ಕೋರ್ಟ್ ಆದೇಶವನ್ನು ಧಿಕ್ಕರಿಸುತ್ತಿರುವುದು ದೇಶದ ದುರಂತ: ನಾಗಮೋಹನ್ ದಾಸ್

Spread the love

ಕೋರ್ಟ್ ಆದೇಶವನ್ನು ಧಿಕ್ಕರಿಸುತ್ತಿರುವುದು ದೇಶದ ದುರಂತ: ನಾಗಮೋಹನ್ ದಾಸ್

ಮಂಗಳೂರು: ಅಯೋಧ್ಯೆ ವಿಚಾರದಲ್ಲಿ ಹೀಗೇ ತೀರ್ಪು ನೀಡಬೇಕೆಂದು ಒತ್ತಡ ಹೇರಲಾಗುತ್ತಿದೆ. ಇದು ದೇಶದ ದುರಂತ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶ ನಾಗಮೋಹನ್ ದಾಸ್ ಹೇಳಿದ್ದಾರೆ.

ನಗರದಲ್ಲಿ ನಡೆದ ಎಡಪಂಥೀಯ ಚಿಂತಕರ ಜನನುಡಿ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ನ್ಯಾಯಾಂಗದ ಸ್ವಾತಂತ್ರ್ಯ ಕಸಿದುಕೊಳ್ಳಲಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಆದೇಶಕ್ಕಾಗಿ ಸುಪ್ರೀಂ ಕೋರ್ಟ್ ಮೇಲೆ ಒತ್ತಡ ಹೇರಲಾಗುತ್ತಿದೆ. ಅಷ್ಟೇ ಅಲ್ಲದೆ ಇಷ್ಟು ಸಮಯದೊಳಗಾಗಿ ತೀರ್ಪು ನೀಡಬೇಕೆಂಬ ಸೂಚನೆ ನೀಡಲಾಗುತ್ತೆ ಎಂದು ದೂರಿದರು.

ಜನರ ಬದುಕಿನ ಬಗ್ಗೆ ಚಿಂತಿಸಿ, ಚರ್ಚಿಸಿ, ಪರಿಹಾರ ಕಂಡುಕೊಳ್ಳುವ ಸಮಾವೇಶವೇ ಜನನುಡಿ. ಕೇವಲ ನಾಲ್ಕು ವರ್ಷದ ಹಿಂದೆ ಜನ್ಮತಾಳಿದ ಜನನುಡಿ ತನ್ನ ಜನಪರತೆಯನ್ನು, ಪ್ರಸ್ತುತಿಯನ್ನು ನಾಲ್ಕು ವರ್ಷದಲ್ಲಿ ಹೆಚ್ಚಿಸಿಕೊಂಡಿದೆ. ಇಂತಹ ಮಹತ್ತರ ಸಮಾವೇಶದಲ್ಲಿ ನಾವೆಲ್ಲರೂ ಸಂತೋಷದಿಂದ, ಹೆಮ್ಮೆಯಿಂದ ಕಮಿಟ್ಮೆಂಟ್ ನಿಂದ ಬಂದಿದ್ದೇವೆ. ನಾವು ಯಾರೂ ಕೂಡ ಟಿಎಡಿಎ ಪಡೆದು ಈ ಸಮಾವೇಶದಲ್ಲಿ ಭಾಗವಹಿಸುತ್ತಿಲ್ಲ. ನಮ್ಮ ಕಿಸೆಯಿಂದ ಖರ್ಚು ಮಾಡಿಕೊಂಡು ಬಹಳ ಹೆಮ್ಮೆಯಿಂದ ಗೌರವದಿಂದ ಭಾಗವಹಿಸುತ್ತಿದ್ದೇವೆ. ಇಂತಹ ಮಹತ್ತರ ಸಮಾವೇಶವನ್ನು ಉದ್ಘಾಟನೆ ಮಾಡುತ್ತಿರುವುದು ನನಗೆ ಲಭ್ಯ ಆದ ಗೌರವ ಎಂದು ಭಾವಿಸಿ ಈ ಸಮಾವೇಶವನ್ನು ಬಹಳ ಹೆಮ್ಮೆಯಿಂದ, ಗೌರವದಿಂದ ಉದ್ಘಾಟನೆ ಮಾಡುತ್ತಿದ್ದೇನೆ. ಎಲ್ಲ ವಿಧದಲ್ಲೂ ಕೂಡ ಈ ಸಮಾವೇಶದಲ್ಲಿ ರಜನಾತ್ಮಕ ಚರ್ಚೆಗಳು ನಡೆದು, ಬದುಕಿನ ಬಗ್ಗೆ ಚರ್ಚೆ ಮಾಡಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಸಮಾಲುಗಳನ್ನು ಹಿಮ್ಮೆಟ್ಟಿಸುವ ದಾರಿಯನ್ನು ಹುಡುಕುವ ಪ್ರಯತ್ನ ಆಗಲಿ. ಆ ದಿಸೆಯಲ್ಲಿ ಸಮಾವೇಶ ಯಶಸ್ವಿ ಆಗಲಿ ಎಂದು  ಹಾರೈಸುತ್ತೇನೆ.

