ಕ್ರೈಸ್ತ ಯುವಜನತೆ ಅಸಮಾನತೆಯ ವಿರುದ್ದ ದನಿ ಎತ್ತುವ ಗುಣ ಬೆಳೆಸಿಕೊಳ್ಳಿ; ಡಾ|ವಿನ್ಸೆಂಟ್ ಆಳ್ವಾ

Spread the love

ಕ್ರೈಸ್ತ ಯುವಜನತೆ ಅಸಮಾನತೆಯ ವಿರುದ್ದ ದನಿ ಎತ್ತುವ ಗುಣ ಬೆಳೆಸಿಕೊಳ್ಳಿ; ಡಾ|ವಿನ್ಸೆಂಟ್ ಆಳ್ವಾ

ಉಡುಪಿ: ಭಾರತೀಯ ಕೆಥೊಲಿಕ್ ಯುವ ಸಂಚಾಲನ ಉಡುಪಿ ವಲಯ ಇದರ ವಲಯ ಸಮಾವೇಶ ಉದ್ಯಾವರ ಘಟಕದ ಆಶ್ರಯದಲ್ಲಿ ಭಾನುವಾರ ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ಚರ್ಚಿನ ಸಭಾಂಗಣದಲ್ಲಿ ಜರುಗಿತು.

ಸಮಾವೇಶವನ್ನು ಸಂತ ಫ್ರಾನ್ಸಿಸ್ ಝೇವಿಯರ್ ಚರ್ಚಿನ ಪ್ರಧಾನ ಧರ್ಮಗುರು ವಂ. ಸ್ಟ್ಯಾನಿ ಬಿ ಲೋಬೊ ಅವರು ಉದ್ಘಾಟಿಸಿ ಯುವ ಜನತೆ ತಮಗೆ ಲಭಿಸಿದ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವುದರ ಜೊತೆಗೆ ಸಮಾಜದಲ್ಲಿ ಅಭಿವೃದ್ಧಿಮಯನ್ನು ಹೊಂದಬೇಕು ಎಂದು ಕರೆ ನೀಡಿದರು.

ಉದ್ಘಾಟನಾ ಕಾರ್ಯಕ್ರಮದ ಬಳಿಕ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು ಇದರ ಪ್ರಾಂಶುಪಾಲರಾದ ಡಾ|ವಿನ್ಸೆಂಟ್ ಆಳ್ವಾ ಅವರು ಕ್ರೈಸ್ತರ ನಾಯಕತ್ವದ ಕುರಿತು ಯುವಜನರಿಗೆ ಉದ್ದೇಶಿಸಿ ವಿಚಾರವನ್ನು ಮಂಡಿಸಿ ಕ್ರೈಸ್ತ ಯುವ ಜನತೆ ಸಮಾಜದಲ್ಲಿ ಪ್ರಸ್ತುತ ನಡೆಯುತ್ತಿರುವ ಪ್ರಚಲಿತ ವಿದ್ಯಮಾನಗಳನ್ನು ಗಂಭೀರವಾಗಿ ಪರಿಗಣಿಸಿ ಅಸಮಾನತೆಯ ವಿರುದ್ದ ದನಿ ಎತ್ತುವ ಕೆಲಸ ಮಾಡುವಂತ ಗುಣ ಬೆಳೆಸಿಕೊಳ್ಳಬೇಕು ಅದರೊಂದಿಗೆ ಭಾರತವನ್ನು ಒಂದು ಜಾತ್ಯಾತೀತ ಮತ್ತು ಸುರಕ್ಷಿತ ರಾಷ್ಟ್ರವಾಗಿ ಕಟ್ಟುವಲ್ಲಿ ತಮ್ಮ ಕೊಡುಗೆ ನೀಡಬೇಕು ಎಂದರು.

