ಕೋಮುಭಾವನೆ ಕೆರಳಿಸುವ ಉದ್ದೇಶ ಇಲ್ಲ, ದೀಪಾವಳಿ ಆಚರಣೆ ಸ್ಥಳ ಬದಲು: ಐವನ್ ಡಿಸೋಜ

Spread the love

ಕೋಮುಭಾವನೆ ಕೆರಳಿಸುವ ಉದ್ದೇಶ ಇಲ್ಲ, ದೀಪಾವಳಿ ಆಚರಣೆ ಸ್ಥಳ ಬದಲು: ಐವನ್ ಡಿಸೋಜ

ಮಂಗಳೂರು: ನಾನು ಎಲ್ಲಾ ಧರ್ಮದವರ ಜೊತೆಗೂಡಿ ದೀಪಾವಳಿ ಆಚರಣೆ ನಡೆಸಬೇಕೆಂದಿದ್ದೆ ಅದಕ್ಕಾಗಿ ಎಲ್ಲಾ ಧರ್ಮದವರನ್ನೋಳಗೊಂಡ 50 ಮಂದಿಯ ಸಮಿತಿಯನ್ನು ಕೂಡ ರಚಿಸಲಾಗಿತ್ತು. ಕಳೆದ ಬಾರಿ ನಾವು ಇಫ್ತಾರ್ ಕೂಟವನ್ನು ಆಯೋಜಿಸಿದ್ದು ಈ ಬಾರಿ ದೀಪಾವಳಿಯನ್ನು ಆಚರಿಸಲು ನಾನು ಅಪೇಕ್ಷೆ ಪಟ್ಟಿದ್ದೆ ಅದರಂತೆ ನನ್ನ ಗೆಳೆಯರಾದ ಅಮೃತ್ ಕದ್ರಿ ಅವರ ಸಹಾಯದಿಂದ ಕದ್ರಿ ದೇವಳದ ಸ್ಥಳವನ್ನು ನಿಗದಿಪಡಿಸಲಾಗಿತ್ತು. ದೀಪಾವಳಿ ಆಚರಣೆಯಿಂದ ಹಿಂದು ಧರ್ಮದ ಧಾರ್ಮಿಕ ಭಾವನೆಗೆ ಯಾವ ರೀತಿಯಲ್ಲಿ ಧಕ್ಕೆಯಾಗುತ್ತದೆ ಎಂಬುದು ನನಗೆ ತಿಳಿದಿಲ್ಲ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ ಬೇಸರ ವ್ಯಕ್ತಪಡಿಸಿದರು.

ಅವರು ಗುರುವಾರ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ನನಗೆ ಹಿಂದು ಧಾರ್ಮಿಕ ಭಾವನೆಗಳ ಜೊತೆಗೆ ಆಟವಾಡಬೇಕು ಎಂಬ ಯಾವುದೇ ಕೆಟ್ಟ ಉದ್ದೇಶ ಇಲ್ಲ. ನನ್ನ ಗೆಳೆಯ ಅಮೃತ್ ಕದ್ರಿಯವರು ಕಾರ್ಯಕ್ರಮ ಆಯೋಜಿಸಲು ಸೂಚನೆ ನೀಡಿದರು. ಅದರಂತೆ ನಾವು ಕದ್ರಿ ಶ್ರೀ ಮಂಜುನಾಥೇಶ್ವರ ದೇವಳದ ಸಭಾಂಗಣವನ್ನು ಮುಂಗಡ ರೂ 3750 ಹಣ ನೀಡಿ ನಿಗದಿಪಡಿಸಲಾಗಿತ್ತು.