ಬಂಧುಗಳೇ, 1947ರಲ್ಲಿ ಭಾರತಕ್ಕೆ ಸ್ವತಂತ್ರ ಬಂತು. 1950ರಲ್ಲಿ ಜಗತ್ತಿನ ಅತಿ ದೊಡ್ದ ಸಂವಿಧಾನ ರಚಿಸಿ ಭಾರತ  ಗಣರಾಜ್ಯವಾಯ್ತು. ಈ 68 ವರ್ಷದಲ್ಲಿ ಭಾರತದಲ್ಲಿ ಮಹತ್ತರ ಸಾಧನೆ ಆಗಿದೆ ಎಂಬುದು ನನ್ನ ನಂಬಿಕೆ. 1947ಕ್ಕಿಂತ ಹಿಂದೆ ಇಡೀ ಭಾರತವು ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಎಂದೂ ಒಂದೇ ಆಡಳಿತಕ್ಕೆ ಒಳಪಟ್ಟಿರಲಿಲ್ಲ. ಅದು ಗುಪ್ತರ ಭಾರತ, ಮೌರ್ಯರ ಭಾರತ, ಕಾನಿಷ್ಕರ ಭಾರತ, ಮೊಘಲರ ಭಾರತ ಅಥವಾ ಬ್ರಿಟೀಶರ ಭಾರತ ಆಗಿತ್ತು. 1947ರಲ್ಲಿ ಸ್ವಾತಂತ್ಯ ಬಂದಾಗ ಬ್ರಿಟೀಶರನ್ನು ಹೊರತುಪಡಿಸಿ 600ಕ್ಕೂ ಹೆಚ್ಚು ರಾಜಮಹರಾಜರ ಆಡಳಿತವಿತ್ತು. ಪಾಳೆಗಾರಿಕೆ ಪದ್ದತಿಯನ್ನು ರದ್ದು ಮಾಡಿ ಸಾಮಂತಶಾಹಿಯನ್ನು ಕಿತ್ತೊಗೆದು, ವಸಹಾತುಶಾಹಿಯನ್ನು ಒದ್ದೋಡಿಸಿ ಇಡೀ ಭೂಪ್ರದೇಶವನ್ನು ಮೊದಲ ಬಾರಿಗೆ ಸ್ವಾತಂತ್ರ್ಯ ಬಂದ ನಂತರ ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೆ ಒಂದೇ ಆಡಳಿತಕ್ಕೆ ಒಳಪಡಿಸಿದ್ದೇವೆ. ಒಂದು ಸಂವಿಧಾನವನ್ನು ನೀಡಿದ್ದೀವಿ. ಒಂದೇ ರಾಷ್ಟ್ರಗೀತೆ, ಒಂದೇ ರಾಷ್ಟ್ರ ಧ್ವಜ ನೀಡಿದ್ದೇವೆ. ಒಂದು ರಾಷ್ಟಲಾಂಛನ ಕೊಟ್ಟಿದ್ದೀವಿ. ನಿಜವಾದ ಆಡಳಿತ ಬಂದಿದ್ದು ಸ್ವಾತಂತ್ರ ಬಂದ ನಂತರ, ಒಂದು ಸಂವಿಧಾನದ ಅಡಿಯಲ್ಲಿ ಎಂಬುದು ನಾವು ಹೆಮ್ಮೆ ಪಡಬೇಕಾದ ವಿಚಾರ.

ಅನೇಖ ಸಂಸ್ಥೆಗಳನ್ನು ಕಟ್ಟಿದ್ದೇವೆ. ರಾಷ್ಟ್ರಪತಿ ಇದ್ದಾರೆ. ಪಾರ್ಲಿಮೆಂಟ್ ಇದೆ. ಅಸೆಂಬ್ಲಿ ಇದೆ. ಈ ರೀತಿ ಶಾಸಕಾಂಗ ಸಂಸ್ಥೆಗಳನ್ನು ಕಟ್ಟಿದ್ದೇವೆ. ಅಲ್ಲಿ ಕೇಂದ್ರ ಸರ್ಕಾರ, ಇಲ್ಲಿ ರಾಜ್ಯ ಸರ್ಕಾರ, ಜಿಲ್ಲಾಡಳಿತ, ತಾಲೂಕು ಆಡಳಿತ, ಗ್ರಾಮ ಪಂಚಾಯ್ತಿ ರೀತಿ ಕಾರ್ಯಾಂಗದ ಸಂಸ್ಥೆಗಳನ್ನು ಕಟ್ಟಿದ್ದೇವೆ. ಸರ್ವೋಚ್ಛ ನ್ಯಾಯಾಲಯ, ಉಚ್ಛ ನ್ಯಾಯಾಲಯ, ತಾಲೂಕು ನ್ಯಾಯಲಯ ಈ ರೀತಿ ನ್ಯಾಯಾಂಗದ ಸಂಸ್ಥೆಗಳನ್ನು ಕಟ್ಟಿದ್ದೀವಿ. ಈ ಪ್ರಜಾಪ್ರಭುತ್ವದ ಸಂಸ್ಥೆಗಳಲ್ಲಿ ಈ ದೇಶದ ಜನ  ನೇರವಾಗಿ, ಪರೋಕ್ಷವಾಗಿ ಜನರು ಭಾಗವಹಿಸುವ ವಾತಾವರಣ ನಿರ್ಮಾಣ ಮಾಡಿದ್ದೀವಿ. ಭೂಸುಧಾರಣೆ, ಶಿಕ್ಷಣ ಸುಧಾರಣೆ, ಕೈಗಾರಿಕೆ, ಆರೋಗ್ಯ ಸುಧಾರಣೆ ಅನೇಕ ಕ್ಷೇತ್ರದಲ್ಲಿ ತಂದಿದ್ದೇವೆ. ಸಾಮಾನ್ಯ ಜನರಿಗೆ ಶಿಕ್ಷಣ, ಉದ್ಯೋಗ, ಆರೋಗ್ಯ ವಸತಿ, ದೀಪ, ಕುಡಿಯುವ ನೀರು ಇತ್ಯಾದಿ ಮೂಲ ಸೌಕರ್ಯ ಒದಗಿಸಲು ಪರಿಣಾಮಕಾರಿ ಕೆಲಸ. ದಲಿತರು, ಹಿಂದುಳಿದವರು, ಮಹಿಳೆಯರು, ಅಲ್ಪಸಂಖ್ಯಾತರ ಬದುಕಿನಲ್ಲಿ ಒಂದಿಷ್ಟು ನೆಮ್ಮದಿ ಬರುವಂತಹ ವಾತಾವರಣ ಮಾಡಿದ್ದೀವಿ. ಇನ್ಫಾರ್ಮೆಷನ್ ಟೆಕ್ನಾಲಜಿ, ಸ್ಪೇಸ್ ಟೆಕ್ನಾಲಜಿ, ಆಟಾಮಿಕ್ ಕ್ಷೇತ್ರದಲ್ಲಿ ಸಾಧನೆ ಮಾಡಿ ಜಗತ್ತಿನ ಟಾಪ್ 10 ದೇಶಗಳಲ್ಲಿ ಭಾರತ ಒಂದು ಎಂದು ಮಾಡಿದ್ದೇವೆ. ಇದಕ್ಕೆಲ್ಲ ಕಾರಣ ಭಾರತ ಸಂವಿಧಾನ ಎಂದು ನಾನು ಭಾವಿಸಿದ್ದೇನೆ. ರೈತನ ಮಗ, ದೋಬಿಯ ಮಗ ದೋಬಿ, ಕಾಬ್ಲರ್ ಮಗ ಕಾಬ್ಲರ್ ಆಗಪೇಕು ಎಂಬ ಜಾತಿ ವ್ಯವಸ್ಥೆಯನ್ನು ಮುರಿದು ಹಾಕಿ, ನಾನೊಬ್ಬ ಮಧ್ಯಮ ವರ್ಗದ ರೈತನ ಮಗ, ಕೋಲಾರ ಜಿಲ್ಲೆಯ  ಕೋಲಾರದ ಗಡಿ ಹಳ್ಳಿಯಲ್ಲಿ ಹುಟ್ಟಿದವರು. ನಮ್ಮೂರಿನ ಶಾಲೆಯಲ್ಲಿ ಓದಿದವನು, ಬೆಂಗಳೂರಿನ ವಿಶ್ವವಿದ್ಯಾಲಯದಲ್ಲಿ ಬಿಎ ಎಲ್.ಎಲ್.ಬಿ. ಮಾಡಿದೆ. ಕರ್ನಾಟಕ ಹೈಕೋರ್ಟಿನಲ್ಲಿ 10 ವರ್ಷ ನ್ಯಾಯಮೂರ್ತಿಯಾಗಿ ಕೆಲಸ ಮಾಡಿದೆ. ಕಳೆದ ನಾಲ್ಕು ವರ್ಷದಿಂದ ಸುಪ್ರೀಕೋರ್ಟ್್ನಲ್ಲಿ ಡೆಸಿಗ್ನೇಟೆಡ್ ಸೀನಿಯರ್ ಆಗಿ ಕೆಲಸ ಮಾಡಲು ನನ್ನ ಸಂವಿಧಾನ ನನಗೆ ಕೊಟ್ಟ ಅವಕಾಶ ಕಾರಣ.

