ಕೋಟ : ಬೇಕರಿ ಉತ್ಪನ್ನ ಘಟಕದಲ್ಲಿ ಓವನ್ ಸ್ಪೋಟ – ಮ್ಹಾಲಿಕ ರಾಬರ್ಟ್ ಫುರ್ಟಾಡೊ ಸಾವು

Spread the love

ಕೋಟ : ಬೇಕರಿ ಉತ್ಪನ್ನ ಘಟಕದಲ್ಲಿ ಓವನ್ ಸ್ಪೋಟ – ಮ್ಹಾಲಿಕ ರಾಬರ್ಟ್ ಫುರ್ಟಾಡೊ ಸಾವು

ಉಡುಪಿ: ಬೇಕರಿ ಉತ್ಪನ್ನಗಳನ್ನು ತಯಾರಿಸುವ ಘಟಕದಲ್ಲಿ ಬೃಹತ್ ಗಾತ್ರದ ಓವನ್ ಸ್ಪೋಟಗೊಂಡ ಪರಿಣಾಮ ಕೆಲಸ ನಿರ್ವಹಿಸುತ್ತಿದ್ದ ಬೇಕರಿ ಮ್ಹಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಐರೋಡಿ – ಮಾಬುಕಳದಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದೆ.

ಮೃತ ವ್ಯಕ್ತಿಯನ್ನು ಫುರ್ಟಾಡೊ ಫುಡ್ ಪ್ರಾಡಕ್ಟ್ ಮ್ಹಾಲಿಕ ರಾಬರ್ಟ್ ಫುರ್ಟಾಡೋ (53) ಎಂದು ಗುರುತಿಸಲಾಗಿದೆ.

ಮಾಹಿತಿಗಳ ಪ್ರಕಾರ ಪ್ರತಿ ನಿತ್ಯದಂತೆ ಸೋಮವಾರ ಬೆಳಿಗ್ಗೆ ರಾಬರ್ಟ್ ಫುರ್ಟಾಡೊ ಅವರು ತಮ್ಮ ಮನೆಯ ಕೆಳಗಡೆ ಇರುವ ಬೇಕರಿ ಉತ್ಪನ್ನಗಳ ತಯಾರಿಕಾ ಘಟಕದಲ್ಲಿ ನಡೆಯುವ ಕೆಲಸಗಳ ಪರಿಶೀಲನೆ ಮಾಡಲು ತೆರಳುತ್ತಿದ್ದು ಅಂತೆಯೇ ಸೋಮವಾರ ಬೆಳಿಗ್ಗೆ ಕೂಡ ತೆರಳಿದ್ದು ಬ್ರೆಡ್ ತಯಾರಿಕೆ ನಡೆಯುವ ಓವನ್ ಬಳಿ ಪರಿಶೀಲನೆ ನಡೆಸುತ್ತಿದ್ದರು ಎನ್ನಲಾಗಿದೆ. ಈ ವೇಳೆ ಹಠಾತ್ ಆಗಿ ಓವನ್ ಸ್ಪೋಟಗೊಂಡು ಅದರ ಬಾಗಿಲು ಎದುರಿಗೆ ನಿಂತಿದ್ದ ರಾಬರ್ಟ್ ಅವರಿಗೆ ಬಡಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಬ್ರೆಡ್ ತಯಾರಿಕಾ ಓವನ್ ವಿದ್ಯುತ್ ಮತ್ತು ಗ್ಯಾಸ್ ಎರಡರ ಮೂಲಕ ನಡೆಯುತ್ತಿದ್ದು ಯಾವುದರಿಂದ ಸ್ಪೋಟ ಸಂಭವಿಸಿದೆ ಎನ್ನುವುದು ಇನ್ನಷ್ಟೆ ತಿಳಿದುಬರಬೇಕಾಗಿದೆ. ಘಟನೆಯ ನಡೆಯುವ ವೇಳೆ ಕೆಲವೇ ಕಾರ್ಮಿಕರು ಘಟಕದಲ್ಲಿದ್ದು ಭಾರೀ ದೊಡ್ಡ ಅನಾಹುತ ತಪ್ಪಿದೆ. ಘಟನೆಯಲ್ಲಿ ಇನ್ನೋರ್ವ ಕಾರ್ಮಿಕರಿಗೆ ಚಿಕ್ಕಪುಟ್ಟ ಗಾಯಗಳಿಂದ ಪಾರಾಗಿದ್ದಾರೆ

ಘಟನೆಯ ಕುರಿತು ಮಾಹಿತಿ ಸಿಕ್ಕಿದ ಕೂಡ ಉಡುಪಿ ಅಗ್ನಿಶಾಮ ದಳದ ಸಿಬಂದಿ, ಕೋಟ ಪೋಲಿಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ಮೃತ ರಾಬರ್ಟ್ ಫುರ್ಟಾಡೊ ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಮೃತರು ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರಾಗಿದ್ದು, ಲಯನ್ಸ್, ರೋಟರಿ, ಕೆಥೊಲಿಕ್ ಸಭಾ ಹಾಗೂ ಇನ್ನೀತರ ಸಂಘಟನೆಗಳಲ್ಲಿ ಪದಾಧಿಕಾರಿಯಾಗಿದ್ದರು.


Spread the love