ಗಣಿ ಮಾಲಿಕನ ಕೊಲೆ ಯತ್ನ; ರೌಡಿ ಬ್ಲೇಡ್ ಸಾದಿಕ್ ಬಂಧನ

Spread the love

ಗಣಿ ಮಾಲಿಕನ ಕೊಲೆ ಯತ್ನ; ರೌಡಿ ಬ್ಲೇಡ್ ಸಾದಿಕ್ ಬಂಧನ

ಪುತ್ತೂರು: ಕಾರಿನಲ್ಲಿ ಬಂದ ರೌಡಿ ತಂಡದಿಂದ  ಕೃತ್ಯ ಕಲ್ಲಂದಡ್ಕ ಕೋರೆ ಮಾಲಿಕ ಖಾದರ್ ಮೇಲೆ ಧಾಳಿ ನಡೆಸಿದ ಘಟನೆ ಪುತ್ತೂರು ಠಾಣಾ ವ್ಯಾಪ್ತಿಯ ಕಬಕದಲ್ಲಿ ನಡೆದಿದೆ.

ಕಲ್ಲಂದಡ್ಕ ಕೋರೆ ಮಾಲಿಕ ಖಾದರ್ ಮೇಲೆ ವಿಟ್ಲದ ರೌಡಿ ಬ್ಲೇಡ್ ಸಾದಿಕ್ ತಂಡ ಐ20 ಕಾರಿನಲ್ಲಿ ಬಂದು ಧಾಳಿ ನಡೆಸಿದ್ದು, ಬ್ಲೇಡ್ ಸಾಧಿಕ್ ಎಂಬಾತನನ್ನು ಪುತ್ತೂರು ನಗರ ಠಾಣೆಯ ಪೋಲಿಸರು ಬಂಧಿದ್ದಾರೆ. ಗಾಯಾಳು ಖಾದರ್ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ತಲೆ ಮತ್ತು ಕೈಗೆ ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಬುಧವಾರ ಮಧ್ಯಾಹ್ನ ಸುಮಾರು ಒಂದು ಗಂಟೆ ಸುಮಾರಿಗೆ ಕಬಕದ ಮೊಬೈಲ್ ಅಂಗಡಿಯಲ್ಲಿ ಕುಳಿತಿದ್ದ ಸಂದರ್ಭದಲ್ಲಿ ಘಟನೆ ನಡೆದಿದ್ದು, ಕಾರಿನಲ್ಲಿ ಬಂದ ನಾಲ್ಕು ಮಂಧಿಯ ತಂಡ ಏಕಾಏಕಿ ಹಲ್ಲೆ ನಡೆಸಿದೆ.

ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

 


Spread the love