ಇಷ್ಟೆಲ್ಲಾ ಆದರೂ ಸಹ ದೇಶದಲ್ಲಿ ಇನ್ನಷ್ಟು ಹಸಿವು ಇದೆ. ನಿರುದ್ಯೋಗವಿದೆ. ಕೃಷಿ, ಕೈಗಾರಿಕೆ ಬಿಕ್ಕಟ್ಟು ಇದೆ ಎಂಬ ವಾಸ್ತವ ಸತ್ಯದ ಅರಿವಿದೆ. ನಾನೊಬ್ಬ ಆಪ್ಟಿಮಿಸ್ಟಿಕ್, ಆಶಾವಾದಿ. ಪೆಸಿಮಿಸ್ಟಿಕ್ ಅಲ್ಲ. ನಾವೆಲ್ಲರೂ ಒಟ್ಟಿಗೇ ಇನ್ನೂ ಸ್ವಲ ಕೆಲಸ ಜಾಸ್ತಿ ಮಾಡಿದರೆ, ನಮ್ಮ ನೀತಿಯಲ್ಲಿ ಸ್ವಲ್ಪ ಸುಧಾರಣೆ ತಂದುಕೊಂಡರೆ, ನಮ್ಮ ಆಡಳಿತದಲ್ಲಿ ಕೆಲ ಸುಧಾರಣೆ ತಂದರೆ, ಆಧುನಿಕ ವಿಜ್ಞಾನದ ಸಾಧನೆಗಳನ್ನು ಬಳಸಿಕೊಂಡರೆ ನಿಜವಾಗಿಯೂ ಸಹ ಭಾತ ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನ ನಾಲ್ಕೈದು ವರ್ಷದಲ್ಲಿ ಪರಿಹಾರ ಮಾಡಬಹುದು ಎಂದು ಭಾವಿಸಿರುವ ಆಪ್ಟಿಮಿಸ್ಟಿಕ್ ನಾನು.

