ಕ್ರೀಡೆಯಿಂದ ವಿದ್ಯಾರ್ಥಿಗಳಲ್ಲಿ ಆರೋಗ್ಯ ವೃದ್ದಿಯೊಂದಿಗೆ ಸಾಮರಸ್ಯ ಬೆಸೆಯಲು ದಾರಿ; ಡಾ|ಮೋಹನ್ ಆಳ್ವಾ

Spread the love

ಕ್ರೀಡೆಯಿಂದ ವಿದ್ಯಾರ್ಥಿಗಳಲ್ಲಿ ಆರೋಗ್ಯ ವೃದ್ದಿಯೊಂದಿಗೆ ಸಾಮರಸ್ಯ ಬೆಸೆಯಲು ದಾರಿ; ಡಾ|ಮೋಹನ್ ಆಳ್ವಾ

ಉಡುಪಿ: ಕ್ರೀಡೆ ವಿದ್ಯಾರ್ಥಿಗಳಲ್ಲಿ ಆರೋಗ್ಯ ವೃದ್ದಿಯೊಂದಿಗೆ ಸಾಮರಸ್ಯ ಬೆಸೆಯಲು ದಾರಿ ಮಾಡಿಕೊಡುತ್ತದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಇದರ ಅಧ್ಯಕ್ಷರಾದ ಡಾ| ಎಮ್ ಮೋಹನ್ ಆಳ್ವಾ ಹೇಳಿದರು. ಅವರು ಗುರುವಾರ ಶಿರ್ವ ಡೊನ್ ಬೊಸ್ಕೊ ಸಿಬಿಎಸ್‍ಸಿ ವಿದ್ಯಾಸಂಸ್ಥೆಯ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.

ಇಂದು ವಿದ್ಯಾರ್ಥಿಗಳು ತಂತ್ರಜ್ಞಾನಕ್ಕೆ ಅನುಗುಣವಾಗಿ ಸವಾಲುಗಳನ್ನು ಸಹ ಎದುರಿಸಬೇಕಾಗಿದೆ. ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಬದಲಾಗುತ್ತಿದ್ದು ಅದಕ್ಕೆ ಸಮಾನದ ಶಿಕ್ಷಣವನ್ನು ಪಡೆಯುವತ್ತ ವಿದ್ಯಾರ್ಥಿಗಳು ಗಮನ ಹರಿಸಬೇಕು. ಕ್ರೀಡೆಯಿಂದ ಆರೋಗ್ಯ ವೃದ್ಧಿಯ ಜೊತೆಯಲ್ಲಿ ತಾವೆಲ್ಲಾ ಒಂದೆ ಎಂಬ ಭಾವನೆಯನ್ನು ಕ್ರೀಡೆ ಮೂಡಿಸಲು ಸಹಕಾರಿಯಾಗುತ್ತದೆ. ಈ ಮೂಲಕ ಪರಸ್ಪರ ಸೌಸಹಾರ್ದಯುತ ಸಮಾಜ ನಿರ್ಮಾಣಕ್ಕೆ ಸಹಕಾರವಾಗುತ್ತದೆ. ವಿದ್ಯಾರ್ಥಿಗಳು ಕ್ರೀಡೆಯಲ್ಲಿನ ಸೋಲು ಮತ್ತು ಗೆಲುವನ್ನು ಕ್ರೀಡಾ ಮನೋಭಾವದಿಂದ ತೆಗೆದುಕೊಂಡಾಗ ಆತನು ಸಮಾಜದಲ್ಲಿ ಒರ್ವ ಉತ್ತಮ ವ್ಯಕ್ತಿಯಾಗಿ ಬೆಳೆಯಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿರ್ವ ಸೈಂಟ್ ಮೇರಿಸ್ ಶಿಕ್ಷಣ ಸಂಸ್ಥೆಗಳು ಮತ್ತು ಡೋನ್ ಬೊಸ್ಕೊ ವಿದ್ಯಾ ಸಂಸ್ಥೆಗಳ ಸಂಚಾಲಕರಾದ ವಂದನೀಯ ಡೆನಿಸ್ ಡೆಸ ವಹಿಸಿದ್ದು ವಿದ್ಯಾರ್ಥಿಗಳು ಕ್ರೀಡಾ ಮನೋಭಾವದಿಂದ ಸ್ಪರ್ಧೆಗಳಲ್ಲಿ ಭಾಗವಹಿಸುವುದರೊಂದಿಗೆ ಯಾವುದೇ ಕಾರಣಕ್ಕೂ ಕ್ರೀಡೆಯನ್ನು ನಕಾರತ್ಮಕವಾಗಿ ತೆಗೆದುಕೊಳ್ಳದೆ ಸಕಾರಾತ್ಮಕವಾಗಿ ಸ್ವೀಕರಿಸಿ ಜೀವನದಲ್ಲಿ ಯಶಸ್ಸು ಕಾಣಬೇಕು ಎಂದರು.

ಕ್ರೀಡೆಯಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸಾಧನೆ ತೋರಿದ ಶಾಲೆಯ ಕ್ರೀಡಾಳುಗಳಾದ ಚೈತ್ರಾ ಶೆಣೈ, ಅಲಿಶಾ, ಫರೀಝಾ, ಸಿಮೋನಾ ಮತ್ತು ಝಫೀರ್ ಅವರು ಕ್ರೀಡಾಜ್ಯೋತಿಯನ್ನು ಮೆರವಣಿಗೆಯಲ್ಲಿ ತಂದು ಬೆಳಗಿಸಲಾಯಿತು.

ವೇದಿಕೆಯಲ್ಲಿ ಶಿರ್ವ ಚರ್ಚಿನ ಸಹಾಯಕ ಧರ್ಮಗುರು ವಂ ಅಶ್ವಿನ್ ಆರಾನ್ಹಾ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ವಿಲ್ಸನ್ ಡಿಸೋಜಾ, ಕಾರ್ಯದರ್ಶಿ ಲೀನಾ ಮಚಾದೊ, ಆಯೋಗಗಳ ಸಂಚಾಲಕ ಮೆಲ್ವಿನ್ ಆರಾನ್ಹಾ ಉಪಸ್ಥಿತರಿದ್ದರು.

ಶಾಲೆಯ ಪ್ರಾಂಶುಪಾಲರಾದ ವಂ ಮಹೇಶ್ ಡಿಸೋಜಾ ಸ್ವಾಗತಿಸಿ, ಶಿಕ್ಷಕಿ ಸಿಂತಿಯ ಪಿರೇರಾ ವಂದಿಸಿದರು.


Spread the love