ಗರೋಡಿ ಕ್ಷೇತ್ರದಲ್ಲಿ ಹೈಮಾಸ್ಟ್ ದೀಪ ಉದ್ಘಾಟನೆ 

Spread the love

ಗರೋಡಿ ಕ್ಷೇತ್ರದಲ್ಲಿ ಹೈಮಾಸ್ಟ್ ದೀಪ ಉದ್ಘಾಟನೆ 

ಕಂಕನಾಡಿ ಗರೋಡಿ ಬ್ರಹ್ಮ ಬೈದರ್ಕಳ ಕ್ಷೇತ್ರದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಹೈಮಾಸ್ಟ್ ದೀಪವನ್ನು ಮಂಗಳೂರು ದಕ್ಷಿಣ ಶಾಸಕ ಶ್ರೀ.ಜೆ.ಆರ್.ಲೋಬೋರವರು ಉದ್ಘಾಟಿಸಿದರು.

ಹೈಮಾಸ್ಟ್ ದೀಪವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ದಕ್ಷಿಣ ಶಾಸಕ ಶ್ರೀ.ಜೆ.ಆರ್.ಲೋಬೋರವರು, ಗರೋಡಿ ಶ್ರೀ. ಬೃಹ್ಮ ಬೈದರ್ಕಳ ಕ್ಷೇತ್ರವು ಕೇವಲ ಮಂಗಳೂರಿಗೆ ಮಾತ್ರವಲ್ಲದೇ, ಇಡೀ ಜಿಲ್ಲೆಗೆ ಪ್ರಸಿದ್ಧವಾಗಿರುವ ಪ್ರಾರ್ಥನೆ ಮಂದಿರ. ಈ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಈ ಒಂದು ಹೈಮಾಸ್ಟ್ ದೀಪವು ಅಗತ್ಯವಾದುದರಿಂದ ಇದಕ್ಕೆ ಸಹಕರಿಸಿದ ಸ್ಥಳೀಯ ಕಾರ್ಪೊರೇಟರ್ ಪ್ರವೀಣ್‍ಚಂದ್ರ ಆಳ್ವರಿಗೆ ಅಭಿನಂದಿಸುತ್ತದೆ.

ಅದಲ್ಲದೇ ಕ್ಲಪ್ತ ಸಮಯದಲ್ಲು ಈ ಕ್ಷೇತ್ರದ ಮುಂಭಾಗದಲ್ಲಿ ಇಂಟರ್‍ಲಾಕ್ ವ್ಯವಸ್ಥೆ ಹಾಗೂ ಹಿಂಬದಿಯಲ್ಲಿ ಮಳೆ ನೀರು ಹರಿಯುವ ತೋಡಿನ ವ್ಯವಸ್ಥೆಯನ್ನು ಪೂರೈಸಿದ್ದಾರೆ. ದೇವರ ಕಾರ್ಯ ಮಾಡುವಾಗ ಯಾರೆಲ್ಲಾ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸೇವೆಯನ್ನು ಮಾಡುತ್ತಾರೋ ಅವರೆಲ್ಲರಿಗೂ ದೇವರ ಆಶಿರ್ವಾದಕ್ಕೆ ಕ್ಲಪ್ತರಾಗುತ್ತಾರೆ. ಅದಲ್ಲದೇ ಅನೇಕ ಭಕ್ತಾದಿಗಳು ಈ ಕ್ಷೇತ್ರಕ್ಕೆ ದೇಣಿಗೆ ಕೊಟ್ಟಿರುತ್ತಾರೆ. ಅವರೆಲ್ಲರಿಗೂ ದೇವರು ಸುಖ, ಶಾಂತಿ, ಒಳ್ಳೆಯ ಆರೋಗ್ಯವನ್ನು ಕೊಡಲಿ. ಈ ಕ್ಷೇತ್ರದ ಉತ್ಸವವು ಯಾವುದೇ ವಿಘ್ನ ಇಲ್ಲದೇ ಒಂದು ದೊಡ್ಡ ಉತ್ಸವವಾಗಿ ಮೂಡಿ ಬರಲಿ ಎಂದರು. ಈ ಸಂದರ್ಭದಲ್ಲಿ ಕಾಪೋರೇಟರ್ ಪ್ರವೀಣ್‍ಚಂದ್ರ ಆಳ್ವ, ಗರೋಡಿಯ ಅಧ್ಯಕ್ಷ ಚಿತ್ತರಂಜನ್ ದೇವೆಂದ್ರ, ಲೋಕನಾಥ್ ಹೇಮಂತ್ ಕುಮಾರ್, ನಾಗೇಶ್ ಸಾಲಿಯಾನ್, ಕೇಶವ ಅಂಗಡಿಮಾರ್ ಮೊದಲಾದವರು ಉಪಸ್ಥಿತರಿದ್ದರು.


Spread the love