ದೇಶದ ಮುಂದೆ ಸವಾಲುಗಳಿವೆ. ಈ ಸವಾಲುಗಳನ್ನು ಹಿಮ್ಮೆಟ್ಟಿಸದಿದ್ದರೆ ದೇಶ ಪೆರಿಷ್ ಆಗುತ್ತೆ. ದೇಶ ಪೆರಿಷ್ ಆದಾಗ ನಾನು ಉಳಿಯಲ್ಲ, ಪ್ರಕಾಶ್ ರೈ ಉಳಿಯಲ್ಲ, ನಾವ್ಯಾರೂ ಉಳಿಯಲು ಸಾಧ್ಯವಿಲ್ಲ. ಹಾಗಾದರೆ ಆ ಸವಾಲುಗಳು ಯಾವುವು, ರಾಜಕಾರಣದಲ್ಲಿ ಕುಸಿಯುತ್ತಿರುವ ನೈತಿಕ ಮೌಲ್ಯಗಳು. ಭಯೋತ್ಪಾದನೆ, ಮೂಲಭೂತವಾದ, ಕೋಮುವಾದ, ಭ್ರಷ್ಟಾಚಾರ, ಅಪರಾಧಿಕರಣ, ಅತಿಯಾದ ವ್ಯವಾಪಾರಿಗಳ, ಸಾಂಸ್ಕೃತಿಕ ದಿವಾಳಿತನ ಸಮಸ್ಯೆಗಳನ್ನು ದೇಶ ಎದುರಿಸುತ್ತಿದೆ. ಈ ಸವಾಲು, ಸಮಸ್ಯೆಗಳಿಗೆ ಕಾರಣ ಯಾರು ಅಂತ ನಾವು ಹುಡುಕಬೇಕು. ನನ್ನ ಅಭಿಪ್ರಾಯದಲ್ಲಿ  ಖಂಡಿತವಾಗಿ ಸಂವಿಧಾನ ಅಲ್ಲ. ಡಿಫಾಲ್ಟ್ ಲೈಸ್ ನಾಟ್ ಇನ್ ಕಾನ್ಟಿಟ್ಯೂಷನ್, ಲೈಸ್ ಇನ್ ದಿ ಪೀಪಲ್ ಹೂ ವರ್ ಇಂಪ್ಲಿಮೆಂಟಿಂಗ್ ದಿ ಕಾನ್ಸ್ಟಿಟ್ಯೂಷನ್. 1949ರಲ್ಲಿ ಸಂವಿಧಾನದ ಕರಡು ತಯಾರು ಮಾಡಿ ಸರ್ಕಾರಕ್ಕೆ ಒಪ್ಪಿಸುವ ಸಂದರ್ಭದಲ್ಲಿ ಅಂಬೇಡ್ಕರ್ ಒಂದು ಮಾತು ಹೇಳಿದ್ರು. ಸಂವಿಧಾನ ಒಷ್ಟೇ ಒಳ್ಳೆಯಾದಗಿರಲಿ, ಅನುಷ್ಟಾನ ಗೊಳಿಸುವವರು ಕೆಟ್ಟವರಾಗಿದ್ದರೆ ಒಳ್ಳೆ ಸಂವಿಧಾನವೂ ಸಹ ಕೆಟ್ಟದಾಗಿಬಿಡುತ್ತೆ ಎಂದಿದ್ರು.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ಬಂತು. ಶ್ರೀಲಂಕಾಕ್ಕೆ ಬಂತು. ಮಯನ್ಮಾರ್ ದೇಶಕ್ಕೆ ಬಂತು. ಆ ನೆರೆ ರಾಜ್ಯಗಳಲ್ಲಿ ಹತ್ತಾರು ಬಾರಿ ಸಂವಿಧಾನ ಕಿತ್ತು ಹಾಕಿದರು. ಸರ್ವಾಧಿಕಾರ ಮಿಲಿಟರಿ ಆಳಿತ ಬಂದು. ಅಂತರ್ಯುದ್ಧ ನಡೆಯಿತು. ಆದರೆ ಭಾರತದ ಅನೇಕ ಜಾತಿ, ಭಾಷೆ, ಸಂಸ್ಕೃತಿ, ಉಪಸಂಸ್ಕೃತಿಗಳನ್ನು ಇವತ್ತಿಗೂ ಕಟ್ಟಿಹಾಕಿರುವುದು ಭಾರತದ ಸಂವಿಧಾನ. ಅದಕ್ಕಾಗಿ ಜಗತ್ತಿನ ನ್ಯಾಯಶಾಸ್ತ್ರಜ್ಞರು ಇಂಡಿಯಾಸ್ ಕಾನ್ಸ್ಟಿಟ್ಯೂಷನ್ ಈಸ್ ನಾಟ್ ಓನ್ಲಿದ ಬಿಗ್ಗೆಸ್ಟ್ ಕಾನ್ಸ್ಟಿಟ್ಯೂಷನ್. ಬಟ್ ಇಟ್ ಈಸ್ ಆಲ್ಸೋ ಬೆಸ್ಟ್ ಅಂಡ್ ಮೋಸ್ಟ್ ರಿಲೆವೆಂಟ್ ಕಾನ್ಸ್ಟಿಟ್ಯೂಷನ್ ಇನ್ ದಿ ವರ್ಲ್ಡ್ ಎಂದರು.

ಹಿಂದೂಗಳಿಗೆ ಭಗವದ್ಗೀತೆ ಇದೆ. ಮುಸನ್ಮಾನರಿಗೆ ಕುರಾನ್, ಕ್ರೈಸ್ತರಿಗೆ ಬೈಬಲ್ ಇದೆ. ಬೌದ್ಧರಿಗೆ ಬುದ್ಧನ ಬೋಧನೆಗಳಿವೆ. ಸಿಖ್ಖರಿಗೆ ಗುರುಗ್ರಂಥ ಇದೆ. ಆದರೆ ಇಡೀ ಭಾರತೀಯರಿಗೆ ಸಂವಿಧಾನ ಇದೆ.

ಆದರೆ ಇಂದು ದೇಶವನ್ನು ಗಂಭೀರ ಪರಿಸ್ಥಿತಿಗಳು ಕಾಡುತ್ತಿವೆ. ಎಲ್ಲ ಧರ್ಮ, ಜಾತಿ, ಭಾಷೆಯ ಜನರ ವಿವಿಧ ನಂಬಿಕೆಗಳು, ಆಹಾರ ಪದ್ಧತಿಗಳಿದ್ದವು. ಜನರು ನೆಮ್ಮದಿಯಿಂದ ಬಾಳುತ್ತಿದ್ದರು. ಭದ್ರತೆಯಿಂದ, ಬಾಳಿದರು. ಇದು ಭಾರತದ ಸಂಸ್ಕೃತಿ. ಇದು ನಿಂತ ನೀರಲ್ಲ, ಹರಿಯುತ್ತಿರುವ ನೀರು. ಇಟ್ ಈಸ್ ದಿ ಪ್ಲೂರಲಿಸಂ. ಇದರ ವಿರುದ್ಧ ಮಾತುಗಳು ಬರುತ್ತಿವೆ. ಒಂದೇ ಸಂಸ್ಕೃತಿ, ಭಾಷೆ, ಆಹಾರ ಪದ್ಧತಿಗೆ ಒತ್ತಾಯಿಸಲಾಗುತ್ತಿದೆ. ಇದನ್ನು ಜನರು ಸಹಿಸುವುದಿಲ್ಲ. ಏಕ ಸಂಸ್ಕೃತಿ ವಿರುದ್ಧ ಸಿಡಿದೆದ್ದು ನಿಲ್ಲುತ್ತಾರೆ.

