ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರ ಬಂಧನ

Spread the love

ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರ ಬಂಧನ

ಮಂಗಳೂರು: ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಉಪ್ಪಿನಂಗಡಿ ಪೋಲಿಸರು ಬಂಧಿಸಿದ್ದಾರೆ.

ಬಂಧಿತರನ್ನು ಬಂಟ್ವಾಳ ಸಾಲೆತ್ತೂರು ನಿವಾಸಿ ಅಬೂಬಕ್ಕರ್ ಸಿದ್ದಿಕ್ (30), ಬೋಳಂತೂರು ನಿವಾಸಿ ಮಹಮ್ಮದ್ ರಫೀಕ್ (32), ಕುಕ್ಕಿನಡ್ಕ ನಿವಾಸಿ ಅಜೀದ್ (33) ಎಂದು ಗುರುತಿಸಲಾಗಿದೆ.

ಅಕ್ಟೋಬರ್ 11 ರಂದು   ವಿಟ್ಲ ಕಡೆಯಿಂದ ಉಪ್ಪಿನಂಗಡಿಯ ಸಾರ್ವಜನಿಕರಿಗೆ ಹಾಗೂ  ಕಾಲೇಜಿನ ಮಕ್ಕಳಿಗೆ ಒಂದು ಆಟೋರಿಕ್ಷಾ ಮತ್ತು ಮೋಟಾರು ಸೈಕಲ್ ನಲ್ಲಿ ಮೂವರು  ವ್ಯಕ್ತಿಗಳು ಗಾಂಜಾ ಮಾರಾಟ ಮಾಡುವರೇ ಗಾಂಜಾ ತೆಗೆದುಕೊಂಡು ಬರುತ್ತಿದ್ದಾರೆ ಎಂಬುದಾಗಿ ಬಾತ್ಮೀದಾರರಿಂದ ಖಚಿತ ಮಾಹಿತಿ ಬಂದ ಮೇರೆಗೆ  ಉಪ್ಪಿನಂಗಡಿ ಪೊಲೀಸ್ ಠಾಣಾ ಪಿಎಸ್‌‌‌ಐ ನಂದಕುಮಾರ್‌ ಹಾಗೂ ಠಾಣಾ ಸಿಬ್ಬಂಧಿಗಳು  ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ  ಉಪ್ಪಿನಂಗಡಿ ಪದವಿ ಪೂರ್ವ ಕಾಲೇಜಿನ ಮೈದಾನದ ಎದರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸದ್ರಿ ವಾಹನಕ್ಕಾಗಿ ವಾಹನ ತಪಾಸಣೆ ಮಾಡುತ್ತಿರುವಾಗ ಮದ್ಯಾಹ್ನ 2-30 ಗಂಟೆಗೆ ಮಂಗಳೂರು ಕಡೆಯಿಂದ ನೆಲ್ಯಾಡಿ ಕಡೆಗೆ ಬರುತ್ತಿದ್ದ ಆಟೋರಿಕ್ಷಾ ನಂಬ್ರ ಕೆಎ-19-ಡಿ-7938 ಮೋಟಾರು ಸೈಕಲ್ ಹಾಗೂ ನಂಬ್ರ ಕೆಎ-21-ಆರ್-9236ನೇ ದನ್ನು  ಪುತ್ತೂರು ತಾಲೂಕು ದಂಡಾಧಿಕಾರಿ ಶಿವಶಂಕರ್‌‌ ರವರು ಹಾಗೂ ಪಂಚರುಗಳ ಸಮಕ್ಷಮ ನಿಲ್ಲಿಸಿ  ತಪಾಸಣೆ ನಡೆಸಲಾಗಿ, ಅಟೋ ರಿಕ್ಷಾ ಹಾಗೂ  ಮೋಟಾರು ಸೈಕಲ್‌ ನಲ್ಲಿ  ಗಾಂಜಾ ವನ್ನು ವಶದಲ್ಲಿಟ್ಟುಕೊಂಡು ಬರುತ್ತಿದ್ದ ಮೂವರು ಆರೋಫಿಗಳನ್ನು  ದಸ್ತಗಿರಿ ಮಾಡಿ,  ಅವರ ವಶದಲ್ಲಿದ್ದ ಒಟ್ಟು 4.100 ಕೆ.ಜಿ ತೂಕದ ಗಾಂಜಾವನ್ನು  ಸ್ವಾಧೀನಪಡಿಸಿಕೊಂಡಿದ್ದು, ವಶಪಡಿಸಿಕೊಂಡ  4.100 ಕೆ.ಜಿ ತೂಕ ಗಾಂಜಾ ಹಾಗೂ 01 ಅಟೋ ರಿಕ್ಷಾ ಮತ್ತು 01 ಮೋಟಾರು ಸೈಕಲ್‌ ನ  ಒಟ್ಟು ಮೌಲ್ಯ  2,41,000.00 ರೂ ಆಗಿರುತ್ತದೆ.

ಪ್ರಕರಣದ ಪತ್ತೆ ಕಾರ್ಯದಲ್ಲಿ ದಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಡಾ| ಬಿ. ಆರ್‌. ರವೀಕಾಂತೇ ಗೌಡ, ಹೆಚ್ಚುವರಿ ಪೊಲೀಸ್ ಆಧೀಕ್ಷಕರು ಸಜೀತ್ ಹಾಗೂ ಪುತ್ತೂರು ಉಪ-ವಿಭಾಗದ ಡಿವೈಎಸ್.ಪಿ  ಶ್ರೀನಿವಾಸ್‌‌ ರವರ ಮಾರ್ಗಧರ್ಶದಲ್ಲಿ ಪುತ್ತೂರು ಗ್ರಾಮಾಂತರ  ಪೊಲೀಸ್ ವೃತ್ತ ನಿರೀಕ್ಷಕರಾದ ಗೋಪಾಲ ನಾಯ್ಕ್ ಎಂ ರವರ  ನಿರ್ದೇಶನದಂತೆ ಉಪ್ಪಿನಂಗಡಿ ಠಾಣಾ ಪಿ.ಎಸ್.ಐ ನಂದಕುಮಾರ್ ಹಾಗೂ ಸಿಬ್ಬಂಧಿಗಳಾದ ಎಎಸ್‌‌‌‌ಐ ರುಕ್ಮ ನಾಯ್ಕ್, ಹರೀಶ್ಚಂದ್ರ, ದೇವದಾಸ್‌‌, ಇರ್ಷಾದ್‌ ಪಿ, ಮನೋಹರ ಪಿ.ಸಿ, ವಿನಾಯಕ, ಜಗದೀಶ್‌, ಹಾಗೂ ಚಾಲಕರಾದ ನಾರಾಯಣ ಗೌಡ ರವರು  ಪ್ರಕರಣದ ಪತ್ತೆ ಹಚ್ಚಿರುತ್ತಾರೆ


Spread the love