image002ivan-pressmeet-20161021-002

ದೀಪಾವಳಿ ಎಲ್ಲಾ ಧರ್ಮದವರು ಆಚರಿಸುವ ಒಂದು ಹಬ್ಬವಾಗಿದ್ದು ಅದರ ಉದ್ದೇಶದಿಂದ ಎಲ್ಲಾ ಸಮುದಾಯದವರಿಗೆ ಆಮಂತ್ರಣ ನೀಡಲಾಗಿತ್ತು. ಅದಕ್ಕಾಗಿ ಆಮಂತ್ರಣ ಪತ್ರಿಕೆಯನ್ನು ಕೂಡ ಮುದ್ರಿಸಲಾಗಿತ್ತು. ಆದರೆ ನಾನು ಶಿವಮೊಗ್ಗ ಜಿಲ್ಲಾ ಪ್ರವಾಸದಲ್ಲಿದ್ದ ವೇಳೆ ಮಂಗಳೂರಿನಲ್ಲಿ ವಿಶ್ವ ಹಿಂದು ಪರಿಷದ್ ಮತ್ತು ಬಜರಂಗ ದಳದ ನಾಯಕರು ಕದ್ರಿ ದೇವಳದಲ್ಲಿ ದೀಪಾವಳಿ ಆಚರಣೆಗೆ ವಿರೋಧ ವ್ಯಕ್ತಪಡಿಸಿದ ಮಾಹಿತ ತಲುಪಿತು. ಆದ್ದರಿಂದ ಕಾರ್ಯಕ್ರಮದ ಸ್ಥಳವನ್ನು ಬದಲಿಸಿ ಈಗ ಕದ್ರಿ ಪಾರ್ಕಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ದೀಪಾವಳಿ ಹಬ್ಬದ ಹೆಸರಿನಲ್ಲಿ ಯಾವುದೇ ರೀತಿ ಸಮಸ್ಯೆಗಳನ್ನು ಉಂಟುಮಾಡಲು ನನಗೆ ಇಷ್ಟವಿಲ್ಲ ಎಂದರು.

ಪ್ರತಿವರ್ಷ ನಾವು ವಿವಿಧ ಧರ್ಮದವರ ಹಬ್ಬಗಳನ್ನು ಆಚರಿಸುತ್ತಿದ್ದು ಇದೇನು ಹೊಸತಲ್ಲ. ವಿಶ್ವ ಹಿಂದು ಪರಿಷದ್ ಮತ್ತು ಬಜರಂಗ ದಳದ ನಾಯಕರು ಸುಮ್ಮನೆ ಸಮಸ್ಯೆಗಳನ್ನು ಉಂಟು ಮಾಡಲು ಪ್ರಯತ್ನಿಸಿರುವುದು ಬೇಸರ ತಂದಿದೆ. ಒರ್ವ ಮುಖ್ಯ ಸಚೇತಕನಾಗಿ ಹಾಗೂ ಜವಾಬ್ದಾರಿಯುತ ನಾಗರಿಕನಾಗಿ ಯಾವುದೇ ಸಮಸ್ಯೆ ಉಂಟು ಮಾಡಲು ಇಷ್ಟವಿಲ್ಲ ಆ ಉದ್ದೇಶದಿಂದ ಸ್ಥಳವನ್ನು ಬದಲಾಯಿಸಲಾಗಿದೆ ಎಂದರು.

ಐವನ್ ಹಿಂದೂವಾಗಿ ಮಂತಾಂತರವಾಗಿ ದೀಪಾವಳಿ ಆಚರಿಸಲಿ ಎಂಬ ಹಿಂದೂ ನಾಯಕರ ಮಾತಿಗೆ ಪ್ರತಿಕ್ರಿಯಿಸಿದ ಐವನ್ ಅವರು ಇಂತಹ ಹೇಳಿಕೆ ಸರಿಯಲ್ಲ ನಾವೆಲ್ಲರೂ ಒಂದೇ. ಪ್ರೋ ಪುರಾಣಿಕ್ ಅವರು ಕ್ರೈಸ್ತ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರಾಗಿದ್ದವರು. ಅವರಿಗೆ ನನಗಿಂತ ಹೆಚ್ಚಿನ ಮಾಹಿತಿ ಇದೆ. ಅಲ್ಲದೆ ಅವರು ಎಂಡೋಮೆಂಟ್ ಆ್ಯಕ್ಟ್ ಬಗ್ಗೆ ನನಗಿಂತ ಹೆಚ್ಚು ತಿಳಿದುಕೊಂಡಿರಬೇಕು. ಪುತ್ತೂರು ಘಟಣೆ ಹಾಗೂ ದೀಪಾವಳಿ ಆಚರಣೆ ಪ್ರತ್ಯೇಕ ವಿಷಯಗಳಾಗಿದ್ದು ನಾನು ಯಾವುದೇ ರೀತಿ ಕೋಮು ಭಾವನೆಗೆ ಧಕ್ಕೆಯಾಗುವುದಕ್ಕೆ ಅಪೇಕ್ಷೆ ಪಡುವುದಿಲ್ಲ ಆ ಉದ್ದೇಶದಿಂದ ಸ್ಥಳದ ಬದಲಾವಣೆ ಮಾಡಿದ್ದೇನೆ ಎಂದರು.


Spread the love

1 Comment

Comments are closed.