ಭಾರತ ಸ್ವತಂತ್ರ ಆದ ನಂತರ ಪ್ರಚಾತಂತ್ರವನ್ನು ಕಟ್ಟಿದ್ದೀವಿ. ಲೋಕಸಭೆಯ ಕಂಪೋಸಿಷನ್ ನೋಡಿದಾಗ ಆತಂಕವಾಗುತ್ತದೆ. ಅಲ್ಲಿ ಕ್ರಿಮಿನಲ್ ಕೇಸ್ ಎದುರಿಸುತ್ತಿರುವವರು, ಜೈಲಿಗೆ ಹೋಗುವಂತಹ ಅಪರಾಧ ಮಾಡಿದವರು, ಸಂಪತ್ತನ್ನು ಕ್ರೋಢೀಕರಿಸಿರುವ ಕೋಟ್ಯಾಧಿಪತಿಗಳು ಇದ್ದಾರೆ. ಮಹಿಳೆಯರನ್ನ, ರೈತರು, ಕಾರ್ಮಿಕರು, ಯುವಕರನ್ನು ಪ್ರತಿನಿಧಿಸುವ ಪ್ರತಿನಿಧಿಗಳೇ ಇಲ್ಲದ ಪಾರ್ಲಿಮೆಟಂರಿ ವ್ಯವಸ್ಥೆಯಲ್ಲಿ ನಾವಿದ್ದೇವೆ. ಇಂತಹ ಸಂಸತ್ತಿನಲ್ಲಿ ಏನು ನಡೆಯುತ್ತಿದೆ. ಪ್ರತಿದಿನ ಗದ್ದಲ, ಕೂಗಾಟ, ಡಿಸೆಂಟ್ ವಾಯ್ಸ್ ಗೆ ಅವಕಾಶವೇ ಇಲ್ಲ. ಟಾಲರೆನ್ಸ್ ಇಲ್ಲ. ಈ ರೀತಿಯ ವಾತಾವರಣದಲ್ಲಿ ಇದ್ದೇವೆ.

ಬಿಲ್ ಪ್ರಸೆಂಟ್ ಮಾಡ್ತಾರೆ. ಚರ್ಚೆಯೇ ಆಗದೆ ಬಿಲ್ ಪಾಸಾಗುತ್ತವೆ. ಜಿ.ಎಸ್.ಟಿ. ಬಿಲ್ ಬೆಳಿಗ್ಗೆ ಪ್ರಸೆಂಟ್ ಮಾಡಿದ್ರು. ಸಂಜೆ ಪಾಸ್ ಆಯ್ತು. ನ್ಯಾಷನಲ್ ಜ್ಯುಡಿಷಿಯಲ್ ಅಪಾಯಿಂಟ್ ಮೆಂಟ್ ಬಿಲ್ ಬೆಳೆಗ್ಗೆ ಮಂಡನೆ, ಸಂಜೆ ಪಾಸಾಯಿತು. ಆದರೆ 2006ರಲ್ಲಿ ಸ್ವಾಮಿನಾಥನ್ ಆಯೋಗ ಪಾರ್ಲಿಮೆಂಟಿಗೆ ವರದಿ ಸಲ್ಲಿಸಿತು. ರೈತರ ಸಮಸ್ಯೆ ಬಗ್ಗೆ ಈ ವರದಿ ಸಲ್ಲಿಸಿ 12 ವರ್ಷ ಆಯ್ತ. ಆದರೆ ಪಾರ್ಲಿಮೆಂಟಿಗೆ ರೈತರ ಕಷ್ಟಗಳನ್ನು ಚರ್ಚಿಸಲು ಒಂದೇ ದಿನವೂ ಆಗಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವಿದ್ದೀವಿ.

ಇಷೆಟ್ಲಾ ಪಾರ್ಲಿಮೆಂಟರಿ ಪದ್ಧತಿ ಇದ್ದಾಗಲೂ ಯಾರೂ ಕೂಡ ಪಾರ್ಲಿಮೆಂಟರಿ ಡೆಮಾಕ್ರಸಿಗೆ ಪರ್ಯಾಯ ಸೂಚಿಸುತ್ತಿಲ್ಲ. ನನ್ನ ಬಳಿಯೇ ಇದಕ್ಕೆ ಇಲ್ಲ. ಇದನ್ನು ಉಳಿಸಿಕೊಳ್ಳಬೇಕಾದರೆ ಅಲ್ಲಿರುವ ಕೊಳಕನ್ನು ತೆಗೆದುಹಾಕಬೇಕು. ಸಜ್ಜನರನ್ನ ಆಯ್ಕೆ ಮಾಡಬೇಕು. ಜನಪರರನ್ನ ಆಯ್ಕೆ ಮಾಡಬೇಕು. ಸಂವಿಧಾನದ ಬಗ್ಗೆ ನಂಬಿಕೆ ಇರುವವರನ್ನು ಆಯ್ಕೆ ಮಾಡಬೇಕು. ಆಗ ಮಾತ್ರ ನಾವು ಪಾರ್ಲಿಮೆಂಟರಿ ಡೆಮಾಕ್ರಸಿ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಜನರಿಗೆ ಶಾಸಕಾಂಗ, ಕಾರ್ಯಾಂಗದ ನಂಬಿಕೆಯನ್ನ ದಿನೆದಿನೇ ಕಡಿಮೆ ಆಗುತ್ತಿದೆ. ಆದರೆ ನ್ಯಾಯಾಂಗ ನಂಬಿಕೆ ಉಳಿಸಿಕೊಂಡಿದೆ.

