ಖ್ಯಾತ ಸಿವಿಲ್ ಇಂಜೀನಿಯರವರಾದ ಸುರೇಶ್ ಮಲ್ಯ ನಿಧನ
ಮಂಗಳೂರು: ನಗರದ ಖ್ಯಾತ ಸಿವಿಲ್ ಇಂಜೀನಿಯರವರಾದ ಸುರೇಶ್ ಮಲ್ಯ(63) ರವರು ತಾ:08.01.2019ರಂದು ಹೃದಯಾಘಾತದಿಂದ ತಮ್ಮ ಸ್ವಗೃಹದಲ್ಲಿ ನಿಧನರಾದರು. ವೃತ್ತಿಯಲ್ಲಿ ಇಂಜೀನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರೂ. ಪೃವೃತ್ತಿಯಲ್ಲಿ ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ತಜ್ಞರಾಗಿ ಪರಿಣಿತರಾಗಿದ್ದರು.
ಬೆಸೆಂಟ್ ಶಿಕ್ಷಣ ಸಮೂಹ ಸಂಸ್ಥೆಗಳ ಹಾಗೂ ರಾಮಕೃಷ್ಣ ಟೆನ್ನಿಸ್ ಕ್ಲಬ್ ನ ಆಡಳಿತ ಮಂಡಳಿಯ ಗೌರವ ಸದಸ್ಯರಾಗಿ ಕಾರ್ಯ ನಿರ್ವಹಿಸಿ ಶಿಕ್ಷಣ ಮತ್ತು ಕ್ರೀಡಾ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡಿ ಸರ್ವತೋಮುಖ ಅಭಿವೃದ್ಧಿಗಾಗಿ ನಿಸ್ವಾರ್ಥ ಮತ್ತು ಪ್ರಾಮಾಣಿಕವಾಗಿ ಶ್ರಮಿಸಿದ್ದರು.
ಅವರ ಗೌರವಾರ್ಥ ಎರಡೂ ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿಗಳು ಜತೆಗೂಡಿ ಸಂಸ್ಥೆಯಲ್ಲಿ ಶೋಕಾಚರಣೆಯನ್ನು ಆಚರಿಸಲಾಯಿತು.
ನಗರದ ಗಣ್ಯರು, ಉದ್ಯಮಿಗಳು, ಬಂಧುಗಳು, ಮಿತ್ರರು, ಅಭಿಮಾನಿಗಳು ಅವರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದು ಸಂತಾಪ ವ್ಯಕ್ತಪಡಿಸಿದರು. ಮೃತರು ಪತ್ನಿ, ಪುತ್ರಿ ಇಬ್ಬರು ಸಹೋದರರು ಮೂವರು ಸಹೋದರಿಯರು ಮತ್ತು ಅಪಾರ ಬಂಧು, ಮಿತ್ರ, ಅಭಿಮಾನಿಗಳನ್ನು ಅಗಲಿದ್ದಾರೆ.
 
            
