ಖಾಸಗಿ ಬಸ್ಸಿನ ಓವರ್ ಟೇಕ್ ಧಾವಂತಕ್ಕೆ ಫುಡ್ ಡೆಲಿವರಿ ಯುವಕ ಮೃತ್ಯು

Spread the love

ಖಾಸಗಿ ಬಸ್ಸಿನ ಓವರ್ ಟೇಕ್ ಧಾವಂತಕ್ಕೆ ಫುಡ್ ಡೆಲಿವರಿ ಯುವಕ ಮೃತ್ಯು

ಮಂಗಳೂರು: ಬಸ್ಸು ಮತ್ತು ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ವಿದ್ಯಾರ್ಥಿಯೋರ್ವ ದಾರುಣವಾಗಿ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ನಗರದ ಕಂಕನಾಡಿ ಸಮೀಪ ನಡೆದಿದೆ.

ಮೃತ ವ್ಯಕ್ತಿಯನ್ನು ಕಕ್ಕಿಂಜೆ ಸಮೀಪದ ಚಾರ್ಮಾಡಿ ಜಲಾಲಿಯಾ ನಗರದ ನಿವಾಸಿ ವಹೀದಾ ಅವರ ಮಗ ಸಿನಾನ್ (21) ಎಂದು ಗುರುತಿಸಲಾಗಿದೆ. ಈತ ಮಂಗಳೂರಿನ ಯೆನಪೋಯ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದ ಎನ್ನಲಾಗಿದೆ.

ಮಾಹಿತಿಗಳ ಪ್ರಕಾರ ಸಿನಾನ್ ಪಾರ್ಟ್ ಟೈಮ್ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದು ಶುಕ್ರವಾರ ರಾತ್ರಿ ವೇಳೆ ಫುಡ್ ಡೆಲಿವರಿ ಮಾಡುತ್ತಿದ್ದಾಗ ಖಾಸಗಿ ಬಸ್ಸೊಂದು ಬೈಕನ್ನು ಓವರ್ ಟೇಕ್ ಮಾಡುವ ಸಮಯದಲ್ಲಿ ಬೈಕಿನ ಹಾಂಡಲ್ ಬಾರ್ ಗೆ ಡಿಕ್ಕಿ ಹೊಡೆದಿದ್ದು ಪರಿಣಾಮ ಸಿನಾನ್ ಬಸ್ಸಿನಡಿಗೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮೃತ ಸಿನಾನ್ ಬಡ ಕುಟುಂಬದವನಾಗಿದ್ದು ತನ್ನ ಕುಟುಂಬಕ್ಕೆ ಏಕೈಕ ಆಧಾರಸ್ತಂಭವಾಗಿದ್ದ ಮತ್ತು ತನ್ನ ವಿದ್ಯಾಭ್ಯಾಸದ ಖರ್ಚನ್ನು ಫುಡ್ ಡೆಲಿವರಿ ಮಾಡಿ ನಿಭಾಯಿಸುತ್ತಿದ್ದರು.

ಮೃತ ಸಿನಾನ್ ತಂದೆ ತಾಯಿ, ತಮ್ಮ, ತಂಗಿಯನ್ನು ಅಗಲಿದ್ದಾರೆ.


Spread the love