ನ್ಯಾಯಾಂಗದ ಪರಿಸ್ಥಿಗಿ ಹೇಗಿದೆ. ಆದರೆ ಜ್ಯುಡಿಷಿಯಲ್ ಇಂಡಿಪೆಂಡೆನ್ಸ್ ಟುಡೇ. ನೋ ಜ್ಯುಡಿಷಿಯಲ್ ಇಂಡಿಪೆಂಡೆನ್ಸೆ ಇಂಟರ್ನಲ್, ಎಕ್ಟರ್ನಲ್. ಕಳೆದ ವರ್ಷ ನಾಲ್ಕು ನ್ಯಾಯಮೂರ್ತಿಗಳು ಪತ್ರಿಕಾ ಹೇಳಿಕೆ ನೀಡಿದ್ದನ್ನ ನೋಡಿದ್ದೀರಿ. ಒಳಗೇ ಒತ್ತಡವಿದೆ. ಹೊರಗೆ ಸುಪ್ರಿಂಕೋರ್ಟ್ ತೀರ್ಪು ಒಪ್ಪಲ್ಲ ಅನ್ನುತ್ತಾರೆ. ಅಯೋಧ್ಯೆ ತೀರ್ಪು ಹೀಗೆ ಕೊಡಿ, ಇಷ್ಟೇ ದಿನದಲ್ಲಿ ಕೊಡಿ ಎನ್ನುತ್ತಿದ್ದಾರೆ.  ಯುರೋಪಿನಲ್ಲಿ 10 ಲಕ್ಷಕ್ಕೆ 139 ಜನ ನ್ಯಾಯಾದೀಶರು, ಭಾರತದಲ್ಲಿ 19.5 ನ್ಯಾಯಾದೀಶರು ಇದ್ದಾರೆ. 40-50 ಶೇ. ಉದ್ಯೋಗ ಖಾಲಿ ಇದೆ.  ಒಂದು ವಾರದ ಹಿಂದೆ ಪತ್ರಿಕೆಗಳಲ್ಲಿ ಬಂದಿತ್ತು. 29 ಸಾವರ ಹುದ್ದೆಗಳಲ್ಲಿ 5000ಕ್ಕೂ ಹೆಚತ್ಚು ಖಾಲಿ ಇವೆ. ಬಹಳ ಜಾಗೃತೆಯಿಂದ ಚಿಂತನೆ ಮಾಡಬೇಕಿದೆ.

ದುಡಿಯುವ ವರ್ಗದ ಶ್ರಮಶಕ್ತಿಯ ಫಲವಾಗಿ, ಆಧುನಿಕ ಸಂಶೋಧನೆಗಳ ಫಲವಾಗಿ ಭಾರತ ಕಟ್ಟಿದ್ದೇವೆ. ಶೇ.60ರಷ್ಟು ಸಂಪತ್ತು ಶೇ.20ರಷ್ಟು ಜನರಲ್ಲಿದೆ. ಶೇ.20ರಷ್ಟು ಸಂಪತ್ತು ಉಳಿದವರಲ್ಲಿದೆ. ಈ ರೀತಿಯ ಅಸಮಾನ ಭಾರತ ಕ್ಟಟಿದ್ದೇವೆ. ಸಂಪತ್ತು ಶ್ರೀಮಂತರ ಕೈ ಸೇರಿದರೆ ಹನಿಹನಿಯಾಗಿ ಬಡವರ ಕೈ ಸೇರುತ್ತೆ ಅಂದ್ರು. ಸಾಧ್ಯವಾಗಲಿಲ್ಲ.

ನಾವು ಕಷ್ಟಪಟ್ಟು, ಸಂಪಾದನೆ ಮಾಡಿ ನಮ್ಮ ಹಣವನ್ನು ಬ್ಯಾಂಕಿನಲ್ಲಿ ಇಟ್ಟೆವು. ನಮ್ಮ ಹಣವನ್ನ ಕೆಲವರು ಲೂಟಿ ಮಾಡಿ ಹೊರದೇಶಕ್ಕೆ ಹೋಗಿದ್ದಾರೆ. ಹೆಸರು ಹೇಳೋಕೆ ನಾಚಿಕೆ ಆಗುತ್ತೆ. ಆದರೆ ಒಬ್ಬನನ್ನಾದರೂ ದೇಶಕ್ಕೆ ತಂದು ಶಿಕ್ಷೆಗೆ ಗುರಿಪಡಿಸಲಿಲ್ಲ.

ಸರ್ಕಾರ ಜನರ ಸಂಕಟ ಪರಿಹಾರ ಮಾಡಬೇಕೇ ಹೊರತು, ಸರ್ಕಾರಕ್ಕೆ ಸಂಕಟ ಬಂದರೆ ಬದುಕೋದು ಹೇಗೆ ಇದು

ಹಳ್ಳಿಗಳಿಂದ ಮೈಗ್ರೇಟ್ ಆಗಿ ಟೌನಿಗೆ ಬರ್ತಿದ್ದಾರೆ. ಶೇ.90ರಷ್ಟು ನಗರಕ್ಕೆ ಬಂದ ಹಳ್ಳಿಗರು ಸಂಕಷ್ಟದಿಂದ ಜೀವನ ಮಾಡುತ್ತಿದ್ದಾರೆ. ದಿನನಿತ್ಯದ ವಸ್ತುಗಳನ್ನು ಬೆಲೆ ಏರುತ್ತಿವೆ. ಅಕ್ಕಿ, ಬೇಳೆ, ಪೆಟ್ರೋಲ್, ಮೀನು ರೇಟ್ ಏನಾಗಿದೆ ಜನಸಾಮಾನ್ಯರು ಬದುಕುವುದು ಕಷ್ಟವಾಗಿದೆ.

