ಕೋಟ: ಸಾಸ್ತಾನ ಕೆಥೊಲಿಕ್ ಸ್ತ್ರೀ ಸಂಘಟನೆಯ ಅಧ್ಯಕ್ಷರಾಗಿ ಜಸಿಂತಾ ಪಿಂಟೊ ಆಯ್ಕೆ

Spread the love

ಕೋಟ: ಕೆಥೊಲಿಕ್ ಸ್ತ್ರೀಯರ ಸಂಘಟನೆ ಸಂತ ಅಂತೋನಿ ಚರ್ಚು ಸಾಸ್ತಾನ ಘಟಕ ಇದರ 2015-16 ನೇ ಸಾಲಿನ ನೂತನ ಅಧ್ಯಕ್ಷರಾಗಿ ಜಸಿಂತಾ ಪಿಂಟೊ ಪಾಂಡೇಶ್ವರ ಆಯ್ಕೆಯಾಗಿದ್ದಾರೆ.

IMG-20150708-WA0011

ಇತ್ತೀಚೆಗೆ ನಡೆದ ಸಂಘಟನೆಯ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆಯಾದ ಇವರು ಚರ್ಚಿನ ಸಂತ ಜೋಸೇಫ್ ವಾಳೆಯ ಗುರಿಕಾರರಾಗಿ, ಚರ್ಚಿನ ಆಡಳಿತ ಮಂಡಳಿಯ ಸದಸ್ಯರಾಗಿ ಕೂಡ ಸೇವೆ ಸಲ್ಲಿಸುತ್ತಿದ್ದಾರೆ.

ಸ್ತ್ರೀ ಸಂಘಟನೆಯ ಇತರ ಪದಾಧಿಕಾರಿಗಳಾಗಿ ಈ ಕೆಳಗಿನ ರೆಮೆಡಿಯಾ ಡಿ’ಆಲ್ಮೇಡಾ (ಉಪಾಧ್ಯಕ್ಷೆ), ಸುಸಾನ್ನಾ ಡಿ’ಆಲ್ಮೇಡಾ (ಕಾರ್ಯದರ್ಶಿ), ವಿಕ್ಟೋರಿಯಾ ಲೂವಿಸ್ (ಸಹಕಾರ್ಯದರ್ಶಿ), ವೀರಾ ಪಿಂಟೊ (ಕೋಶಾಧಿಕಾರಿ), ಶಾಂತಿ ಪಿರೇರಾ (ಮೊತಿಯಾಂ ಮಹಿಳಾ ಪತ್ರಿಕೆಯ ಪ್ರತಿನಿಧಿ), ವಂ ಜೋನ್ ವಾಲ್ಟರ್ ಮೆಂಡೊನ್ಸಾ (ನಿರ್ದೇಶಕರು) ಆಯ್ಕೆಯಾಗಿದ್ದಾರೆ.


Spread the love