ ಢಿಕ್ಕಿ ಹೊಡೆದಿದೆ.ಗಂಭೀರ ಗಾಯಗೊಂಡ ಶ್ರೀಕಾಂತ್ ರನ್ನು ಅಪಘಾತ ನಡೆಸಿದ ಕಾರು ಚಾಲಕನೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಫಲಕೊಡದೆ ಮೃತಪಟ್ಟಿದ್ದಾರೆ.

ಮೃತ ಶ್ರೀಕಾಂತ್ ತುಳುನಾಡು ಫ್ರೆಂಡ್ಸ್ ಕೋಟೆಕಾರುವಿನ ಸಕ್ರಿಯ ಸದಸ್ಯರಾಗಿದ್ದು,ಬಿಜೆಪಿಯ ಕಾರ್ಯಕರ್ತರಾಗಿದ್ದರು.

ಶ್ರೀಕಾಂತ್ ಅವಿವಾಹಿತರಾಗಿದ್ದು ತಾಯಿ,ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


Spread the love

Leave a Reply