ಉಡುಪಿಯಿಂದ ಒಬ್ಬ ಪ್ರತಿದಿನ ಸಂಜೆ ಮಂಗಳೂರಿಗೆ ಹೋಗ್ತಿದ್ದ. ಬಸ್ಸಿನಲ್ಲಿ ಟಿಕೆಟ್ ಪಡೆಯುವಾಗ ಹಣ ಇರಲಿಲ್ಲ, ಯಾರೋ ಪಿಕ್ ಪಾಕೆಟ್ ಮಾಡಿದ್ರು. ಆಗ ಬಸ್ ನಿಲ್ಲಿಸ್ತೀನಿ ಅಂದ. ಆಗ ಒಬ್ಬ ಬಂದು ಅವರ ಟಿಕೆಟ್ ಹಣವನ್ನು ಕೊಡುತ್ತೇನೆ ಅಂದ. ಆತನನ್ನು ಎಲ್ಲರೂ ಹೊಗಳಿದರು. ಆದರೆ ಆತ ಬೇರೆ ಯಾರೂ ಅಲ್ಲ, ಆ ವ್ಯಕ್ತಿಯ ಹಣವನ್ನು ಪಿಕ್ ಪಾಕೆಟ್ ಮಾಡಿದ ವ್ಯಕ್ತಿಯೇ ಆಗಿದ್ದ. ಹೀಗೆ ನಮ್ಮ ಹಣವನ್ನ ನಮ್ಮಿಂದಲೇ ಪಿಕ್ ಪಾಕೆಟ್ ಮಾಡಿ, ನಮಗೇ ಕೊಟ್ಟು ಮೆರೆಯುತ್ತಿರುವ ಕಳ್ಳರನ್ನ ಬಯಲು ಮಾಡಬೇಕು.

ಬೆಲೆಗಳು ಹೆಚ್ಚಾಗುತ್ತಿವೆ. ರೈಟ್ ಟು ಸ್ಪೀಕ್, ಟ್ರಾವೆಲ್, ಅಸೆಂಬಲ್ ಈಸ್ ಫಂಡಮೆಂಟಲ್ ರೈಟ್. 1950ರಿಂದ ಅನುಭವಿಸುತ್ತಿದ್ದೇವೆ. ಎಂಥ ಉಡುಪು ಧರಿಸಬೇಕು, ಏನು ಮಾತಾಡಬೇಕು, ಏನು ಮಾತಾಡಬಾರದು ಎಂದು ಹೇಳುತ್ತಿದ್ದಾರೆ. ಎಲ್ಲಿ ಹೋಗಬೇಕು, ಎಷ್ಟೊತ್ತಿಗೆ ಹೋಗಬೇಕು ಎಂದು ಫರ್ಮಾನು ಹೊರಡಿಸಿ ನಮ್ಮ ಹಕ್ಕು ಕಿತ್ತುಕೊಳ್ಳುತ್ತಿದ್ದಾರೆ. ಆದರೆ ಈಗ ಸಂವಿಧಾನೇತರ ಶಕ್ತಿಗಳು ಹಕ್ಕುಗಳನ್ನು ಕಿತ್ತುಕೊಂಡು ಸಾಮಾಜಿಕ ಭಯೋತ್ಪಾದನೆ ಮೆರೆಯುತ್ತಿದ್ದಾರೆ. ಈ ಅಸಂವಿಧಾನಕ ವಿಧಾನವನ್ನು ಪ್ರಶ್ನಿಸಿದರೆ ಕಲಾವಿದರು, ಸಾಹಿತಿಗಳು, ಹೋರಾಟಗಾರನ್ನು ದೇಶದ್ರೋಹದ ಮೇಲೆ ಜೈಲಿಗೆ ಹಾಕ್ತಿದ್ದಾರೆ. ಫ್ರೀಡಂ ಆಫ್ ಸ್ಪೀಕ್ ಅಂಡ್ ಎಕ್ಸ್ರೆಷನ್ ಇನ್ಕೂಡ್ಲ್ ಫ್ರೀಡಂ ಆಫ್ ಡಿಸೆಂಟ್, ಕ್ವಷ್ಟನ್ ದಿ ಟ್ರೆಡಿಷನ್ ಎಂದು ನಾನು ಬಹು ಹಿಂದೆಯೇ ತೀರ್ಪೊಂದರಲ್ಲಿ ಬರೆದಿದ್ದೆ. ಆದ್ರೆ ಇವತ್ತು ಡಿಸೆಂಟಿಂಗ್ ವಾಯ್ಸ್ ಅಂದ್ರೆ ಜೈಲಿಗೆ ಹಾಕ್ತಾರೆ. ಎನ್ಕೌಂಟರ್ ಹೆಸರಲ್ಲಿ ಸಾಯಿಸುತ್ತಾರೆ. ಕಳೆದ ನಾಲ್ಕು ವರ್ಷದಲ್ಲಿ 14 ಪತ್ರಕರನ್ನು ಕೊಲೆ ಮಾಡಿದ್ದಾರೆ. ಜೈಲಿಗೆ ಹಾಕಿದ್ದಾರೆ. ಇದು ತುರ್ತು ಪರಿಸ್ಥಿತಿ ಅಲ್ಲವೇ, ಅಷೋಷಿತ ತುರ್ತು ಪರಿಸ್ಥಿತಿಯನ್ನು ನಾವು ಎದುರಿಸುತ್ತಿದ್ದೇವೆ. ಮುಗ್ಧರನ್ನ ಸಾಯಿಸುತ್ತಿದ್ದಾರೆ. ಲಕ್ಷಗಟ್ಟಲೆ ಹಣ ಲೂಟಿ ಆಗ್ತಿದೆ. ಪುಸ್ತಕ, ಸಿನಿಮಾ ಬ್ಯಾನ್ ಮಾಡುತ್ತಾರೆ. ಇತಿಹಾಸದ ಉದ್ದಕ್ಕೂ ನಡೆದಿವೆ. ಅಂಬೇಡ್ಕರ್ ಹೇಳುತ್ತಾರೆ, ಇತಿಹಾಸವನ್ನು ಅರಿಯದವರು ಇತಿಹಾಸವನ್ನು ಸೃಷ್ಟಿಸಲಾರರು. ಅಧಿಕಾರದಲ್ಲಿರುವ ಜನ ಮಾನವನ ಇತಿಹಾಸವನ್ನು ಮರೆಯಬಾರದು ಎಂದು ಎಚ್ಚರಿಕೆ ಮಾತನ್ನು ಈ ಸಂದರ್ಭದಲ್ಲಿ ಹೇಳಬಯಸುತ್ತೇನೆ.

