ಖಾಸಗಿ ವಾಹಿನಿ ವಿಡಿಯೋ ಜರ್ನಲಿಸ್ಟ್ ನಾಗೇಶ್ ಪಡು ಕುಟುಂಬಕ್ಕೆ 5 ಲಕ್ಷ ನೆರವು – ಯೆಡಿಯೂರಪ್ಪ

ಖಾಸಗಿ ವಾಹಿನಿ ವಿಡಿಯೋ ಜರ್ನಲಿಸ್ಟ್ ನಾಗೇಶ್ ಪಡು ಕುಟುಂಬಕ್ಕೆ 5 ಲಕ್ಷ ನೆರವು – ಯೆಡಿಯೂರಪ್ಪ

ಮಂಗಳೂರು : ಡೆಂಗೀ ಜ್ವರದಿಂದ ಸಾವನ್ನಪ್ಪಿರುವ ಖಾಸಗಿ ವಾಹಿನಿ ವಿಡಿಯೋ ಜರ್ನಲಿಸ್ಟ್ ನಾಗೇಶ್ ಪಡು ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅವರು ರಾಜ್ಯದ ಮುಖ್ಯಮಂತ್ರಿ ಬಿ ಯಸ್ ಯೆಡಿಯೂರಪ್ಪ ನವರಿಗೆ ಧರ್ಮಸ್ಥಳದಲ್ಲಿ ಮನವಿ ಸಲ್ಲಿಸಿದ್ದರು .

ತಕ್ಷಣವೇ ಸ್ಪಂದಿಸಿದ ಮುಖ್ಯಮಂತ್ರಿ ಬಿ ಯಸ್ ಯೆಡಿಯೂರಪ್ಪ ನವರು ರಾಜ್ಯ ಸರಕಾರದ ವತಿಯಿಂದ ನಾಗೇಶ್ ಪಡು ಕುಟುಂಬಕ್ಕೆ 5 ಲಕ್ಷ ರುಪಾಯೀ ಆರ್ಥಿಕ ನೆರವು ಘೋಷಿಸಿದರು .

ಈ ವೇಳೆ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಬಿಜೆಪಿ ರಾಜ್ಯ ಕಾರ್ಯಕಾರಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು ಉಪಸ್ಥಿತರಿದ್ದರು .