ಕೋಟ: ವಾಟ್ಸ್ಯಾಪ್ ಗ್ರೂಪಿನಲ್ಲಿ ಧಾರ್ಮಿಕ ನಿಂದನೆ; ದೂರು

Spread the love

ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನಿವಾಸಿ ಅದಾಮ್ ಎನ್ನುವಾತ, ವಾಟ್ಸಾಪ್ ಗ್ರೂಪ್‍ನಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಹಾಗೆ ವ್ಯವಹರಿಸಿದ್ದಾನೆ ಎಂದು ಸೋಮವಾರ ಕೋಟ ಪೊಲೀಸ್ ಠಾಣೆಯಲ್ಲಿ ಮೌಖಿಕ ದೂರು ಬಂದ ಹಿನ್ನೆಲೆಯಲ್ಲಿ ಆತನನ್ನು ಪೊಲೀಸ್‍ರು ವಶಕ್ಕೆ ತೆಗೆದುಕೊಂಡ ಘಟನೆ ನಡೆದಿದೆ.

ವಾಟ್ಸಾಪ್ ಗ್ರೂಪ್‍ನಲ್ಲಿ ಹಾಕಲಾಗಿದ್ದ ಯುವತಿಯೋರ್ವಳ ಚಿತ್ರಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆದಾಗ ಆದಮ್ ಧಾರ್ಮಿಕ ಭಾವನೆಗೆ ಧಕ್ಕೆಯಾಗುವ ಹಾಗೆ ವರ್ತಿಸಿದ್ದ ಎನ್ನಲಾಗಿತ್ತು. ಪೊಲೀಸ್‍ರು ಈ ಬಗ್ಗೆ ವಿಚಾರಣೆ ನಡೆಸಿ, ಸಾಮಾಜಿಕ ಜಾಲ ತಾಣದಲ್ಲಿ ಶುದ್ಧವಾಗಿ ವ್ಯವಹರಿಸುವಂತೆ ಯುವಕನಿಗೆ ಎಚ್ಚರಿಕೆ ನೀಡಿ ಸಂಜೆ ವೇಳೆ ಬಿಡುಗಡೆ ನೀಡಿದ್ದಾರೆ.


Spread the love