ಬಂಧುಗಳೇ, ಕ್ರೈಸ್ತರ ಮೇಲೆ ದಾಳಿ ಆಯ್ತು. ನಾವು ಯಾವ ಮಟ್ಟದಲ್ಲಿ ಪ್ರತಿಕ್ರಿಯಿಸಬೇಕೋ ಹಾಗೆ ಮಾಡಿಲಿಲ್ಲ. ಮುಸ್ಲೀಮರ ಮೇಲೆ ದಾಳಿ ಆದಾಗ ಸುಮ್ಮನಿದ್ವಿ. ದಲಿತರ ಮೇಲೆ ದಾಳಿ ಆದಾಗಲೂ ಹಾಗೇ ಬಿಹೇವ್ ಮಾಡಿದ್ವಿ. ಈಗ ಸಂವಿಧಾನದ ಮೇಲೆಯೇ ದಾಳಿ ಆಗುತ್ತಿದೆ. ಪಶ್ಚಿಮ ಬಂಗಾಳದ ಸಚಿವ ನನಗೆ ಕಾನ್ಸ್ಟಿಟ್ಯೂಷನ್ ಹಾಗೂ ಕುರಾನ್ ನಡುವೆ ಆಯ್ಕೆ ಬಂದಾಗ ಕುರಾನ್ ಆರಿಸಿಕೊಳ್ಳುತ್ತನೆ ಎಂದ. ಇದೇ ಪಕ್ಕದ ಜಿಲ್ಲೆಯ ಸಚಿವನೊಬ್ಬ ನಾವು ಬಂದಿದ್ದೇ ಸಂವಿಧಾನ ಬದಲಿಸೋಕೆ ಎಂದ್ರು. ದೆಹಲಿಯಲ್ಲಿ ಹಾಡುಹಗಲೇ ಸಂವಿಧಾನ ಪುಸ್ತಕ ಸುಟ್ಟರು. ನೀವು ಸಂವಿಧಾನವನ್ನು ಓದಿದ್ದೀರಾ ಎಂದು ಆ ಮಿತ್ರರನ್ನು ಕೇಳುತ್ತೇನೆ. ನೀವು ಅರ್ಥ ಮಾಡಿಕೊಂಡಿದ್ದೀರಾ. ವಿರೋಧಬಾಸದ ವಿಚಾರ ಇದ್ರೂ ಪುಸ್ತಕ ಸುಡೋದು ನಮ್ಮ ಸಂಸ್ಕೃತಿ ಇಲ್ಲ. ಜಸ್ಟಿಸ್ ಚಿನ್ನಪ್ಪ ರೆಡ್ಡಿ ಅವರು ಒಂದು ತೀರ್ಪು ಹೀಗೆ ಬರೆದಿದ್ದಾರೆ. ಅವರ್ ಡ್ರೆಡಿಷನ್, ಫಿಲಾಸಫಿ ಟೀಚ್ ಅಸ್ ಟಾಲರೆನ್ಸ್. ಅವರ್ ಕಾನ್ಸ್ಟಿಟ್ಯೂಷನ್ ಪ್ರಾಕ್ರೀಸ್ ಅಸ್ ಟಾಲರೆನ್ಸ್. ಲೆಟ್ ಅಸ್ ನಾಟ್ ಡೈಲೂಟ್ ಇಟ್ ಎಂದು ಬರೆದಿದ್ದಾರೆ. ನೀವು ಒಪ್ಪದಿರಬಹುದು. ಆದರೆ ಸುಡುವುದು ಅನಾಗರಿಕ ಪ್ರವೃತ್ತಿ. ಕಿತ್ತುಹಾಕುತ್ತೇವೆ ಎನ್ನುತ್ತಾರೆ. ಕಿತ್ತು ಹಾಕಿ, ಆದರೆ ಪರ್ಯಾಯ ಏನು ಕೊಟ್ಟಿದ್ದೀರಿ. ಉದ್ಯೋಗ, ವಸತಿ, ಆರೋಗ್ಯ, ಮೂಲಭೂತ ಹಕ್ಕನ್ನು ಮಾಡಿ ಪರ್ಯಾಯ ಕೊಡಿ ಸ್ವಾಮಿ, ಚರ್ಚೆ ಮಾಡೋಣ. ಸುಡ್ತೀವಿ ಅಂದ್ರೆ ಉದ್ದೇಶ ಏನು. ದೇಶದಲ್ಲಿ ಅರಾಜಕತೆಯನ್ನು ಹುಟ್ಟುಹಾಕುವ ಪ್ರಯತ್ನ ಇದು. ಅರಾಜಕತೆ ಆದರೆ ನಾನು ಸಂವಿಧಾನವನ್ನು, ಜಾತ್ಯತೀತತೆಯನ್ನು ಕಳೆದುಕೊಳ್ಳುತ್ತೇವೆ. ಸಾಮಾಜಿಕ ನ್ಯಾಯ ಕಳೆದುಕೊಳ್ಳುತ್ತೇವೆ. ಕೋಮುವಾದ, ಮೂಲಭೂತ ವಾದ ರಾರಾಜಿಸುತ್ತೆ. ಬಾಯಿಗೆ ಬೀಗ ಹಾಕಿ ಗುಮಾರಂತೆ ಬಾಳುವ ಪರಿಸ್ಥಿತಿ ಉದ್ಭವಿಸುತ್ತೆ. ಅದು ನಿಮ್ಮ ಉದ್ದೇಶವೇ.

ಸ್ನೇಹಿತರೆ, ನಮ್ಮ ಮೇಲೆ ದೊಡ್ಡ ಜವಾಬ್ದಾರಿ ಇದೆ. ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ನಮ್ಮ ದನಿಯನ್ನು ಒಗ್ಗೂಡಿಸಬೇಕಾಗಿದೆ.

ಇದು  ಸಂದರ್ಭ. ನಾವು ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮರೆತು, ವೈಯಕ್ತಿಕ ಹಿತಗಳನ್ನು ಮರೆತು ಒಗ್ಗಟ್ಟಿನಿಂದ ನಿಂತರೆ ಮಾತ್ರ ಇಂತಹ ದನಿಗಳನ್ನು ಹಿಮ್ಮೆಟ್ಟಿಸಲು ಸಾಧ್ಯ.


Spread the love