ಭೋಜನ ವಿರಾಮದ ಬಳಿಕ ಉಡುಪಿ ವಲಯದ 9 ಘಟಕಗಳ ಯುವಜನರು ವಿವಿಧ ವಿಷಯಗಳನ್ನು ಆಧರಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.

ಸಂಜೆ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಉದ್ಯಾವರ ಘಟಕವು ಸಾಂಸ್ಕೃತಿಕ ಕಾರ್ಯಕ್ರಮದ ವಿಜೇತ ತಂಡವಾದರೆ ಕಟಪಾಡಿ ಘಟಕ ಪ್ರಥಮ ರನ್ನರ್ ಅಪ್ ಮತ್ತು ಮೂಡುಬೆಳ್ಳೆ ಘಟಕ ದ್ವಿತೀಯ ರನ್ನರ್ ಅಪ್ ಘಟಕವಾಗಿ ಪ್ರಶಸ್ತಿಯನ್ನು ಪಡೆದರು.

ಕಾರ್ಯಕ್ರಮದಲ್ಲಿ ಐಸಿವೈಎಮ್ ಉಡುಪಿ ಧರ್ಮಪ್ರಾಂತ್ಯದ ನಿರ್ದೇಶಕರಾದ ವಂ. ಎಡ್ವಿನ್ ಡಿಸೋಜಾ, ಉಡುಪಿ ವಲಯ ಧರ್ಮಗುರು ವಂ ವಲೇರಿಯನ್ ಮೆಂಡೊನ್ಸಾ, ವಲಯ ಯುವ ನಿರ್ದೇಶಕ ವಂ ಲೋರೆನ್ಸ್ ಕುಟಿನ್ಹಾ, ಇತರ ಧರ್ಮಗುರುಗಳಾದ ವಂ ರೊಲ್ವಿನ್ ಆರಾನ್ಹಾ, ವಂ ಅನಿಲ್ ಡಿಸೋಜಾ, ವಂ ವಿಲ್ಸನ್ ಡಿಸೋಜಾ, ವಂ. ರೊನ್ಸನ್ ಡಿಸೋಜಾ, ವಂ.ವಿಜಯ್ ಡಿಸೋಜಾ, ಉಡುಪಿ ಧರ್ಮಪ್ರಾಂತ್ಯದ ಐಸಿವೈಎಮ್ ಅಧ್ಯಕ್ಷ ಡಿಯೋನ್ ಡಿಸೋಜಾ, ಉದ್ಯಾವರ ಘಟನದ ಸಲಹೆಗಾರ ರಿತೇಶ್ ಡಿಸೋಜಾ, ಉದ್ಯಾವರ ಚರ್ಚ್ ಪಾಲನಾ ಸಮಿತಿ ಕಾರ್ಯದರ್ಶಿ ಮೈಕಲ್ ಡಿಸೋಜಾ, ವಲಯ ಅಧ್ಯಕ್ಷ ವಿಲ್ಟನ್ ಡಿಸೋಜಾ, ಕಾರ್ಯದರ್ಶಿ ಫಿಯೋನಾ ಡಿಸೋಜಾ, ಘಟಕದ ಅಧ್ಯಕ್ಷರಾದ ಡೆಲನ್ ಆರೋಜಾ, ಕಾರ್ಯದರ್ಶಿ ಮೆಲಿಸಾ ದಾಂತಿ, ದಾನಿಗಳಾದ ರಾಜೇಶ್ ಫೆರ್ನಾಂಡಿಸ್, ಎರಿಕ್ ಮಿನೇಜಸ್, ಉಪಸ್ಥಿತರಿದ್ದರು.

ದಿನವಿಡೀ ನಡೆದ ಯುವ ಸಮಾವೇಶದಲ್ಲಿ ಉಡುಪಿ ವಲಯದ 211 ಮಂದಿ ಯುವ ಜನರು ಸಕ್ರಿಯವಾಗಿ ಪಾಲ್ಗೋಂಡರು.


Spread the love